ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನ ಅಂಗಳದಲ್ಲಿ ವಿಲ್ಲಾ, ವೆಜ್ಜಿಗಳಿಗೆ ಮಾತ್ರ!

By Prasad
|
Google Oneindia Kannada News

ಖಾಸಗಿ ಖಗೋಳ ಉದ್ಯಮಿ ಮತ್ತು 'ಪೇಪಾಲ್' ಸಹಸಂಸ್ಥಾಪಕ ಎಲಾನ್ ಮಸ್ಕ್ ಅವರು ಸಖತ್ ಪ್ಲಾನ್ ಹಾಕಿಕೊಂಡಿದ್ದಾರೆ. ರೆಡ್ ಪ್ಲಾನೆಟ್ ಎಂದೇ ಜನಜನಿತವಾಗಿರುವ ಮಂಗಳನ ಅಂಗಳದಲ್ಲಿ 80 ಸಾವಿರ ಖಗೋಳ ಶಾಸ್ತ್ರಜ್ಞರ ಸಂಶೋಧನೆಗೆ ಅನುಕೂಲವಾಗಲೆಂದು ಒಂದು ಸಣ್ಣ ನಗರವನ್ನು ನಿರ್ಮಿಸುವ ಬೃಹತ್ ಬ್ರಹ್ಮಾಂಡ ಯೋಜನೆಯನ್ನು ರೂಪಿಸಿದ್ದಾರೆ.

ಸುದ್ದಿ ಕೇಳಿದೊಡನೆ ನಾಮುಂದು ತಾಮುಂದು ಎಂದು ಕ್ಯೂ ಹಚ್ಚುವ ಅಗತ್ಯವಿಲ್ಲ. ಈ ಸಂಕ್ರಾಂತಿಯ ಮುಂಚೆ ಪ್ರಕಟಿಸಲಾದ ಭವಿಷ್ಯದ ಆಫರ್ ನೀಡಿರುವುದು ಪಕ್ಕಾ ಸಸ್ಯಾಹಾರಿಗಳಿಗೆ ಮಾತ್ರ. ಮಾಂಸಾಹಾರಿಗಳಾಗಿದ್ದರೆ ಕನಸು ಕಾಣುವುದನ್ನು ತಕ್ಷಣ ನಿಲ್ಲಿಸಬೇಕು. ಈ ಭವಿಷ್ಯತ್ತಿನ ಯೋಜನೆ ಸಸ್ಯಾಹಾರಿಗಳಿಗೆ ಮಾತ್ರ ಎಂದು ಮಸ್ಕ್ ಅವರು ಹೇಳಿದ್ದಾಗಿ ದಿ ಸನ್ ಪತ್ರಿಕೆ ವರದಿ ಮಾಡಿದೆ.

A villa on Mars, for veggies only

ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್‌ಗೆ ತಮ್ಮ ಫಾಲ್ಕನ್ 9 ರಾಕೆಟ್ ಮುಖಾಂತರ ನಾಸಾ ಕಾರ್ಗೋವನ್ನು ಪೂರೈಸುತ್ತಿರುವ 41 ವರ್ಷದ ಎಲಾನ್ ಮಸ್ಕ್ ಅವರು ರಾಯಲ್ ಏರೋನಾಟಿಕಲ್ ಸೊಸೈಟಿ ಜೊತೆ ಮಾತನಾಡುತ್ತ, ತಮ್ಮ 10 ವರ್ಷಗಳ ಕನಸಿನ ಬಗ್ಗೆ ಹಂಚಿಕೊಂಡಿದ್ದಾರೆ.

"ಮೊದಲಾಗಿದ್ದರೆ ಅಂತಹ ರಾಕೆಟ್ ಮತ್ತು ಮೂಲಭೂತ ಸೌಕರ್ಯಗಳು ಇರಲಿಲ್ಲ. ಮಂಗಳಕ್ಕೆ ಉಪಗ್ರಹ ಉಡಾಯಿಸುವ ಬಗ್ಗೆ ನಾಸಾಗೇ ಕಾಲಮಿತಿ ಇರಲಿಲ್ಲ. ಆದರೆ, ಈಗ ಕಾಲ ಅಂದಿನಂತಿಲ್ಲ. ನನ್ನಂತೆಯೇ ಅನೇಕ ಖಾಸಗಿ ಸಂಸ್ಥೆಗಳು ಈ ಕನಸನ್ನು ಕಂಡಿವೆ. ಈ ಕನಸು ನನಸಾಗುವುದು ದೂರವೇನಿಲ್ಲ" ಎಂದು ಸೋಲಾರ್ ಸಿಟಿಯ ಚೇರ್ಮನ್ ಆಗಿರುವ ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಖಗೋಳ ಸಂಶೋಧನೆಗೆ ಮಸ್ಕ್ ಅವರು ನೀಡಿರುವ ಕಾಣಿಕೆಯನ್ನು ಪರಿಗಣಿಸಿ 146 ವರ್ಷ ಹಳೆಯ ರಾಯಲ್ ಏರೋನಾಟಿಕಲ್ ಸಂಸ್ಥೆ, ಖಗೋಳ ಸಂಶೋಧನೆಗಾಗಿ 2002ರಲ್ಲಿ 'ಸ್ಪೇಸ್‌ಎಕ್ಸ್' ಎಂಬ ಸಂಸ್ಥೆ ಸ್ಥಾಪಿಸಿರುವ ದಕ್ಷಿಣ ಆಫ್ರಿಕಾ ಮೂಲದ ಮಸ್ಕ್ ಅವರಿಗೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಚಿನ್ನದ ಪದಕ ನೀಡಿ ಗೌರವಿಸಿತ್ತು.

ಅಮೆರಿಕಾದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮತ್ತು 1.25 ಮಿಲಿಯನ್ ಪೌಂಡ್ ಆಸ್ತಿಯ ಒಡೆಯರಾಗಿರುವ ಎಲಾನ್ ಮಸ್ಕ್ ಅವರು, ಮಂಗಳನ ಅಂಗಳದಲ್ಲಿ ಸ್ಪೇಸ್ ಸಿಟಿ ನಿರ್ಮಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಅದೆಲ್ಲ ಸರಿ, ಆದರೆ, ಈ ಕೊಡುಗೆಯನ್ನು ಸಸ್ಯಾಹಾರಿಗೆ ಮಾತ್ರ ಎಂದು ಹೇಳಿದ್ದೇಕೆಂಬುದು ಸದ್ಯಕ್ಕೆ ಚಿದಂಬರ ಪ್ರಶ್ನೆಯಾಗಿದೆ.

English summary
Private space entrepreneur and co-founder of PayPal, an internet payment system, Elon Musk (41) is planning to build a small space city on Red planet Mars for 80,000 space explorers. Wait, the super offer is available only for vegetarians!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X