ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬೌದ್ಧ ಭಿಕ್ಷು ನಿಗೂಢವಾಗಿ ಆತ್ಮಹತ್ಯೆ

By Mahesh
|
Google Oneindia Kannada News

ಚೆನ್ನೈ, ಜ.7: ಬೆಂಗಳೂರು ನಿವಾಸಿ ಬೌದ್ಧ ಭಿಕ್ಷುವೊಬ್ಬರು ಚೆನ್ನೈನ ಎಗ್ಮೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಬೌದ್ಧ ಭಿಕ್ಷುವಿನ ಹೆಸರು ಟಿ ಸ್ಟಾನ್ಜಿನ್ ನಮ್ದೊಲ್ ಅಲಿಯಾಸ್ ರತ್ನಬಾಲಾ ಎಂದು ಗುರುತಿಸಲಾಗಿದೆ. ಕಾರ್ಗಿಲ್ ಮೂಲದ ಬಾಬಾ ಬೆಂಗಳೂರಿನ ಮಹಾಬೋಧಿ ಸೊಸೈಟಿಯಿಂದ ಚೆನ್ನಿಗೆ ಬಂದಿದ್ದರು. ರತ್ನಬಾಲಾಗೆ 24 ವರ್ಷ ವಯಸ್ಸಾಗಿತ್ತು.

ಚೆನ್ನೈನಿಂದ ಬೋಧ್ ಗಯಾದಲ್ಲಿರುವ ಮಹಾಬೋಧಿ ದೇಗುಲಕ್ಕೆ ತೆರಳಬೇಕಿತ್ತು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಭಿಕ್ಷುವೊಬ್ಬರು ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇದೇ ಮೊದಲ ಸಲವಾಗಿದೆ.

ರತ್ನಬಾಲಾ ಅವರ ಕೋಣೆಯ ಬಳಿ ದೀಪ ಆರಿಸಲು ಹಿರಿಯ ಭಿಕ್ಷು ಇಬ್ಬರು ಬಂದಾಗ ರತನ್ ಬಾಬಾ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಕಂಡು ಬಂದಿದೆ.

ನೈಲಾನ್ ದಾರ ಬಳಸಿ ಕೊರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಾಗಲಿ, ಚೆನ್ನೈ ಕೇಂದ್ರದಲ್ಲಾಗಲಿ ಸೂಸೈಡ್ ನೋಟ್ ಸಿಕ್ಕಿಲ್ಲ.

ಚೆನ್ನೈಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದ ಬಾಬಾ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವುದೇಕೆ? ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಹಿರಿಯ ಭಿಕ್ಷುಗಳೊಡನೆ ಚರ್ಚೆ ನಡೆಸಿದ ನಂತರ ಕೋಲ್ಡ್ ಡ್ರಿಂಕ್ ಹಾಗೂ ಬಿಸ್ಕೇಟ್ ಸೇವಿಸಿ ತಮ್ಮ ಕೊಠಡಿಗೆ ತೆರಳಿದರು. ಯಾರೊಂದಿಗೂ ಹೆಚ್ಚು ಮಾತನಾಡಲಿಲ್ಲ.

ಶನಿವಾರ ಚೆನ್ನೈನ ಕೆನ್ನೆತ್ ಲೇನ್ ನಲ್ಲಿರುವ ಬೌದ್ಧ ಭಿಕ್ಷು ಕೇಂದ್ರಕ್ಕೆ ಬಂದಿಳಿದಿದ್ದ ರತ್ನಬಾಲಾ ಅವರು ಅದೇ ದಿನ ಮಧ್ಯಾಹ್ನ ದಿವಾಕರ್ ಎಂಬ ವ್ಯಕ್ತಿಗೆ ಕರೆ ಮಾಡಿ ಸುಮಾರು ಹೊತ್ತು ಮಾತನಾಡಿದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ದಿವಾಕರ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ರತ್ನಬಾಲಾ ಅವರ ಮೊಬೈಲ್ ನಿಂದ ಕಟ್ಟ ಕಡೆಯ ಕರೆ ದಿವಾಕರ್ ಗೆ ಹೋಗಿದೆ. ಮೆಸೇಜ್ ಬಾಕ್ಸ್ ನಲ್ಲಿ ರತ್ನಬಾಲಾ ಅವರ ಕುಟುಂಬದ ಕಡೆಯಿಂದ ನಾಲ್ಕಾರು ಸಂದೇಶ ಇರುವುದು ಪತ್ತೆಯಾಗಿದೆ. ಮನೆಗೆ ಬಾ.. ಫೋನ್ ಪಿಕ್ ಮಾಡು ಎಂಬ ಮೆಸೇಜ್ ಗಳಿದೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.

ಗಯಾಕ್ಕೆ ತೆರಳಲು ಸಂಪೂರ್ಣ ಸಿದ್ಧರಾಗಿ ಬಂದಿದ್ದರು. ಬಟ್ಟೆಬರೆ ಎಲ್ಲವೂ ಸಿದ್ಧವಾಗಿತ್ತು. ಸೋಮವಾರ ಟ್ರೈನ್ ಹತ್ತಬೇಕಿತ್ತು. ಆದರೆ, ಈ ರೀತಿ ನಿರ್ಣಯ ಕೈಗೊಂಡಿರುವುದು ದುರಂತ ಎಂದು ಬೌದ್ದ್ಧ ಕೇಂದ್ರದ ವಕ್ತಾರರು ಹೇಳಿದ್ದಾರೆ.

ಆಧ್ಯಾತ್ಮದ ಹಾದಿಯಲ್ಲಿ ನಡೆಯುವ ಭಿಕ್ಷುಗಳು ನಿರ್ವಾಣ ಮಾರ್ಗ ಹಿಡಿಯುವುದು ಮಾಮೂಲಿಯಾದರೂ ಆತ್ಮಹತ್ಯೆ ಮಾಡಿಕೊಳ್ಳುವುದು ಭಿಕ್ಷುಗಳ ಚರಿತ್ರೆಯಲ್ಲಿಲ್ಲ.

ಆದರೆ, ಐತಿಹಾಸಿಕ ಸತ್ಯ, ರಹಸ್ಯ ಮುಚ್ಚಿಡಲು ಭಿಕ್ಷುಗಳು ಅತ್ಯಂತ ಕಠಿಣ ವ್ರತ ಪಾಲಿಸುವುದು, ದೇಹತ್ಯಾಗಕ್ಕೂ ಮುಂದಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಎಗ್ಮೋರ್ ಪೊಲೀಸ್ ಅಧಿಕಾರಿಗಳು ರತ್ನಬಾಲಾ ಅವರ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಸರ್ಕಾರಿ ರಾಯಪೆಟ್ ಆಸ್ಪತ್ರೆಯಲ್ಲಿ ಬಾಬಾ ಕಳೆಬರ ಇರಿಸಲಾಗಿದೆ.

English summary
A Buddhist monk committed suicide in his room at Maha Bodhi Society, Chennai centre in Egmore on Sunday(Jan.6). He did not leave behind any note. Reason behind the suicide was not known, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X