ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಿತ ಹೇಳಿಕೆ ಸುಳಿಯಲ್ಲಿ ಮೋಹನ್ ಭಾಗವತ್

By Mahesh
|
Google Oneindia Kannada News

Mohan Bhagwat
ಇಂದೋರ್, ಜ.6 : ರೇಪ್ ಪ್ರಕರಣಗಳು ಇಂಡಿಯಾದಲ್ಲಷ್ಟೇ ನಡೆಯಲು ಸಾಧ್ಯ. ಭಾರತದಲ್ಲಿ ನಡೆಯಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರು ಭಾನುವಾರ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ.

ಮದುವೆ, ಗಂಡು ಹೆಣ್ಣು ಸಾಮರಸ್ಯದ ಬಗ್ಗೆ ಮಾತನಾಡುತ್ತಾ, ಮದುವೆ ಒಂದು ಸಾಮಾಜಿಕ ಒಪ್ಪಂದ, ಇದರಲ್ಲಿ ಮಹಿಳೆಯರು ಮನೆಯಲ್ಲಿದ್ದುಕೊಂಡು ತಮ್ಮನ್ನು ರಕ್ಷಿಸಿಕೊಳ್ಳುವುದು ಒಳ್ಳೆಯದು. ಗಂಡಂದಿರುವ ಸಂಪಾದನೆ ಮಾಡಿ ತಮ್ಮ ಹೆಂಡತಿಯರನ್ನು ಸಾಕಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಇಂದೋರ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ಮದುವೆ ಒಪ್ಪಂದದ ಪ್ರಕಾರ ನಿಯಮ ಮೀರಿದ ಮಹಿಳೆಯರನ್ನು ಅಂದರೆ ಹೊಸಿಲು ದಾಟಿದ ಪತ್ನಿಯನ್ನು ಹೊರಗಟ್ಟುವ ಅಧಿಕಾರ ಪುರುಷನಿಗೆ ಇರುತ್ತದೆ ಎಂದು ಭಾಗವತ್ ಹೇಳಿದರು.

ಇತ್ತೀಚೆಗೆ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡುತ್ತಾ, ನಗರ ಪ್ರದೇಶದಲ್ಲಿ ಹೆಚ್ಚಾಗಿರುವ ವಿದೇಶಿ ಸಂಸ್ಕೃತಿ ಅನುಕರಣೆ ಇದಕ್ಕೆಲ್ಲ ಕಾರಣ. ಗ್ರಾಮೀಣ ಪ್ರದೇಶದಲ್ಲಿ ಈ ರೀತಿ ಕೃತ್ಯಗಳು ನಡೆಯುವುದು ಕಮ್ಮಿ ಎಂದಿದ್ದರು.

ಭಾರತದ ಸಂಸ್ಕೃತಿ ಉಳಿಸಿಕೊಂಡಿರುವ ಗ್ರಾಮೀಣ ಪ್ರದೇಶದ ಮಹಿಳೆಯರ ಮೇಲೆ ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿಲ್ಲ . ರೇಪ್ ಹೆಚ್ಚಲು ನಗರ ಪ್ರದೇಶಗಳ ಮಹಿಳೆಯರ ಜೀವನ ಶೈಲಿ ಕಾರಣ . ಭಾರತೀಯ ಸಂಸ್ಕೃತಿ ಮರೆತು ಇಂಡಿಯಾದ ಸಂಸ್ಕೃತಿ ಅಪ್ಪಿಕೊಂಡ ಕಾರಣ ಈ ರೀತಿಯ ಘಟನೆ ನಡೆಯುತ್ತಿವೆ ಎಂದು ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದರು . ಭಾಗವತ್ ಈ ಹೇಳಿಕೆಗೆ ಅನೇಕ ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಸಿಪಿಐ(ಎಂ) ಖಂಡನೆ: ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆ ನನಗೆ ಆಶ್ಚರ್ಯ ತರುತ್ತಿಲ್ಲ. ಆರೆಸ್ಸೆಸ್ ಅಂದರೆ ಏನು ಅದರ ಸಿದ್ಧಾಂತ ಯಾವ ಮಟ್ಟದಲ್ಲಿ ಎಂಬುದನ್ನು ಮೋಹನ್ ಅವರು ತಮ್ಮ ಮಾತುಗಳಲ್ಲಿ ದೃಢಪಡಿಸುತ್ತಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಮನುಸ್ಮೃತಿ ಆಧಾರದ ಮೇಲೆ ಸಂವಿಧಾನ ತಿದ್ದಲು ಯತ್ನಿಸಿದ ಆರೆಸ್ಸೆಸ್ ನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಮೋಹನ್ ಅವರ ಮಾತುಗಳು ಅವರ ಸಿದ್ಧಾಂತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್ ಕಿಡಿಕಾರಿದ್ದಾರೆ. (ಪಿಟಿಐ)

English summary
RSS chief Mohan Bhagwat, who stoked a controversy a few days ago saying that rapes do not take place in rural but urban India, has created a fresh row now with remarks that a woman is bound by contract to husband to look after him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X