ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ಕೆಎಸ್ಸಾರ್ಟಿಸಿ ಬಸ್ ಪ್ಲಾಟ್ ಫಾರ್ಮ್ ಸ್ಥಳಾಂತರ

By Mahesh
|
Google Oneindia Kannada News

KSRTC bus-stand to be shifted
ಬೆಂಗಳೂರು, ಜ.5: ಮೆಟ್ರೊ ಕಾಮಗಾರಿ ಹಿನ್ನೆಲೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣದ 1ರಿಂದ 5ರವರೆಗಿನ ಅಂಕಣದಿಂದ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಜ.6ರಿಂದ ಬೇರೆ ಕಡೆಗೆ ವರ್ಗಾಯಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ಅಂಕಣ 1ರ ಬದಲು 10: ಮಂಗಳೂರು, ಕುಂದಾಪುರ, ಭಟ್ಕಳ, ಕೊಲ್ಲೂರು, ಉಡುಪಿ, ಮುರುಡೇಶ್ವರ ಬಸ್‌ಗಳನ್ನು 10ನೆ ಅಂಕಣಕ್ಕೆ ವರ್ಗಾಯಿಸಲಾಗಿದೆ.

ಚಿತ್ರದುರ್ಗ, ದಾವಣಗೆರೆ, ಹರಿಹರ, ರೋಣ, ನರಗುಂದ, ಗದಗ, ಮುಂಡರಗಿ, ದಾಂಡೇಲಿ, ರಾಮದುರ್ಗ, ಹಳಿಯಾಳ, ಬೀಳಗಿ, ಬೈಲಹೊಂಗಲ, ಅಥಣಿ, ತೆರೆದಾಳ, ಹುಬ್ಬಳ್ಳಿ, ಬೆಳಗಾವಿ, ಶಿರಡಿ, ಪೂನಾ, ಮುಂಬೈ, ಪಣಜಿ, ಕೊಲ್ಲಾಪುರ ಮಾರ್ಗಗಳತ್ತ ತೆರಳುತ್ತಿದ್ದ ಬಸ್‌ಗಳನ್ನು ಅಂಕಣ 9ಕ್ಕೆ ವರ್ಗಾಯಿಸಲಾಗಿದೆ.

ಅಂಕಣ 3ರ ಬದಲು 7,8:ಚಿತ್ರದುರ್ಗ, ಹೊಸಪೇಟೆ, ಬಸವನ ಬಾಗೇವಾಡಿ, ಬಾಗಲಕೋಟೆ, ಬಾದಾಮಿ, ವಿಜಾಪುರ, ತಾಳಿಕೋಟೆ, ಗಂಗಾವತಿ, ಗಜೇಂದ್ರಗಡ, ಗುಳೇದ ಗುಡ್ಡ, ಹಂಪಿ, ಹೊಳೆ ಆಲೂರು, ಇಳಕಲ್, ಇಂಡಿ, ಜಮಖಂಡಿ, ಯಲಬುರ್ಗ, ಕೊಪ್ಪಳ, ಕುಷ್ಟಗಿ, ಮಾನ್ವಿ, ಮುಂಡರಗಿ, ತುಳಜಾಪುರ, ಪಾವಗಡ, ಕಲ್ಯಾಣದುರ್ಗ ಮಾರ್ಗದ ಬಸ್‌ಗಳನ್ನು 7 ಮತ್ತು 8ನೆ ಅಂಕಣಗಳಿಗೆ ವರ್ಗಾಯಿಸಲಾಗಿದೆ.

ಅಂಕಣ 5ರ ಬದಲು 12,13: ಹೊಸದುರ್ಗ, ಅರಸೀಕೆರೆ, ಶಿವಮೊಗ್ಗ, ಹೆಗ್ಗೋಡು, ಸಾಗರ, ಶಿರಸಿ, ಯಲ್ಲಾಪುರ, ಭಟ್ಕಳ, ಕುಮಟ, ಆಗುಂಬೆ, ಗೋಕರ್ಣ, ಲಿಂಗನಮಕ್ಕಿ, ಹುಂಚ, ಕೊಲ್ಲೂರು, ಕುಪ್ಪಳಿ, ಶಿರಾಳಕೊಪ್ಪ, ಸಿಗಂದೂರು ಬಸ್‌ಗಳನ್ನು ಅಂಕಣ 12 ಮತ್ತು 13ಕ್ಕೆ ವರ್ಗಾಯಿಸಲಾಗಿದೆ.

ಅದೇ ರೀತಿ ಧರ್ಮಸ್ಥಳ, ಬೆಳ್ತಂಗಡಿ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಶೃಂಗೇರಿ, ಉಡುಪಿ, ಕಾಸರಗೋಡು, ಮೂಡಬಿದರೆ, ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಬಸ್‌ಗಳು ಪೋರ್ಟಿಕೋ ಮುಂಭಾಗದಿಂದ ಹೊರಡಲಿದೆ.

ಅಂಕಣ 6ರಿಂದ 10ನೆ ಅಂಕಣ ಬದಲು ಶಾಂತಲಾ ಸಿಲ್ಕ್ ಹೌಸ್: ಆಂಧ್ರಪ್ರದೇಶ ಸಾರಿಗೆ ಸಂಸ್ಥೆಯ ಅನಂತಪುರ, ಹಿಂದೂಪುರ, ಪುಟ್ಟಪರ್ತಿ, ಹೊಸಕೋಟೆ, ಚಿಂತಾಮಣಿ, ಕಡಪ, ಕದ್ರಿ, ಮದನಪಲ್ಲಿ, ಮಾಲೂರು, ಮಾಸ್ತಿ, ಕೆಜಿಎಫ್, ಕೋಲಾರ, ಶ್ರೀನಿವಾಸಪುರ, ತಿರುಪತಿ, ಚಿತ್ತೂರು, ಪುತ್ತೂರು, ಮಂತ್ರಾಲಯ ಬಸ್‌ಗಳು ಶಾಂತಲಾ ಸಿಲ್ಕ್‌ಹೌಸ್ ಮುಂಭಾಗದಿಂದ ಸಂಚರಿಸಲಿವೆ.

ಅಂಕಣ 12 ಮತ್ತು 13 ಬದಲು ಶಾಂತಲಾ ಸಿಲ್ಕ್‌ಹೌಸ್: ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗುಡಿಬಂಡೆ, ಲೇಪಾಕ್ಷಿ, ನಂದಿಬೆಟ್ಟ, ದೊಡ್ಡಬಳ್ಳಾಪುರ, ಗೌರಿಬಿದನೂರು, ಹಿಂದೂಪುರ ಕಡೆಗೆ ಸಂಚರಿಸುತ್ತಿದ್ದ ಬಸ್‌ಗಳನ್ನೂ ಶಾಂತಲಾ ಸಿಲ್ಕ್‌ಹೌಸ್ ಮುಂಭಾಗಕ್ಕೆ ವರ್ಗಾಯಿಸಲಾಗಿದೆ. ಉಳಿದಂತೆ ಯಾವುದೆ ಬದಲಾ ವಣೆಯಿಲ್ಲ ಎಂದು ಪ್ರಕಟಣೆ ತಿಳಿಸಿದೆ.

English summary
The Karnataka State Road Transport Corporation (KSRTC) has decided to shift operation of intra-State and inter-State express buses on the Chikkaballapur-Kolar sector to the newly constructed shelter in front of the Shantala Silk House in Majestic from January 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X