ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿ ಶಾಕ್:ನಂದಿನಿ ಹಾಲು 5ರೂಪಾಯಿ ತುಟ್ಟಿ?

|
Google Oneindia Kannada News

 KMF set to increase Nandini milk price by Sankranti festival
ಬಳ್ಳಾರಿ, ಜ 3: ಸಂಕ್ರಾಂತಿ ಹಬ್ಬಕ್ಕೆ ಜನತೆಗೆ ಶಾಕ್ ನೀಡಲು ಕೆಎಂಎಫ್ ಸಿದ್ದಾಗಿದೆ. ನಂದಿನಿ ಹಾಲಿನ ದರವನ್ನು ಲೀಟರ್ ವೊಂದಕ್ಕೆ ಮೂರು ರೂಪಾಯಿಂದ ಐದು ರೂಪಾಯಿಗೆ ಏರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೊತೆ ಈ ಸಂಬಂಧ ಮಾತುಕತೆ ನಡೆಯುತ್ತಿದೆ. ಹಾಲಿನ ದರವನ್ನು ಏರಿಸದೆ ನಮಗೆ ಬೇರೆ ದಾರಿಯಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಶ್ರೀರಾಮುಲು ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರೆಡ್ಡಿ, ಹಾಲಿನ ದರ ಏರಿಸದೇ ಇದ್ದಲ್ಲಿ ಹಾಲು ಒಕ್ಕೂಟಕ್ಕೆ ಮತ್ತು ಉತ್ಪಾದಕರಿಗೆ ನಷ್ಟ ಉಂಟಾಗುತ್ತದೆ.

ಸದ್ಯದ ಪರಿಸ್ಥಿತಿಯನ್ನು ಮುಖ್ಯಮಂತ್ರಿಯವರ ಬಳಿ ಹೇಳಿಕೊಂಡಿದ್ದೇವೆ.

ಬರುವ ಸಂಕ್ರಾಂತಿ ಹಬ್ಬದ ವೇಳೆಗೆ ಈ ಸಂಬಂಧ ಅಂತಿಮ ಪ್ರಕಟಣೆ ಹೊರಡಿಸಲಿದ್ದೇವೆ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಸದ್ಯಕ್ಕೆ ನಂದಿನಿ ಹಾಲಿನ ಏರಿಕೆಯಾಗುವುದಿಲ್ಲ, ಗ್ರಾಹಕರು ಭಯ ಪಡಬೇಕಾಗಿಲ್ಲ. ಯಾವುದೇ ಕಾರಣಕ್ಕೂ ನಂದಿನಿ ಹಾಲಿನ ಬೆಲೆ ಇನ್ನು ನಾಲ್ಕು ತಿಂಗಳ ಕಾಲ ಏರಿಕೆಯಾಗುವುದಿಲ್ಲ ಎಂದು ಗಾಲಿ ಸೋಮಶೇಖರರೆಡ್ಡಿ ಜುಲೈ 2012ರಲ್ಲಿ ಹೇಳಿಕೆ ನೀಡಿದ್ದರು.

English summary
Karnataka Milk Federation all set to increase the Nandini Milk price by 3 to 5 rupees before Sankranti festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X