ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣನ ದ್ವಾರಕೆ ಕಂಡು ಹಿಡಿದ ಎಸ್ ಆರ್ ರಾವ್ ಇನ್ನಿಲ್ಲ

By Mahesh
|
Google Oneindia Kannada News

ಬೆಂಗಳೂರು, ಜ.3: ಸಮುದ್ರದಲ್ಲಿ ಮುಳುಗಿ ಹೋದ ಪ್ರಾಚೀನ ನಗರ ದ್ವಾರಕಾವನ್ನು ಮೇಲಕ್ಕೆತ್ತಿದ್ದ ಖ್ಯಾತ ಪುರಾತತ್ತ್ವ ತಜ್ಞ ಶಿಕಾರಿಪುರ ರಂಗನಾಥ ರಾವ್ ಅವರು ಗುರುವಾರ(ಜ.3) ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಜಯನಗರದ ಸ್ವಗೃಹದಲ್ಲಿ ಗುರುವಾರ ಮಧ್ಯಾನ್ಹ 12.45ರ ಸುಮಾರಿಗೆ ಎಸ್ ಆರ್ ರಾವ್ ಅವರು ಮೃತಪಟ್ಟರು. ಮೃತರ ಅಂತ್ಯ ಸಂಸ್ಕಾರವನ್ನು ಚಾಮರಾಜಪೇಟೆಯ ಟಿಆರ್ ಮಿಲ್ ಬಳಿಯ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ಹೇಳಿದೆ.

SR Rao

ಹರಪ್ಪ ನಗರ ಹಾಗೂ ಗುಜರಾತಿನ ಬಂದರು ನಗರ ಲೋಥಲ್ ಅಲ್ಲದೆ ಶ್ರೀಕೃಷ್ಣ ನೆಲೆಯಾಗಿದ್ದ ದ್ವಾರಕ ನಗರಗಳ ಇರುವಿಕೆಯ ಬಗ್ಗೆ ಸಂಶೋಧನೆ ನಡೆಸಿ ಮಹತ್ವದ ಆವಿಷ್ಕಾರ ಮಾಡಿದ ಎಸ್ ಆರ್ ರಾವ್ ಅವರು ಭಾರತದ ಹೆಮ್ಮೆಯ ಪುರಾತತ್ತ್ವ ತಜ್ಞರಾಗಿದ್ದರು.

1922ರಲ್ಲಿ ಜನಿಸಿದ ಎಸ್ ಆರ್ ರಾವ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಬರೋಡಾದಲ್ಲಿ ಪುರಾತತ್ತ್ವ ಶಾಸ್ತ್ರ ಅಭ್ಯಸಿಸಿದರು. ಭಾರತೀಯ ಸರ್ವೇಕ್ಷಣ ವಿಭಾಗ(Archaeological Survey of India ) ದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 32 ವರ್ಷ ಕಾರ್ಯ ನಿರ್ವಹಿಸಿದ್ದರು.

ಗುಜರಾತ್ ಅಲ್ಲದೆ, ಐಹೊಳೆ, ಕಾವೇರಿಪಟ್ಟಣಂನಲ್ಲೂ ಉತ್ಖನನ ನಡೆಸಿ ಸಂಶೋಧನೆ ನಡೆಸಿದ್ದರು. ಸಿಂಧೂ ನದಿ ನಾಗರೀಕತೆ, ಕುರುಕ್ಷೇತ್ರ ಯುದ್ಧಕ್ಕೆ ಸಂಬಂಧಿಸಿದ ಸಂಶೋಧನೆ ಮಹತ್ವದ್ದಾಗಿದೆ.

ಇಂಡಸ್ ಸ್ಕ್ರಿಪ್-ಸಿಂಧೂ ನಾಗರೀಕತೆ ಸಮಯದಲ್ಲಿ ಬಳಸಲಾದ ಲಿಪಿ ಹಾಗೂ ಸಂಖ್ಯೆಗಳನ್ನು ರಾವ್ ಪರಿಚಯಿಸಿದರು. ಎಸ್ ಆರ್ ರಾವ್ ಅವರು ಬರೆದಿರುವ The lost city of Dvarakaದಲ್ಲಿ ಭಾರತದ ಪ್ರಾಚೀನ ನಗರ, ಮಹಾಭಾರತ ಕಾಲದ ಕುತೂಹಲಕಾರಿ ಸಂಗತಿಗಳು ಓದಲು ಸಿಗುತ್ತದೆ.

ಅರಬ್ಬಿ ಸಮುದ್ರದಲ್ಲಿ ಸುಮಾರು 11 ವರ್ಷಗಳ ತಪಸ್ಸಿನಂತೆ ಉತ್ಖನನ ನಡೆಸಿದ ಫಲವಾಗಿ ಶ್ರೀಕೃಷ್ಣನ ದ್ವಾರಕೆ ನಗರಿ ಎಸ್ ಆರ್ ರಾವ್ ಅವರ ಕಣ್ಣಿಗೆ ಬಿದ್ದಿತ್ತು. ಸುಮಾರು ಕ್ರಿಸ್ತ ಪೂರ್ವ 1500 ರ ಕಾಲಘಟ್ಟದ ಅವಶೇಷಗಳು ಎಸ್ ಆರ್ ರಾವ್ ನೇತೃತ್ವದ ತಂಡಕ್ಕೆ ಸಿಕ್ಕಿತ್ತು.

ಸಿಗದ ಸರ್ಕಾರಿ ಗೌರವ: ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಎಸ್ ಆರ್ ರಾವ್ ಅವರ ಅಗಲಿಕೆ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಂಡಿಲ್ಲ.

ನ್ಯಾಯವಾಗಿ ಎಸ್ ಆರ್ ರಾವ್ ರಂಥ ಧೀಮಂತ ವ್ಯಕ್ತಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಬೇಕಾಗಿತ್ತು. ಆದರೆ, ಯಾವೊಬ್ಬ ಸರ್ಕಾರಿ ಅಧಿಕಾರಿಗಳು ಜಯನಗರದ ಟಿ ಬ್ಲಾಕಿನ ನಿವಾಸದ ಬಳಿ ಕಾಣ ಸಿಗಲಿಲ್ಲ.

ಎಸ್ ಆರ್ ರಾವ್ ಅವರ ಜ್ಞಾನಧಾರೆ ಪುಸ್ತಕಗಳ ಮೂಲಕ ಇನ್ನೂ ಜೀವಂತವಾಗಿದ್ದು, ಗೋವಾದಲ್ಲಿ ಅವರು ಸ್ಥಾಪಿಸಲು ಉದ್ದೇಶಿಸಿದ್ದ Marine University ಕನಸಾಗೆ ಉಳಿದುಬಿಟ್ಟಿದೆ.

English summary
Prof.S.R. Rao is a renowned archaeologist and scholar passed away today(Jan.3) in Jayanagar, Bangalore. SR Rao has two path-breaking excavations to his credit (both in Gujarat) namely the Harappan port of Lothal and the submerged city of Dwaraka which have fetched him laurels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X