ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತಾಶೆ: 139 'ಕ್ರಿಶ್ಚಿಯನ್ನರು' ಹಿಂದೂ ಧರ್ಮಕ್ಕೆ ವಾಪಸ್

By Srinath
|
Google Oneindia Kannada News

ನಲಗೊಂಡಾ, ಜ.1: ಯಾಕಪ್ಪಾ ಕ್ರಿಶ್ಚಿಯನ್ ಧರ್ಮಕ್ಕೆ ಹೋದೆವೋ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದ 139 ಮಂದಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ. ನಲಗೊಂಡಾ ಜಿಲ್ಲೆಯ ಒಟ್ಟು 34 ಕುಟುಂಬಗಳು ಮೊನ್ನೆ ಭಾನುವಾರ ಚರ್ಚಿಗೆ ಹೋಗದೆ ಪರಿವರ್ತನಾ ಸಮಾರಂಭಕ್ಕೆ ತೆರಳಿ, ಹಿಂದೂ ಧರ್ಮಕ್ಕೆ ಮರಳಿದ್ದಾರೆ.

139-persons-return-to-hinduism-fm-christianity-nalgonda

ಧರ್ಮಚೆರ್ಲಾ ಮತ್ತು ನೆರಡುಚೆರ್ಲಾ ಮಂಡಲಗಳ 4 ಗ್ರಾಮಗಳ ಒಟ್ಟು 139 ಮಂದಿ ಹಿಂದೂ ದೀಕ್ಷೆಯನ್ನು ತೆಗೆದುಕೊಂಡು ಪೂರ್ವಾಶ್ರಮಕ್ಕೆ ವಾಪಸಾಗಿದ್ದಾರೆ. ಇವರು ಕ್ರೈಸ್ತ ಮತಾಂತರದ ಸಂತ್ರಸ್ತರಾಗಿದ್ದರು.

ಈ ಪರಿವರ್ತನಾ ಸಮಾರಂಭವನ್ನು (ಮತಾಂತರಗೊಂಡವರು ಹಿಂದೂ ಧರ್ಮಕ್ಕೆ ಮರಳುವ ಧಾರ್ಮಿಕ ಕಾರ್ಯಕ್ರಮ) ವಿಶ್ವ ಹಿಂದೂ ಪರಿಷತ್ (ವಿಹಿಂಪ) ಆಯೋಜಿಸಿತ್ತು. ಜಿಲ್ಲೆಯ ವಡಪಲ್ಲಿ ಬಳಿ ಕೃಷ್ಣಾ ನದಿ ತಟದಲ್ಲಿ ಚಾರಿತ್ರಿಕ ಅಗಸ್ತೇಶ್ಚರ ದೇವಸ್ಥಾನದಲ್ಲಿ ಈ ಧಾರ್ಮಿಕ ಕ್ರಿಯೆಗಳು ಶಾಸ್ತ್ರಬದ್ಧವಾಗಿ ನಡೆದವು.

ಮತಾಂತರಗೊಂಡು ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದ 175 ಮಂದಿ ಇದೇ ರೀತಿ ಡಿಸೆಂಬರ್ 19ರಂದು ಪಲಕೊಂಡಾ ಬಳಿ ಹಿಂದೂ ಧರ್ಮಕ್ಕೆ ವಾಪಸಾಗಿದ್ದರು.
(ಕೃಪೆ: ಸಂವಾದಡಾಟ್ಆರ್ಗ್)

English summary
Frustration-139 persons return to Hinduism from Christianity Nalgonda Andhra. 139 Christians from 34 families returned to Hinduism in a Paravartan Ceremony held at Nalgonda of Andhra Pradesh on Sunday, December 30, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X