ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳೇ ಜಯನಗರ ನಂದನವನದಲ್ಲಿ ಏನೆಲ್ಲ ಇದೆ ಗೊತ್ತಾ?

By Srinath
|
Google Oneindia Kannada News

ಬೆಂಗಳೂರು, ಡಿ. 29: ಜಯನಗರದ ಮಕ್ಕಳು ನಿಜಕ್ಕೂ ಅದೃಷ್ಟವಂತರೇ! ಏಕೆಂದರೆ ಪಟ್ಟಾಭಿರಾಮನಗರ ವಾರ್ಡಿನ ಕಾರ್ಪೊರೇಟರ್ ಸಿಕೆ ರಾಮಮೂರ್ತಿ ಅವರು ಡಿಸ್ನಿ ಲೋಕವನ್ನೇ ತಂದು ಮಕ್ಕಳ ಅಂಗಳದಲ್ಲಿ ಹರಡಿದ್ದಾರೆ. ಇದರಿಂದ 'ರಾಮಮೂರ್ತಿ ಅಂಕಲ್' ಬಗ್ಗೆ ಮಕ್ಕಳಿಗೂ ಪ್ರೀತಿ-ಅಭಿಮಾನ ಮೂಡಿದೆ.

ಹೌದು, ಎರಡನೆಯ ಬಾರಿಗೆ ಕಾರ್ಪೊರೇಟರ್ ಆಗಿರುವ ರಾಮಮೂರ್ತಿ ಅಂಕಲ್ ಪಾಲಿಕೆಯ ವತಿಯಿಂದ ಸುಮಾರು 1.5 ಕೋಟಿ ರೂಪಾಯಿಯನ್ನು ಮಕ್ಕಳ ಈ 'ನಂದನವನ'ಕ್ಕಾಗಿ ವಿನಿಯೋಗಿಸಿದ್ದಾರೆ. ಕೊರಿಯಾ, ಆಸ್ಟ್ರಿಯಾ, ಹಾಂಕಾಂಗ್ ಮುಂತಾದ ಕಡೆಗಳಿಂದ 14 ಆಟದ ಸಾಮಾನುಗಳು ಮಕ್ಕಳನ್ನು ಕೈಬೀಸಿ ಕರೆಯುತ್ತಿವೆ.

ಮಕ್ಕಳೇ, ಇಲ್ಲಿರುವ ಸಂಗೀತ ಕಾರಂಜಿಯ ಬಗ್ಗೆ ನಿಮಗೆ ಹೇಳಲೇಬೇಕು. ಇದು ನೀರಿನ ಕಾರಂಜಿ ಅಲ್ಲ. ಬದಲಿಗೆ 68 ಬಣ್ಣ ಬಣ್ಣಗಳ ಚಿಲುಮೆ ಇದು. 3 ಲಕ್ಷ ರೂಪಾಯಿ ಕೊಟ್ಟು ಆಸ್ಟ್ರಿಯಾದಿಂದ ಇದನ್ನು ಆಮದು ಮಾಡಿಕೊಳ್ಳಲಾಗಿದೆ.

bbmp-jayanagar-4th-block-nandanavana-hi-tech-kids-park

ಪಾರ್ಕಿನಲ್ಲಿ ಆಟವಾಡುವ ಸಮಯ:
ಪ್ರತಿ ಸಂಜೆ 5.30ರಿಂದ 8.30ರ ವರೆಗೆ. ರಜಾ ದಿನವಾದ ಭಾನುವಾರವಂತೂ ಇಡೀ ದಿನ ಮಕ್ಕಳು ಇಲ್ಲಿ ಆಡಬಹುದು. ಇನ್ನು, ಶೂಟಿಂಗ್ ಲೈಟ್ಸ್ ಕಾರಂಜಿ ಸಮಯ ಪ್ರತಿ ಸಂಜೆ 7 ರಿಂದ 8.30 ರವರೆಗೆ. ನಂದನವನದಲ್ಲಿರುವ ಆಟದ ಸಾಮಾನುಗಳನ್ನು ಕಣ್ತುಂಬಿಸಿಕೊಳ್ಳಲು ಇಲ್ಲಿರುವ ಗ್ಯಾಲರಿಗೆ ಕ್ಲಿಕ್ ಮಾಡಿ.

ಇನ್ನು ನಂದನವನದ ಮರಗಳಿಂದ ಸುತ್ತುವರಿದಿರುವುದು ಮಕ್ಕಳಿಗೆ ಹೇಳಿ ಮಾಡಿಸಿದ ಆಟದ ಮೈದಾನವಾಗಿದೆ. ಒಟ್ಟು 25 ಸಾವಿರ ಚದರ ಅಡಿ ಜಾಗದಲ್ಲಿ ಆಟವಾಡುವ ಮಕ್ಕಳ ಸುರಕ್ಷತೆಗೆ ಹೆಚ್ಚು ಗಮನ ನೀಡಿ, ಈ ಆಟದ ಸಾಮಾನುಗಳನ್ನು ಹಾಕಲಾಗಿದೆ. ಮಂಗಳೂರು ಕಡೆಯಿಂದ ಸಮುದ್ರದ ಮರಳನ್ನು ತಂದು ಇಲ್ಲಿ ಹಾಸಲಾಗಿದೆ. ಸೋ ದಟ್, ಮಕ್ಕಳು ಬಿದ್ದು ಮೈ ತರಚಿಕೊಂಡರೂ ದೊಡ್ಡ ಗಾಯವಾಗಬಾರದು ಎಂಬ ಕಾಳಜಿ!

26 ಕಾರ್ಟೂನ್ ಚಿತ್ರಗಳನ್ನೂ ಬೃಹದಾಕಾರವಾಗಿ ಇಲ್ಲಿ ಬಿಡಿಸಲಾಗಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳುವ ಮಕ್ಕಳಿಗಾಗಿ 'ಚಿಣ್ಣರ ಅಂಗಳ'ವೂ ಇಲ್ಲಿದೆ. ಆಟವಾಡಿ ಸುಸ್ತಾದ ಮಕ್ಕಳಿಗೆ ದಣಿವಾರಿಸಿಕೊಳ್ಳಲು 14 ಬಣ್ಣಗಳ ಬೆಂಚುಗಳೂ ಇಲ್ಲಿವೆ.

ಟಿವಿ, ಕಂಪ್ಯೂಟರುಗಳಿಗೆ ಅಂಟಿಕೊಳ್ಳುವ ಮಕ್ಕಳು ಒಮ್ಮೆ ಈ ಪಾರ್ಕನ್ನು ನೋಡಿದರೆ ಟಿವಿಗೆ ಗುಡ್ ಬೈ ಹೇಳಿ ಖಂಡಿತಾ ದಿನಾ ಇಲ್ಲಿಗೆ ಬಂದು ಆಟವಾಡಲು ಬಯಸುತ್ತಾರೆ. ಇಷ್ಟೆಲ್ಲ ಇದ್ದ ಮೇಲೆ 'ಪಾರ್ಕಿಗೆ ಎಂಟ್ರೀ ಫೀಸೂ ಇರಬೇಕಲ್ಲಾ?' ಎಂದು ಪ್ರಶ್ನಿಸಿದರೆ 'ಛೆ! ಎಲ್ಲಾದರೂ ಉಂಟಾ, ಮಕ್ಕಳಿಂದ ದುಡ್ಡು ತೆಗೆದುಕೊಳ್ಳುವುದಾ? ಇದು ಉಚಿತ ಪಾರ್ಕ್, ಯಾವುದೇ ದುಡ್ಡು ಕಾಸೂ ಇಲ್ಲದೆ ಮಕ್ಕಳು ಇಲ್ಲಿ ನಲಿದಾಡಬಹುದು' ಎನ್ನುತ್ತಾರೆ ರಾಮಮೂರ್ತಿ ಅಂಕಲ್.
ಮಕ್ಕಳೇ ಪಾರ್ಕಿಗೆ ಹೋಗಿಬಂದು ನಿಮ್ಮ ಅನುಭವ ಹೇಗಿತ್ತು ಅಂತ ನಮಗೆ ಹೇಳ್ತೀರಲ್ಲಾ !?

English summary
BBMP Jayanagar 4th Block Nandanavana hi-tech kids park inaugurated on Dec 28. Marking a new beginning aimed at attracting people to public spaces, the Bruhat Bangalore Mahanagara Palike (BBMP) has inaugurated Bangalore’s first hi-tech children’s park in Jayanagar on Friday. Nandanavana is the result of the efforts of C K Ramamurthy, Pattabiramanagara ward corporator.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X