• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಅಮಾನತ್' ರೆಹಮಾನ್ ಖಾನ್‌ ವಿರುದ್ಧ ಲೋಕಾ FIR

By Srinath
|

ಬೆಂಗಳೂರು, ಡಿ. 28: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ ರಹಮಾನ್ ಖಾನ್ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಕೇಸು ದಾಖಲಿಸಿಕೊಂಡಿದ್ದಾರೆ.

ಶಿವಾಜಿನಗರದಲ್ಲಿರುವ ಅಮಾನತ್ ಸಹಕಾರ ಬ್ಯಾಂಕಿನಲ್ಲಿ ರಹಮಾನ್ ಖಾನ್ ಅವರು 10 ವರ್ಷದ ಹಿಂದೆ ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ 300 ಕೋಟಿ ರೂ. ಹಣ ದುರ್ಬಳಕೆಯಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾನಿಪ್ಪಾಡಿ ಅವರು ದೂರು ನೀಡಿದ್ದರು.

ಆ ದೂರಿನನ್ವಯ ಕೇಸು ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಆದರೆ 74 ವರ್ಷದ ರಹಮಾನ್ ಖಾನ್ ಪ್ರಸ್ತುತ ಸಂಸತ್ ಸದಸ್ಯರಾಗಿರುವುದರಿಂದ ಅವರ ವಿರುದ್ಧ ತನಿಖೆ ನಡೆಸಲು ಲೋಸಕಭೆ ಸ್ಪೀಕರ್ ಅವರ ಅನುಮತಿ ಪಡೆದಿದ್ದಾರಾ? ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

'ಅಮಾನತ್' ವೃತ್ತಾಂತ:

ಹಣ ದುರ್ಬಳಕೆಯಾಗಿರುವ ಕುರಿತು ಸಹಕಾರ ಬ್ಯಾಂಕ್‌ನ ಕೆಲವು ಷೇರುದಾರರು ದೂರು ನೀಡಿ, ತನಿಖೆ ನಡೆಸುವಂತೆ ಕೋರಿದ್ದರು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿತ್ತಾದರೂ, ಹೆಚ್ಚಿನ ಮಾಹಿತಿ ದೊರೆತಿರಲಿಲ್ಲ.

ಹಾಗಾಗಿ ಅಲ್ಪಸಂಖ್ಯಾತ ಆಯೋಗಕ್ಕಿರುವ ಅಧಿಕಾರ ಬಳಸಿ ಪ್ರಕರಣದ ಕುರಿತು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ಎಂದು ಅನ್ವರ್ ಮಾನಿಪ್ಪಾಡಿ ಅವರು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಲೋಕಾಯುಕ್ತರಿಗೆ ಈ ಅವ್ಯವಹಾರದ ಕುರಿತಾದ ದಾಖಲೆಗಳನ್ನೂ ನೀಡಲಾಗಿದೆ. ಇದರಲ್ಲಿ ಆರ್‌ಬಿಐ ಆಡಿಟ್ ವರದಿ ಹಾಗೂ ರಾಜ್ಯ ಸಹಕಾರ ಇಲಾಖೆ ನಡೆಸಿದ ಆಂತರಿಕ ತನಿಖಾ ವರದಿಯೂ ಇದೆ.

ರಹಮಾನ್ ಖಾನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರ ಕುಟುಂಬ ವರ್ಗದ ಸದಸ್ಯರಿಗೆ ಸಾಲ ಮಂಜೂರಾತಿ ಮಾಡಲಾಗಿದೆ, ಸಂಬಂಧಿಕರು ಮತ್ತು ಬೆಂಬಲಿಗರಿಗೆ ನಿಯಮ ಮೀರಿ ಸಾಲ ವಿತರಣೆ ಮಾಡಲಾಗಿದೆ ಮತ್ತು ಆ ಸಾಲವನ್ನು ವಾಪಸ್ ಪಡೆಯುವ ಕುರಿತು ಯಾವುದೇ ಪ್ರಯತ್ನಗಳು ನಡೆಯಲಿಲ್ಲ. ಇದರ ಜತೆಗೆ ಬ್ಯಾಂಕಿಗೆ ಸಂಬಂಧಿಸಿದ ಆಸ್ತಿಗಳಲ್ಲಿನ ಅವ್ಯವಹಾರಗಳು ಸೇರಿ ಒಟ್ಟು 300 ಕೋಟಿ ರೂ. ದುರ್ಬಳಕೆಯಾಗಿದೆ ಎಂದು ದೂರಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore lokayukta police file FIR aganist Rahman Malik, Amanath Cooperative Bank ex chairman who is presently Minority Affairs Minister. Karnataka State Minorities Commission President Anwar Manippady is the petitioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more