ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡೆಸ್ನಾನ ಬೇಡ ಎಡೆಸ್ನಾನವಿರಲಿ ಎಂದ ಪೇಜಾವರ ಶ್ರೀ

By Srinath
|
Google Oneindia Kannada News

pejawar-seer-no-to-madesnana-but-wants-edesnana
ಮಂಗಳೂರು, ಡಿ.27: ಮಡೆಸ್ನಾನವನ್ನು ನಾನು ಸಮರ್ಥಿಸುವುದಿಲ್ಲ. ಈ ಹಿಂದೆಯೂ ಇದನ್ನು ಹೇಳಿದ್ದೇನೆ. ಆದರೆ ಮಡೆಸ್ನಾನದ ಬದಲು ಎಡೆಸ್ನಾನ ಮಾಡುವುದು ಸೂಕ್ತ ಎಂಬುದು ನನ್ನ ಸಲಹೆ. ಈ ಬಗ್ಗೆ ನಾನು ತೆಗೆದುಕೊಂಡಿರುವ ನಿಲುವಿನಲ್ಲಿ ವ್ಯತ್ಯಾಸವಿಲ್ಲ ಎಂದು ಉಡುಪಿ ಪೇಜಾವರ ಮಠದ ಸ್ವಾಮೀಜಿ ಅವರ ಸ್ಪಷ್ಟವಾಗಿ ಹೇಳಿದ್ದಾರೆ.

'ಎಡೆಸ್ನಾನ ಅಂದರೆ ದೇವರಿಗೆ ಅರ್ಪಿಸುವ ನೈವೇದ್ಯದ ಮೇಲೆ ಭಕ್ತರು ಉರುಳು ಸೇವೆ ಮಾಡುವುದು ಎಂದರ್ಥ. ಆದರೆ ಹೀಗೆ ಮಾಡುವುದರಿಂದ ದೇವರ ಪ್ರಸಾದ ಅಪವಿತ್ರವಾಗುತ್ತದೆ ಎಂದು ವಾದಿಸಿದರೆ ಹೇಗೆ? ಈ ವಾದವನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಗಂಗಾ ನದಿಯಲ್ಲಿ ಸಾವಿರಾರು ಭಕ್ತರು ಮಿಂದು ಪಾವನರಾಗುತ್ತಾರೆ. ಹಾಗಂತ ಗಂಗಾನದಿಯನ್ನು ಅಪವಿತ್ರ ಎನ್ನಲು ಸಾಧ್ಯವೇ?' ಎಂದು ಅವರು ಪ್ರಶ್ನಿಸಿದ್ದಾರೆ.

'ಮಡೆಸ್ನಾನ ನಡೆಸುವ ಅಗತ್ಯವಿಲ್ಲ. ಅದರಿಂದ ಹಿಂದೂ ಧರ್ಮಕ್ಕೆ ಲಾಭವೂ ಇಲ್ಲ. ಈ ಬಗ್ಗೆ ನಾನು ನೀಡಿದ ಎಡೆಸ್ನಾನದ ಸಲಹೆಯನ್ನು ರಾಜ್ಯ ಸರಕಾರ ಪರಿಗಣಿಸಿತ್ತು. ಆದರೆ ಪ್ರಸಕ್ತ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಮಡೆಸ್ನಾನ ಮುಂದುವರಿದಿದೆ.

ಉಡುಪಿಯ ಕೃಷ್ಣ ಮಠದಲ್ಲಿ ಮಡೆಸ್ನಾನವಿಲ್ಲ. ಮಡೆಸ್ನಾನದ ಬದಲು ಎಡೆಸ್ನಾನದ ಪ್ರಸ್ತಾಪವನ್ನು ನಾನು ಮಾಡಿದಾಗ ನನ್ನನ್ನು ಸ್ವಾಗತಿಸಿದವರೇ (ನಿಡುಮಾಮಿಡಿ ಸ್ವಾಮೀಜಿ ಸೇರಿದಂತೆ ಅನೇಕರು) ಈಗ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಪೇಜಾವರಶ್ರೀ ವಿಷಾದಿಸಿದರು.

ನಕ್ಸಲ್ ಪ್ರದೇಶಗಳಲ್ಲಿ ನೀರಾ ರಾಡಿಯಾ ಸೇವೆ: ವಿವಾದಿತ ನೀರಾ ರಾಡಿಯಾ ಅವರು ಪೇಜಾವರ ಶ್ರೀಗಳ ಉಸ್ತುವಾರಿಯಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಲ್ಲಿನ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವಂತಾಗಲು 2 ಕೋಟಿ ರೂ. ಮೌಲ್ಯದ ಅತ್ಯಾಧುನಿಕ ಸಂಚಾರಿ ವೈದ್ಯಕೀಯ ವಾಹನ ನೀಡಿದ್ದಾರೆ. ಮುಂದಿನ ಜನವರಿ 15ರಿಂದ ಈ ಸೇವೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

'ನೀರಾ ರಾಡಿಯಾ ಮೇಲಿನ ಆರೋಪ ಇನ್ನೂ ಸಾಬೀತಾಗಿಲ್ಲ. ಅಲ್ಲದೆ ಅವರು ದೇಣಿಗೆ ನೀಡಿರುವುದು ಸಮಾಜ ಸೇವೆಗೆ. ಇದೀಗ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಇದು ಸ್ವಾಗತಾರ್ಹ' ಎಂದು ಪೇಜಾವರಶ್ರೀ ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ.

English summary
Udupi Pejawar Seer says no to Madesnana but wants Edesnana. An other version of 'Made Made Snana', termed as ‘Ede Snana’ a ritual wherein devotees roll over the ‘prasadam’ of the deity at Shree Kshetra Subrahmanya (instead of rolling over banana plaintains of the leftover meals of Brahmins as in Made Snana) should not be regarded as a ritual that desecrates the prasadam, said Sri Vishweshatirtha Swamiji of Pejawar Math, Udupi here on Wednesday December 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X