ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಬು ಜೀವಂತಿಕೆಯ ಈ ತಾಜಾ ಚಿತ್ರವನ್ನೊಮ್ಮೆ ನೋಡಿ

By ಶಂಭೋ ಶಂಕರ
|
Google Oneindia Kannada News

ಶಾಂತಿನಿಕೇತನ, ಡಿ.26: ಒಮ್ಮೆ ಈ ತಾಜಾ ಚಿತ್ರವನ್ನು ನೋಡಿ. ಎಲ್ಲವನ್ನೂ ಅದೇ ಹೇಳುತ್ತಿದೆ. ಜತೆಗೆ ಇನ್ನೂ ಏನನ್ನೋ ಹೇಳುವುದೂ ಇದೆ.

ಈ ಸುಂದರ, ಆಹ್ಲಾದಕರ, ತುಂಬು ಜೀವಂತಿಕೆಯ ಚಿತ್ರವನ್ನು ನೋಡುತ್ತಿದ್ದರೆ ಪ್ರಸ್ತುತ ಚಳಿಗಾಲದಲ್ಲಿ ಹೆಣ್ಣನ್ನು ಪೂಜಿಸುವ ದೇಶದಲ್ಲಿ ನಾರಿಮಣಿಯರ ಮೇಲೆ ನಡೆಯುತ್ತಿರುವ ಅತಿರೇಕಗಳ ಮೆರವಣಿಗೆ ಕಣ್ಣೆದುರು ಸಾಗುತ್ತದೆ. ಇದರಿಂದ ಘಾಸಿಗೊಂಡ ಮನಸ್ಸು ನಿಜಕ್ಕೂ ಮುದುಡಿದೆ.

ಹೀಗೇಕೆ ಆಗುತ್ತಿದೆ?: ಕೆಳಗಿನ ಚಿತ್ರದಲ್ಲಿ ಮೈದಾಳಿರುವ ಜೀವಂತಿಕೆಯನ್ನು ಒಮ್ಮೆ ನೋಡಿ. ಎಷ್ಟೊಂದು ಸ್ವಚ್ಚಂದವಾಗಿ, ಚೇತೋಹಾರಿಯಾಗಿ ಆ ಹೆಣ್ಣುಮಕ್ಕಳು ಗುರಿ ಮುಟ್ಟುವ ಮುನ್ನ, ಗೆಲ್ಲುವ ಮುನ್ನ ಗೆಲುವಾಗಿದ್ದಾರೆ. 'ಅಷಡ್ಡಾಳದ ಅತಿರೇಕಗಳ ಬಗ್ಗೆ ಆಲೋಚಿಸಬೇಡಿ. ನಮಗೂ ಒಂದು ಅವಕಾಶ ನೀಡಿ, ನಾವೂ ಎಷ್ಟೊಂದು ನೆಮ್ಮದಿಯಿಂದ ಬದುಕಬಲ್ಲೆವು ಎಂಬುದನ್ನು ತೋರಿಸಿಕೊಡುತ್ತೇವೆ' ಎನ್ನುವಂತಿದ್ದಾರೆ ಚಿತ್ರದಲ್ಲಿನ ಹೆಂಗೆಳೆಯರು.

tribal-women-pitcher-race-118-santiniketan-poush-mela
ಅದು ವಾಸ್ತವ/ನಿಜವೂ ಅಲ್ವಾ. ಈ ಕಾಮಾಂಧರೇಕೆ ಹೆಂಗೆಳೆಯರ ಮೇಲೆ ಮುಗಿಬೀಳಬೇಕು. ಏನೋ ದೊಡ್ಡ ದೊಡ್ಡ ಮಾತುಗಳನ್ನು ಹೇಳುವಷ್ಟು ದೊಡ್ಡವನಲ್ಲ. ಆದರೂ ಒಮ್ಮೆ ಹೆಣ್ಣುಮಕ್ಕಳಿಗೆ ನಾವು ನೀಡಬಹುದಾದ ಸ್ವಚ್ಚಂದ ಸ್ವಾತಂತ್ರ್ಯದ ಬಗ್ಗೆ ಯೋಚಿಸಿ ನೋಡಿ...

ಯಾರೋ ಬರೆದಿದ್ದರು
: 'ಅತ್ಯಾಚಾರ ಮಾಡಿದವನು ನಿಜಕ್ಕೂ ಗಂಡಸೇ ಆಗಿದ್ದರೆ ಅವನಲ್ಲಿ ಕಾಮ ವಾಂಛನೆಗಳು ಪುಟಿದೇಳುತ್ತಿದ್ದರೆ ತನ್ನ ಮನೆಯಿಂದಲೇ ಅದನ್ನು ಶುರುವಿಟ್ಟುಕೊಳ್ಳಲಿ. ಮೊದಲು ತಾಯಿ, ಅಕ್ಕ, ತಂಗಿ, ಚಿಕ್ಕಮ್ಮ, ದೊಡ್ಡಮ್ಮ, ಅತ್ತಿಗೆ ... ಹೀಗೆ ಅವರ ಮೇಲೆ ಆಸೆ ತೀರಿಸಿಕೊಳ್ಳಲಿ. ಬಳಿಕ ಅವನ ಗಂಡಸುತನ ಇನ್ನೂ ಉಳಿದಿದ್ದರೆ ಹೊರಗೆ ಬರಲಿ' ಎಂಬ ಧಾಟಿಯಲ್ಲಿ ಪ್ರತಿಕ್ರಿಯಿಸಿರುವ ಓದುಗರೊಬ್ಬರು ತಮ್ಮ ಕ್ರೋಧವನ್ನು ಹೊರಹಾಕಿದ್ದಾರೆ. ನೀವೇನಂತೀರಿ?
English summary
Tribal Women take part in pitcher race 118th Santiniketan Poush Mela West Bengal. Shantiniketan: Women of a tribal community take part in a pitcher race during the 118th Santiniketan Poush Mela at Santiniketan in West Bengal on Tuesday (Dec 25).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X