• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುರ್ಬಲ ಹೃದಯಗಳಿಗೆ ಟಿ20 ಕ್ರಿಕೆಟ್ ತಕ್ಕುದಲ್ಲ

By Prasad
|

ಬೆಂಗಳೂರು, ಡಿ. 26 : ಅಯ್ಯೋ, ಲಾಸ್ಟ್ ಎರಡು ಓವರಲ್ಲಿ ಬೇಕಾಗಿರುವುದು 36 ರನ್! ಇಂಪಾಸಿಬಲ್. ಗೆಲ್ಲೋಕೆ ಚಾನ್ಸೇ ಇಲ್ಲ ಕಣೋ... ಏಯ್ ನಾಲ್ಕು ಸಿಕ್ಸರ್ ಎತ್ತಿದ್ರೆ ಗೇಮ್ ಫಿನಿಷ್. ಮಗಾ ಇದು ಟಿ20 ಕಣೋ. ಲಾಸ್ಟ್ ಬಾಲ್ ಹಾಕೋವರೆಗೂ ವಿಜಯಲಕ್ಷ್ಮಿ ಯಾರಿಗೆ ಒಲೀತಾಳೆ ಹೇಳೋಕೇ ಸಾಧ್ಯವಿಲ್ಲ. ಜೋ ಜೀತಾ ವಹೀ ಸಿಕಂದರ್.

ಯಸ್. ಇದು ಟ್ವೆಂಟಿ20 ಜಮಾನಾ. ಎದುರಾಳಿ ಎಂಥ ಬಲಿಷ್ಠ ತಂಡವೇ ಇರಲಿ, ಬಾಲ್ ಎಸೆಯುತ್ತಿರುವವನು ಎಂಥಾ ಕೌಶಲ್ಯಭರಿತ ಬೌಲರೇ ಇರಲಿ, ಕ್ಷೇತ್ರ ರಕ್ಷಣೆ ಎಷ್ಟೇ ಅದ್ಭುತವಾಗಿರಲಿ, ಪ್ರೇಕ್ಷಕರು ಎಷ್ಟೇ ಕಿರುಚಾಡಿಕೊಳ್ಳುತ್ತಿರಲಿ, ಬೀಸೋ ಬ್ಯಾಟು ಬೀಸ್ತಾನೇ ಇರಬೇಕು. ಅದ್ಭುತ ಲಯ ಕಂಡುಕೊಂಡಿದ್ರೆ ಎಂಥ ಪಂದ್ಯವನ್ನೂ ತಲೆಕೆಳಗು ಮಾಡುವ ತಾಕತ್ತು ಬ್ಯಾಟ್ಸ್‌ಮನ್‌ಗಿರುತ್ತದೆ.

ಇನ್ನು ಪಂದ್ಯ ಭಾರತ ಮತ್ತು ಪಾಕಿಸ್ತಾನದ ನಡುವಿದ್ದರಂತೂ ಮುಗಿದೇ ಹೋಯಿತು. ರೋಷ, ಆವೇಷ, ಭಾವಾವೇಷ, ಹಾರಾಟ, ಕೂಗಾಟ, ಜೈಜೈಕಾರ, ಧಿಕ್ಕಾರಗಳಿಗೆ ಕೊನೆ ಎಂಬುದೇ ಇರುವುದಿಲ್ಲ. ಕುರ್ಚಿಯಂಚಿನಲ್ಲಿ ಕುಳಿತು ಮ್ಯಾಚ್ ನೋಡುತ್ತಿದ್ದವನ ಹೃದಯ ಧಡ್ ಧಡ್ ಅಂತ ಹೊಡೆದುಕೊಳ್ಳುತ್ತಿರುತ್ತದೆ. ಬಡಿತ ಎರಡು ಪಟ್ಟು ಜಾಸ್ತಿಯಾಗಿರುತ್ತದೆ. ಗೆದ್ದರೆ ನಿರಾಳ, ಸೋತರೆ ಹುಮ್ಮಸ್ಸು ಪಾತಾಳಕ್ಕೆ ಕುಸಿದಿರುತ್ತದೆ.

ಹೃದಯದ ಬಡಿತ ತೀರ ಏರುಪೇರಾದರೆ ಹೆಚ್ಚುಕಡಿಮಿಯೂ ಆಗಬಹುದು. ಬೇರೆ ಯಾವ ರಾಷ್ಟ್ರಗಳ ನಡುವಿನ ಪಂದ್ಯಕ್ಕಿಂತ ಭಾರತ ಮತ್ತು ಪಾಕ್ ನಡುವಿನ ಪಂದ್ಯಗಳ ಮಹತ್ವ, ಗತಿಯೇ ಬೇರೆಯಾಗಿರುತ್ತದೆ. ಇತಿಹಾಸ ಕೆಣಕಿದರೆ ಹಲವಾರು ಜನರು ಪಂದ್ಯ ನೋಡನೋಡುತ್ತಲೇ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದ್ದಾರೆ. ಆ ಕ್ಷಣದ ರೋಚಕತೆ ತಡೆಯಲಾರದೆ ಹೀಗಾಯಿತೋ ಅಥವಾ ಆಕಸ್ಮಿಕವೋ ಹೇಳಲು ಸಾಧ್ಯವಿಲ್ಲ. ಸ್ಟೇಡಿಯಂಗಳಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಲು ತಕ್ಕ ಸಿದ್ಧತೆಯೂ ಇರುವುದಿಲ್ಲ.

ಆದರೆ, ಹೃದಯ ಬೇನೆ ಇರುವವರು, ಗಟ್ಟಿ ಗುಂಡಿಗೆ ಇಲ್ಲದವರು, ಪಂದ್ಯ ಏನಾಗುತ್ತದೋ ಏನೋ ಎಂದು ಹೆದರುವವರು, ಹಾರ್ಟ್ ಆಪರೇಷನ್ ಮಾಡಿಸಿಕೊಂಡಿರುವವರು ಟ್ವೆಂಟಿ20 ಪಂದ್ಯಗಳನ್ನು ನೋಡದಿರುವುದೇ ಉತ್ತಮ. ಅಥವಾ ಪಂದ್ಯ ರೋಚಕ ಕ್ಷಣಕ್ಕೆ ತಲುಪುತ್ತಿದ್ದಂತೆ ಕ್ರಿಕೆಟ್ ಬದಿಗಿಟ್ಟು ಒಂದು ವಾಕ್ ಹೋಗಿಬರುವುದು ಇನ್ನೂ ಉತ್ತಮ. ಕ್ರಿಕೆಟ್‌ಗಿಂತ ನಮ್ಮನ್ನು ನಂಬಿಕೊಂಡವರಿಗೆ ನಮ್ಮ ಜೀವನ ಮುಖ್ಯ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿ.25ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಟಿ20 ಪಂದ್ಯದಲ್ಲಿಯೂ ಒಂದು ಈ ಬಗೆಯ ದುರ್ಘಟನೆ ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 47 ವರ್ಷದ ಕಮಲ್ ಜೈನ್ ಎಂಬುವವರು, ಪಂದ್ಯ ಮುಗಿಯಲು ಇನ್ನು ಎರಡು ಓವರ್ ಇರುವಾಗಲೇ ಹೃದಯಾಘಾತಕ್ಕೊಳಗಾಗಿ ಅಸುನೀಗಿದ್ದಾರೆ. ಅವರನ್ನು ಕೂಡಲೆ ಹತ್ತಿರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.

ಮನೆಯಲ್ಲಿ ಕುಳಿತು ಅದು ಇದು ಹಾಳು ಮೂಳು ತಿನ್ನುತ್ತ ಪಂದ್ಯದ ಆನಂದ ಅನುಭವಿಸುವುದು ಒಂದು ರೀತಿಯದಾದರೆ, ಸ್ಟೇಡಿಯಂಗೆ ಹೋಗಿ ಸಾವಿರಾರು ಪ್ರೇಕ್ಷಕರ ಜೊತೆ ಮೆಕ್ಸಿಕನ್ ವೇವ್ ಮಾಡುತ್ತ, ಕೂಗಾಡುತ್ತ, ಜಿಗಿದಾಡುತ್ತ ಪಂದ್ಯ ನೋಡುವ ಖುಷಿಯೇ ಬೇರೆ ರೀತಿಯದು. ಅಲ್ಲಿ ಭಾವಾವೇಷದ ಜೊತೆ ರಕ್ತವೂ ರಭಸದಿಂದ ಉಕ್ಕಿ ಹರಿಯುತ್ತಿರುತ್ತದೆ. ಹೃದಯ ಬೇನೆ ಇರುವವರು ಯಾವುದಕ್ಕೂ ಹುಷಾರಾಗಿರಬೇಕು. ನೆನಪಿಡಿ, ದುರ್ಬಲ ಹೃದಯಗಳಿಗೆ ಟಿ20 ಕ್ರಿಕೆಟ್ ತಕ್ಕುದಲ್ಲ.

ಅಹ್ಮದಾಬಾದ್‌ನಲ್ಲಿ ಎರಡನೇ ಟಿ20 ಪಂದ್ಯ : ಭಾರತ ಮತ್ತು ಪಾಕಿಸ್ತಾನದ ನಡುವಣ ಎರಡನೇ ಟಿ20 ಪಂದ್ಯ ಡಿ.28ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ಇದರ ಹೊರತಾಗಿ ಮೂರು ಏಕದಿನ ಪಂದ್ಯಗಳನ್ನು ಪಾಕಿಸ್ತಾನ ಭಾರತದ ವಿರುದ್ಧ ಆಡಲಿದೆ. ಮೊದಲನೇ ಏಕದಿನ ಪಂದ್ಯ ಡಿ.30ರಂದು ಚೆನ್ನೈನಲ್ಲಿ, ಎರಡನೇ ಪಂದ್ಯ ಜ.3ರಂದು ಕೊಲ್ಕತಾದಲ್ಲಿ, ಮೂರನೇ ಪಂದ್ಯ ಜ.6ರಂದು ದೆಹಲಿಯಲ್ಲಿ ನಡೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The excitement of watching T20 cricket is not for the weak hearted people. A 47-year-old spectator watching the first T20 between India and Pakistan at M Chinnaswamy Stadium, Bangalore suffered a heart attack and died at a private hospital on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more