ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಅಧ್ಯಕ್ಷ ಈಶ್ವರಪ್ಪ ಮನೆಯಲ್ಲಿ ಏನೇನು ಸಿಕ್ತು?

By Srinath
|
Google Oneindia Kannada News

shimoga-lokayukta-raid-on-eshwarappa-yeilds-gold-silver
ಶಿವಮೊಗ್ಗ, ಡಿ.24: ಇಂದು ಬೆಳಗ್ಗೆ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರ ಮನೆಯಲ್ಲಿ 1.9 ಕೆಜಿ ಚಿನ್ನ, 37 ಕೆಜಿ ಬೆಳ್ಳಿ ಮತ್ತು 10 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಉಪ ಮಹಾನಿರ್ದೇಶಕ ಸತ್ಯನಾರಾಯಣ ಅವರು ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದು ಶಿವಮೊಗ್ಗದ ಮನೆಯಲ್ಲಿ ಮೂರು ಕಡೆಗಳಲ್ಲಿ ಮಾತ್ರ ದೊರೆತ ಚರಾಸ್ತಿಯಾಗಿದೆ. ಇನ್ನೂ 4 ಕಡೆ ದಾಳಿ ನಡೆದಿದೆ. ಅದರ ವಿವರ ಬರಬೇಕಿದೆ. ದಾಳಿ ಮುಂದುವರಿದಿದ್ದು, ದಾಳಿಯ ಸಂಪೂರ್ಣ ವಿವರ ಇನ್ನೂ ಬಹಿರಂಗವಾಗಿಲ್ಲ.

ಇನ್ನು, ಬೆಂಗಳೂರಿನಲ್ಲಿ ನಡೆದ ದಾಳಿಯ ವೇಳೆ ಏನೆಲ್ಲ ಸಿಕ್ಕಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಈ ಮಧ್ಯೆ, ಲೋಕಾಯುಕ್ತ ಪೊಲೀಸರು ಬೆಂಗಳೂರಿನ ವಸಂತನಗರದಲ್ಲಿರುವ ಈಶ್ವರಪ್ಪ ಅವರ ಮನೆಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬೆಂಗಳೂರಿನ ಮನೆಯಲ್ಲಿ ಮೂರು ಲಾಕರುಗಳು ಪತ್ತೆಯಾಗಿವೆ. ಆದರೆ ಅವುಗಳ ಬೀಗ ಭದ್ರವಾಗಿದ್ದು, ಲೋಕಾ ಪೊಲೀಸರು ಇನ್ನಷ್ಟೇ ಅವುಗಳನ್ನು ಒಡೆದು ಒಳಗೇನಿದೆ ಎಂಬುದನ್ನು ಪರಿಶೀಲಿಸಬೇಕಾಗಿದೆ.

English summary
Karnataka BJP president KS Eshwarappa has come under Shimoga lokayukta police have raided 7 places belonging to KSE in Shimoga today (Dec 24). Lokayukta SP Linga Reddy is in charge of the raid. The raids yeild 1.9 kg gold, 37 kg silver and Rs 10 lakh cash says Lokayukta ADGP Satyanarayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X