ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶ್ವರಪ್ಪ ಬೆಂಗಳೂರು ಮನೆಗೆ ಸರಕಾರಿ ಬೀಗ ಬಿತ್ತು

By Srinath
|
Google Oneindia Kannada News

shimoga-lokayukta-police-raid-bjp-ks-eshwarappa-houses
ಶಿವಮೊಗ್ಗ, ಡಿ.24: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರ ಮನೆ, ಕಚೇರಿಗಳು ಮತ್ತು ಪುತ್ರನ ಮನೆಯ ಮೇಲೆ ಹೀಗೆ ಒಟ್ಟು 7 ಕಡೆ ಇಂದು ಶಿವಮೊಗ್ಗದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಗುಂಡಪ್ಪ ಶೆಡ್ ನಿವಾಸ, ಪಿಎಸಿಇ ಕಾಲೇಜು, ವಾಸುದೇವದತ್ತ ಎಂಟರ್ ಪ್ರೈಸಸ್, ಟ್ರ್ಯಾಕ್ಟರ್ ಷೋರೂಂ ಮುಂತಾದ ಕಡೆ ದಾಳಿ ನಡೆದಿದೆ. ಜತೆಗೆ ಸ್ಟ್ಯಾಂಪ್ ವೆಂಡರ್ ಸೋಮಶೇಖರ್ ಮನೆಯ ಮೇಲೂ ದಾಳಿ ನಡೆದಿದೆ. ಒಟ್ಟು 5 ಜಿಲ್ಲೆಗಳ 70 ಲೋಕಾಯುಕ್ತ ಅಧಿಕಾರಿಗಳು ಈ ದಾಳಿ ನಡೆಸುತ್ತಿದ್ದಾರೆ. ಇಂದು ಸಂಜೆಯವರೆಗೂ ದಾಳಿ ಮುಂದುವರಿಯುವ ಸಾಧ್ಯತೆಯಿದೆ.

ಆದರೆ ದಾಳಿ ಇಷ್ಟೊಂದು ತಡವಾಗಿ ನಡೆಸುತ್ತಿರುವುದೇಕೆ? ಅವರು ಪ್ರಭಾವಿ ವ್ಯಕ್ತಿ. ಉಪ ಮುಖ್ಯಮಂತ್ರಿ. ಪಕ್ಷದಲ್ಲೂ ಪ್ರಭಾವಿ. ಅವರಿಂದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಅವರನ್ನು ಬಂಧಿಸುವುದು ಸೂಕ್ತ ಎಂದು ದೂರುದಾರ ವಿನೋದ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಮನೆಗೆ ಸರಕಾರಿ ಬೀಗ ಬಿತ್ತು:
ಬೆಂಗಳೂರಿನ ವಸಂತನಗರದ ಚಕ್ರವರ್ತಿ ಲೇಔಟಿನಲ್ಲಿರುವ ಉಪಮುಖ್ಯಮಂತ್ರಿ ಈಶ್ವರಪ್ಪ ಮನೆಯ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಆರಂಭಿಸಿದ್ದಾರೆ. ಆದರೆ ಈಶ್ವರಪ್ಪ ಅವರು ಕೊಪ್ಪಳದತ್ತ ಹೊರಟಿರುವುದರಿಂದ ಮನೆಯಲ್ಲಿ ಯಾರೂ ಇಲ್ಲವೆಂದು ದಾಳಿಯನ್ನು ಸ್ಥಗಿತಗೊಳಿಸಲಾಗಿದೆ.

ಈ ಮಧ್ಯೆ ಈಶ್ವರಪ್ಪ ಸದ್ಯಕ್ಕೆ ಆಗಮಿಸುವುದಿಲ್ಲವೆಂದು ಖಾತರಿಪಡಿಸಿಕೊಂಡ ಲೋಕಾ ಪೊಲೀಸರು ಮನೆಗೆ ಸರಕಾರಿ ಬೀಗ ಹಾಕಿಕೊಂಡು ಹೋಗಿದ್ದಾರೆ. ಉಪ ಮುಖ್ಯಮಂತ್ರಿಯೊಬ್ಬರ ಮನೆಗೆ ಸರಕಾರಿ ಬೀಗ ಬಿದ್ದಿರುವುದು ಬಹುಶಃ ಇದೇ ಮೊದಲು. ಈಶ್ವರಪ್ಪ ವಾಪಸಾಗುತ್ತಿದ್ದಂತೆ ಮನೆಯನ್ನು ಶೋಧಿಸಲಿದ್ದಾರೆ.

ಈ ಮಧ್ಯೆ, ಈಶ್ವರಪ್ಪ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯು ಇಂದು ಶಿವಮೊಗ್ಗ ವಿಶೇಷ ಲೋಕಾಯುಕ್ತ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.

English summary
Karnataka BJP president KS Eshwarappa has come under Shimoga lokayukta police scanner. The police have raided 7 places belonging to KSE in Shimoga today (Dec 24). Lokayukta SP Shiv Linga Reddy is in charge of the raid
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X