ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರದೃಷ್ಟಕರ, ಲೋಕಾ ದಾಳಿಗೆ ಕಾಂಗ್ರೆಸ್ 'ಕೈ'ವಾಡ

By Srinath
|
Google Oneindia Kannada News

Congress hand in Lokayukta police raid on KS Eshwarappa houses BJP MP Nalin Kumar Katil
ಮಡಿಕೇರಿ, ಡಿ.24: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರ ಮನೆ, ಕಚೇರಿಗಳ ಮೇಲೆ ಸೋಮವಾರ ನಸುಕಿನಲ್ಲಿ ನಡೆದ ಲೋಕಾಯುಕ್ತ ರೇಡ್ ಹಿಂದೆ ವಿರೋಧ ಪಕ್ಷವಾದ ಕಾಂಗ್ರೆಸ್ಸಿನ ಕೈವಾಡವಿದೆ ಎಂದು ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಯಡಿಯೂರಪ್ಪ ಬಿಜೆಪಿ ತೊರೆದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಪಾಳಯದಲ್ಲಿ ಹೇರಳವಾಗಿ ಕಾಣಿಸಿಕೊಂಡಿರುವ ನಳೀನ್ ಕುಮಾರ್ ಅವರು ಈಶ್ವರಪ್ಪ ಅವರ ಕಷ್ಟಕಾಲಕ್ಕೆ ಈಶ್ವರಪ್ಪ ಪರ ನಿಂತಿದ್ದು, ಲೋಕಾಯುಕ್ತ ದಾಳಿ ದುರದೃಷ್ಟಕರ ಎಂದು ಹೇಳಿದ್ದಾರೆ.

ಈ ಮಧ್ಯೆ, ತಮ್ಮ ಮನೆಯ ಬೀಗ ಒಡೆದು ಲೋಕಾ ಪೊಲೀಸರು ತಮ್ಮ ಆಸ್ತಿ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ ಎಂಬ ಸುದ್ದಿ ಕೊಪ್ಪಳದಲ್ಲಿರುವ ಈಶ್ವರಪ್ಪ ಅವರ ಕಿವಿಗೆ ಬಿದ್ದಿದೆ.

ಲೋಕಾಯುಕ್ತ ಕೋರ್ಟಿನಲ್ಲಿ ತಮ್ಮ ವಿರುದ್ಧ ಕೇಸು ದಾಖಲಾಗುತ್ತದೆ ಎಂದು ನಿರೀಕ್ಷಿಸಿದ್ದಂತೆ ಈಶ್ವರಪ್ಪನವರು 'ಲೋಕಾಯುಕ್ತ ಪೊಲೀಸರ ದಾಳಿ ನಿರೀಕ್ಷಿತ' ಎಂದಿದ್ದಾರೆ. ದಾಳಿ ನಡೆಸಲಿ ಬಿಡಿ. ಅದನ್ನು ನಾನು ಸ್ವಾಗತಿಸುತ್ತೇನೆ. ಪ್ರಕರಣದಲ್ಲಿ ನಾನು ನಿರ್ದೋಷಿ ಎಂಬುದು ಸಾಬೀತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದಷ್ಟು ರಾಜಕೀಯದ ಬಗ್ಗೆಯೂ ಮಾತನಾಡಿರುವ ಈಶ್ವರಪ್ಪ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಎಂದು ಜಪಿಸುತ್ತಿರುವವರು ಮೊದಲು ಪಕ್ಷವನ್ನು ಬಿಡಲಿ. ಆಮೇಲೆ ಪಕ್ಷದ ವಿರುದ್ಧ ಮಾತನಾಡಲಿ ಎಂದು ಆಶಿಸಿದ್ದಾರೆ.

'ಪಕ್ಷದ ವತಿಯಿಂದ ಮೊದಲ 150 ಟಿಕೆಟ್ ರೆಡಿಯಾಗಿದೆ. ಜನವರಿ 20ರ ನಂತರ ಮೊದಲ ಪಟ್ಟಿ ಬಿಡುಗಡೆಯಾಗಲಿದೆ' ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

English summary
Congress hand in Lokayukta police raid on KS Eshwarappa houses BJP MP Nalin Kumar Katil. Karnataka BJP president KS Eshwarappa has come under Shimoga lokayukta police scanner. The police have raided
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X