ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್ ಸುದ್ದಿ ಹಾಕದಂತೆ ಸುವರ್ಣ ವಾಹಿನಿಗೆ ಸೂಚನೆ

By Mahesh
|
Google Oneindia Kannada News

Civil court Notice to Suvarna 24 X 7 news channel BMIC NICE Scam
ಬೆಂಗಳೂರು, ಡಿ.22: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆ ನಿರ್ಮಾಣ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸುದ್ದಿ ಪ್ರಸಾರ ಮಾಡಿದ್ದ ಸುವರ್ಣ ನ್ಯೂಸ್ 24 ‍X 7 ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ನೈಸ್ ಯೋಜನೆ ಕುರಿತು ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ಮಧ್ಯಂತರ ಆದೇಶ ನೀಡಲಾಗಿದೆ. ನೈಸ್ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸುವರ್ಣ ಸುದ್ದಿ ವಾಹಿನಿ ಪ್ರಸಾರ ಮಾಡಿದ್ದ ಸುದ್ದಿಯ ವಿರುದ್ಧ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.

ಸುಳ್ಳು ಸುದ್ದಿ ಪ್ರಸಾರ ಮಾಡಿದ ಕಾರಣಕ್ಕೆ ನೂರು ಕೋಟಿ ರೂ. ತುಂಬಿಕೊಡಬೇಕೆಂದು ನೈಸ್ ಕಂಪನಿ ಹೈಕೋರ್ಟ್ ನಲ್ಲಿ ಮನವಿ ಮಾಡಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಚಳಿಗಾಲದ ರಜಾ ಅವಧಿಯ ನ್ಯಾಯಪೀಠ, ನೂರು ಕೋಟಿ ರೂ. ಮೌಲ್ಯದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಪೀಠ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಕಾರಿಡಾರ್ ರಸ್ತೆ ನಿರ್ಮಾಣ ಯೋಜನೆ ಕುರಿತು ಇನ್ನು ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ಮಧ್ಯಂತರ ಆದೇಶ ನೀಡಿದೆ. ಸುವರ್ಣ ಸುದ್ದಿ ವಾಹಿನಿಗೆ ನೋಟಿಸ್ ಜಾರಿ ಮಾಡಿದೆ.

ಕಾಮಗಾರಿ ಹಂತದಲ್ಲಿ ಇರುವ ನೈಸ್ ಯೋಜನೆ ಕುರಿತು ಸುವರ್ಣ ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡುತ್ತಿರುವ ಸುದ್ದಿಯಿಂದ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಲಿಮಿಟೆಡ್‌ಗೆ ಭಾರಿ ನಷ್ಟವಾಗಿದೆ. ಸರ್ಕಾರದ ಒಪ್ಪಿಗೆ ಮೇರೆಗೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಜೊತೆಗೆ ಈ ಯೋಜನೆ ಪ್ರಶ್ನಿಸಿ ಹಲವರು ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಎರಡು ಕೋರ್ಟ್‌ನಲ್ಲಿ ನೈಸ್ ಪರವಾಗಿಯೇ ತೀರ್ಪು ಬಂದಿದೆ. ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿರುವಾಗಲೇ ನ್ಯಾಯಾಲಯದ ಆದೇಶವನ್ನೆ ಪ್ರಶ್ನೆ ಮಾಡುತ್ತಿ
ದ್ದಾರೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ.

ಇದಲ್ಲದೆ, ನೈಸ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸ್ಥಳೀಯ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜೊತೆಗೆ ನೈಸ್ ಕಂಪನಿ ವಿರುದ್ಧ ಸುಳ್ಳು ಆರೋಪ ಮಾಡಿ ಸಾರ್ವಜನಿಕರ ವಲಯದಲ್ಲಿ ಮಾನನಷ್ಟ ಉಂಟು ಮಾಡುತ್ತಿದ್ದಾರೆ.

ಇದರಿಂದ ಯೋಜನೆಗೆ ಸಾಲ ನೀಡುವುದಕ್ಕೆ ಮುಂದೆ ಬಂದಿರುವ ಬ್ಯಾಂಕ್‌ಗಳನ್ನು ಕಂಪನಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದ ಕಾಮಗಾರಿ ಹಂತದಲ್ಲಿರುವ ಯೋಜನೆಗೆ ಮತ್ತಷ್ಟು ಕುಂಠಿತವಾಗಲು ಕಾರಣವಾಗಿದೆ ಎಂದು ನೈಸ್ ಕಂಪನಿ ಪರ ವಕೀಲರು ತಿಳಿಸಿದ್ದಾರೆ.

English summary
City Civil court served notice to Suvarna news Channel 24 X 7 for allegedly telecasting news on BMIC NICE Scam. Court in its interim order instructed Suvarna Channel not to telecast till the further orders given. Earlier a defamation case filed against Suvarna Channel by NICE company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X