ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಳಯ ವದಂತಿ ಟುಸ್: ಟ್ವಿಟ್ಟರ್ ನಲ್ಲಿ ನಗೆಪಾಟಲು

By Mahesh
|
Google Oneindia Kannada News

ಬೆಂಗಳೂರು, ಡಿ.21: ಮಾಯನ್ ಕ್ಯಾಲೆಂಡರ್ ಬದಲಾಗಿ ಜಗತ್ತಿನಲ್ಲಿ ಪ್ರಳಯವಾಗಲಿದೆ ಎಂಬ ಸುದ್ದಿ ಈಗ ವಿಶ್ವದ ನಗೆಪಾಟಲಿನ ಸಂಗತಿಯಾಗಿದೆ. ಸಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಂತೂ ಪ್ರಳಯದ್ದೇ ಸುದ್ದಿ.

5125 ವರ್ಷ ಹಳೆಯದಾದ ಮಾಯನ್ ಕ್ಯಾಲೆಂಡರ್ ಪ್ರಕಾರ ಡಿ.21, 2012ರಂದು ಪ್ರಳಯವಾಗಬೇಕಿತ್ತು. ಆದರೆ, ಗ್ರೆಗೋರಿಯನ್ ಕ್ಯಾಲೆಂಡರ್, ಹಿಂದೂ ದಿನದರ್ಶಿ ನೋಡುವ ನಮಗೆ ಏನು ಆಗಿಲ್ಲ, ಆಗೋದೂ ಇಲ್ಲ ಬಿಡಿ ಎಂದು ಎಲ್ಲರೂ ಹೇಳಿಕೊಂಡು ನಗುತ್ತಿದ್ದಾರೆ.

ಮಾಯನ್ ಕ್ಯಾಲೆಂಡರ್ ನೋಡಿ ನಾವು ದೈನಂದಿನ ಕ್ರಿಯೆ ನಡೆಸುತ್ತಿಲ್ಲ. ಮಾಯನ್ ಕ್ಯಾಲೆಂಡರ್ ಪ್ರಾಕೃತಿಕ ಚಟುವಟಿಕೆ ಹಾಗೂ ಕಾಸ್ಮಿಕ್ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇದು ಅಲ್ಲಿ ಜನರ ನಂಬಿಕೆ ಇರಬಹುದು. ಇದರಿಂದ ವಿಶ್ವದ ಎಲ್ಲೆಡೆ ತೊಂದರೆಯಾಗುವ ಸಾಧ್ಯತೆ ಇಲ್ಲ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದರು.

ಅನ್ಯಗ್ರಹದಾಳಿ, ಸೌರ ಮಾರುತ ಭೀತಿಯೂ ಇಲ್ಲ: ನಿಬಿರು ಗ್ರಹ ಅಥವಾ ಇತರೆ ಕಂದು ಬಣ್ಣದ ಕುಬ್ಜ ಗ್ರಹಗಳು ಭೂಮಿಗೆ ಅಪ್ಪಳಿಸುವುದು ಇಂಟರ್ನೆಟ್ ನಲ್ಲಿ ಹರಿದಾಡಿರುವ ಸುಳ್ಳು ಕಥೆ.

ನಿಬಿರು ಅಥವಾ ಪ್ಲಾನೆಟ್ ‍X ಭೂ ಗ್ರಹದೆಡೆಗೆ ಧಾವಿಸುತ್ತಿದ್ದರೆ ದಶಕದ ಹಿಂದೆಯೇ ಖಗೋಳ ಶಾಸ್ತ್ರಜ್ಞರಿಗೆ ತಿಳಿಯುತ್ತಿತ್ತು. ನಿಬಿರು ಇರೋದು ನಿಜವಾಗಿದ್ದರೆ ಈ ವೇಳೆಗೆ ಬರೀ ಕಣ್ಣಿಗೆ ಕಾಣಿಸುತ್ತಿತ್ತು. ಪ್ಲುಟೋನಂತೆ ಎರೀಸ್ ಕುಬ್ಜ ಗ್ರಹ, ಸೌರ ಮಂಡಲದ ಹೊರ ವಲಯದಲ್ಲಿದೆ. ಇದರಿಂದ ಅಪಾಯವಿಲ್ಲ. ಭೂ ಗ್ರಹದಿಂದ 4 ಬಿಲಿಯನ್ ಮೈಲಿಗಳ ದೂರದಲ್ಲಿ ಸಂಚರಿಸಬಹುದು.

ಸೌರ ಮಂಡಲದ ಸಹಜ ಪ್ರಕ್ರಿಯೆಗಳಿಂದ ಭೂಮಿ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ. ಸೌರ ಮಾರುತಗಳ ಪ್ರಖರತೆ 11 ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ. ಇದರಿಂದ ಉಪಗ್ರಹ ಸಂವಹನ ಶಕ್ತಿ ಕೆಲಕಾಲ ವ್ಯತ್ಯಯ ವಾಗಬಹುದು ಅಷ್ಟೇ.

ಸಾಮಾನ್ಯವಾಗಿ ಟಿವಿಯಲ್ಲಿ ಈ ರೀತಿ ಸಂದೇಶವನ್ನು ಪ್ರಸಾರ ಮಾಡುವುದನ್ನು ಕಂಡಿರಬಹುದು. 2012ರಲ್ಲಿ ಜಗತ್ತನ್ನೇ ನಾಶ ಮಾಡಬಲ್ಲ ವಿಕಿರಣವಾಗಲಿ, ಸೌರ ಮಾರುತವಾಗಲಿ ಭೂಮಿಗೆ ತಟ್ಟುವುದಿಲ್ಲ.

Doomsday Theory Doomed


Jitin Sharma ‏@jitin84 : I think the Mayans must have used the Duckworth-Lewis method to calculate the end of world date !! Happy #Doomsday everyone ;)

Nick Holliday ‏@nicco876 : "I gave my wife my credit card to shop this morning!"...LOL!!!! Funniest and most stupid thing I've read all day. #Doomsday

@vinay : ಪ್ರಳಯಕ್ಕೆ ಮನುಷ್ಯನನ್ನು ಕಂಡರೆ ಎಷ್ಟು ಭಯ.. ಕಾಲ ಎಷ್ಟು ಕೆಟ್ಟು ಹೋಗಿದೆ ಎಂದರೆ, ಪ್ರಳಯ ಕೂಡಾ ಮನುಷ್ಯನಿಗೂ ಹೆದರಿಕೊಂಡು ಮಾಯವಾಗಿದೆ.

hijabsta ‏@hijabsta If you're reading this tweet, you're still alive and the world clearly did not end. Congratulations! #Mayan #DoomsDay

SuckedToTheRafters:D ‏@nileshnahar I don't mind if its #doomsday today. #IWish Im not the only person surviving it.! I get bored very easy xP

Caleb $mith ‏@Ca_s_per #EndOfTheWorldConfessions I am actually dead and I'm a ghost writing this tweet #doomsday

Sonni Abatta ‏@SonniAbatta It's been nice coexisting with you all. I'm off to hopefully sleep through our collective demise. #doomsday #mayans #cantkeepmedown

Derrike Palmer ‏@derrike I'm starting my own prediction! Pokemon will end the world on April 12th, 2013 at 11:59PM. You're welcome. #Doomsday #Apocalypse

English summary
So, did you pray hard for the safety or wanted an end of the World? It does not matter in which group do you belong to. For all those who had slightest of belief in "Doomsday Theory" felt nothing less than "stupid", as the "World is Safe", and you all can party hard now to welcome 2013. Let the "apocalypse prophesies" remain quiet for sometime now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X