ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಪ್ ಬ್ಯಾಂಕ್ 2433, ಸೆಂಟ್ರಲ್ ನಲ್ಲಿ 3196 ನೇಮಕ

By Mahesh
|
Google Oneindia Kannada News

Corporation Bank to hire 2,433 this fiscal
ಮಂಗಳೂರು, ಡಿ.21: ದೇಶದ ಅತಿದೊಡ್ಡ ಬ್ಯಾಂಕಿಂಗ್ ಜಾಲ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಬಗ್ಗೆ ಪ್ರಕಟಣೆ ನೀಡಿದ ನಂತರ ಕಾರ್ಪೋರೇಷನ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಪ್ರಸಕ್ತ ವರ್ಷ ನೇಮಕಾತಿ ವಿವರಗಳನ್ನು ಹೊರಹಾಕಿದೆ.

ಪ್ರಸಕ್ತ ವರ್ಷದಲ್ಲಿ ಸುಮಾರು 2433 ನೇಮಕಾತಿಗಳನ್ನು ಮಾಡಿಕೊಳ್ಳುವುದಾಗಿ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಚೇರ್ಮನ್ ಅಜಯ್ ಕುಮಾರ್ ಹೇಳಿದ್ದಾರೆ. 1100 ಅಧಿಕಾರಿ ಮಟ್ಟದಲ್ಲಿ ಹಾಗೂ ಉಳಿದದ್ದು ಕ್ಲರ್ಕ್ ಮಟ್ಟದ ನೇಮಕಾತಿಯಾಗಲಿದೆ ಎಂದು ಅಜಯ್ ಕುಮಾರ್ ಹೇಳಿದರು.

ವಿಪತ್ತು ನಿರ್ವಹಣೆ, ಹಣಕಾಸು ವಿವರ, ಐಟಿ, ಕ್ರೆಡಿಟ್ ಹಾಗೂ ಕೃಷಿ ಸಾಲ ..ಇತ್ಯಾದಿ ಕ್ಷೇತ್ರಗಳಲ್ಲಿ ತಜ್ಞರನ್ನು ನೇಮಿಸಿಕೊಂಡು ಉತ್ತಮ ತಂಡ ಕಟ್ಟುವತ್ತ ಬ್ಯಾಂಕ್ ಗಮನ ಹರಿಸಿದೆ ಎಂದು ಅಜಯ್ ಕುಮಾರ್ ತಿಳಿಸಿದರು.

ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು ವರ್ಷಾಂತ್ಯದ ತನಕ ಜಾರಿಯಲ್ಲಿರುತ್ತದೆ. ಬ್ಯಾಂಕಿನಲ್ಲಿರುವ ಹಾಲಿ ಉದ್ಯೋಗಿಗಳು ರಾಜೀನಾಮೆ ನೀಡಿ ಹೊರ ಹೋಗುವ ಪ್ರಮಾಣ ತಗ್ಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ನಡೆಯುವ ಸಾಧ್ಯತೆಯೂ ಇದೆ.

ಏಕ ಗವಾಕ್ಷಿ ಮಾದರಿಯಲ್ಲಿ ಕ್ಲರ್ಕ್ ಗಳ ನೇಮಕಾತಿ ನಡೆಯಲಿದೆ. attrition ಪ್ರಮಾಣ 8.17% ನಷ್ಟಿದೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಿಂದ ಅಭ್ಯರ್ಥಿಗಳು ಆಫರ್ ಪಡೆಯುತ್ತಿರುವುದು ಇದಕ್ಕೆ ಕಾರಣ ಇರಬಹುದು. ಮುಂಬರುವ ವರ್ಷಗಳಲ್ಲಿ ಉತ್ತಮ ನೇಮಕಾತಿ ಕ್ಷಮತೆ ಹೊಂದುವ ನಿರೀಕ್ಷೆಯಿದೆ ಎಂದು ಹೇಳಿದರು.

ಸೆಂಟ್ರಲ್ ಬ್ಯಾಂಕ್: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 3196 ಕ್ಲರ್ಕ್ ಗಳ ನೇಮಕಾತಿ ಮಾಡಿಕೊಳ್ಳಲಾಗಿದೆ. ಐಬಿಪಿಎಸ್ 2011-12ರಲ್ಲಿ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತೀರ್ಣರಾದವರನ್ನು ನೇಮಕಾತಿಗೆ ಪರಿಗಣಿಸಲಾಗುವುದು ಎಂದು ಬ್ಯಾಂಕ್ ಪ್ರಕಟಿಸಿದೆ.

ಡಿ.22 ರಿಂದ ಆನ್ ಲೈನ್ ನಲ್ಲಿ ಅರ್ಜಿ ಲಭ್ಯವಾಗಿರುತ್ತದೆ ಹಾಗೂ ಜನವರಿ 7, 2013ರಂದು ಕೊನೆಗೊಳ್ಳಲಿದೆ. ಸೆಂಟ್ರಲ್ ಬ್ಯಾಂಕ್ ವೆಬ್ ಸೈಟ್ ನಲ್ಲಿ ಲಭ್ಯ ಇರುತ್ತದೆ.
ರಸಕ್ತ ಆರ್ಥಿಕ ವರ್ಷ 2012-13ರಲ್ಲಿ ಸುಮಾರು 63,200ಕ್ಕೂ ಅಧಿಕ ಹೊಸ ನೇಮಕಾತಿ ನಡೆಸಲಾಗುತ್ತದೆ ಎಂದು ಚಿದಂಬರಂ ಭರವಸೆ ನೀಡಿದ್ದರು.

ಭರಪೂರ ನೇಮಕಾತಿ: ಮಾರ್ಚ್ 2012ರ ಕೊನೆಗೆ ಒಟ್ಟಾರೆ ಸಾರ್ವಜನಿಕ ವಲಯದ ಬ್ಯಾಂಕ್ (ರಾಷ್ಟ್ರೀಕೃತ ಬ್ಯಾಂಕ್, ಎಸ್ ಬಿಐ ಹಾಗೂ ಜೊತೆಗಿನ ಬ್ಯಾಂಕ್ ಗಳು) ಗಳ ಉದ್ಯೋಗಸ್ಥರ ಸಂಖ್ಯೆ 8,01,509 ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದರಲ್ಲೇ ಸುಮಾರು 1,200 ಅಧಿಕಾರಿಗಳು, 20,000 ಕ್ಲರ್ಕ್ ಗಳು ಈ ವರ್ಷ ನೇಮಕವಾಗಲಿದ್ದಾರೆ.

ಸೆಪ್ಟೆಂಬರ್ ಕೊನೆಗೆ ಎಸ್ ಬಿಐ ಹಾಗೂ ಜೊತೆಗಿನ ಐದು ಬ್ಯಾಂಕ್ ಗಳ ಖಾಲಿ ಹುದ್ದೆಗಳ ಸಂಖ್ಯೆ 28,979 ನಷ್ಟಿತ್ತು. ಸರ್ಕಾರಿ ಸ್ವಾಮ್ಯದ ಎಸ್ ಬಿಐ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ 7,452 ಜನ ಉದ್ಯೋಗಗಳನ್ನು ಸಂಸ್ಥೆ ಕಳೆದುಕೊಂಡಿದೆ.

ಆದರೆ, ಈ ಆರ್ಥಿಕ ವರ್ಷದಲ್ಲಿ 9,500 ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲಾಗುತ್ತದೆ. 2012-13ರಲ್ಲಿ 9,500ಕ್ಕೂ ಅಧಿಕ ಕ್ಲರ್ಕ್ ಹುದ್ದೆಗಳು ಲಭ್ಯವಿರುತ್ತದೆ ಎಂದು ಬ್ಯಾಂಕ್ ಪ್ರಕಟಿಸಿದ್ದಾರೆ.

ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ನಲ್ಲಿ ಶಾಶ್ವತ ಉದ್ಯೋಗಿಗಳ ಸಂಖ್ಯೆ 2,15,481ನಷ್ಟಿದೆ. 2009-10 ಆರ್ಥಿಕ ವರ್ಷದಲ್ಲಿ 58,900 ನೇಮಕಾತಿ, 2010-11ರಲ್ಲಿ 57,758 ನೇಮಕಾತಿ ಹಾಗೂ 2011-12 ರಲ್ಲಿ 55,632 ನೇಮಕಾತಿ ಮಾಡಿಕೊಳ್ಳಲಾಗಿತ್ತು. ಪ್ರಸಕ್ತ ವರ್ಷ ಈ ಸಂಖ್ಯೆ ಹೆಚ್ಚಾಗಲಿದೆ.

English summary
Corporation Bank plans to recruit 2,433 personnel during 2012-13, according to its Chairman and Managing Director Ajai Kumar. Central Bank of India is recruiting 3,196 clerks across the country. Candidates who have appeared in the common written exam conducted by IBPS in 2011-12
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X