ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳು

ಕಳೆದ ಹತ್ತು ವರ್ಷಗಳಲ್ಲಿ ಚಲಿಸುತ್ತಿರುವ ವಾಹನದಲ್ಲಿ 10 ಅತ್ಯಾಚಾರಗಳು ನಡೆದಿರುವುದು, ದೆಹಲಿಯಲ್ಲಿ ಮಹಿಳೆಯರ ಸುರಕ್ಷಿತತೆಯ ಬಗ್ಗೆ ಹಲವಾರು ಪ್ರಶ್ನೆಗಳೇಳುವಂತೆ ಮಾಡಿದೆ.

By Prasad
|
Google Oneindia Kannada News

ನವದೆಹಲಿ, ಡಿ. 18 : ಚಲಿಸುತ್ತಿದ್ದ ಬಸ್ಸಿನಲ್ಲೇ 23 ವರ್ಷದ ಯುವತಿಯೋರ್ವಳನ್ನು ನಾಲ್ಕು ಜನ ಕಾಮಿಗಳು ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದಲ್ಲದೆ, ಅತ್ಯಾಚಾರ ಮಾಡಿ ಚಲಿಸುತ್ತಿದ್ದ ಬಸ್ಸಿನಿಂದ ಆಕೆಯನ್ನು ಆಕೆಯ ಸ್ನೇಹಿತನನ್ನು ತಳ್ಳಿರುವ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ದೆಹಲಿ ಮಹಿಳೆಯರ ಪಾಲಿನ ಅತ್ಯಂತ ಅಸುರಕ್ಷಿತ ನಗರಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. [ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದ ಸುಪ್ರೀಂ ಕೋರ್ಟ್]

ಇದೇನು ದೇಶದ ರಾಜಧಾನಿಯೋ, ಅತ್ಯಾಚಾರಗಳ ರಾಜಧಾನಿಯೋ ಅಥವಾ ಮಹಿಳೆಯರ ಪಾಲಿನ ಯಮಲೋಕವೋ ಎಂಬಂತಾಗಿದೆ ದೆಹಲಿ. ಅತ್ಯಾಚಾರಿಗಳನ್ನೇನೋ ಬಂಧಿಸಲಾಗಿದೆ, ಆದರೆ ಮುಂದೆ ಇಂತಹ ಘಟನೆ ನಡೆಯುವುದಿಲ್ಲ ಎಂಬುವುದನ್ನು ನಂಬುವುದಾದರೂ ಹೇಗೆ ಎಂದು ನಾಗರಿಕರು ಆತಂಕದಿಂದ ಕೇಳುತ್ತಿದ್ದಾರೆ. ರಾತ್ರಿಯ ಹೊತ್ತು ಹೊರಗೆ ಕಾಲಿಡುವುದು ಅತ್ಯಾಚಾರಕ್ಕೆ ಆಹ್ವಾನ ನೀಡಿದಂತಾಗಿದೆ.

ಆಘಾತಕಾರಿ ಸಂಗತಿಯೆಂದರೆ, ಕಳೆದ ಹತ್ತು ವರ್ಷಗಳಲ್ಲಿ ಚಲಿಸುತ್ತಿರುವ ವಾಹನದಲ್ಲಿ 10 ಅತ್ಯಾಚಾರಗಳು ನಡೆದಿರುವುದು, ದೆಹಲಿಯಲ್ಲಿ ಮಹಿಳೆಯರ ಸುರಕ್ಷಿತತೆಯ ಬಗ್ಗೆ ಹಲವಾರು ಪ್ರಶ್ನೆಗಳೇಳುವಂತೆ ಮಾಡಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ, ಇದೇ ವರ್ಷ ನಾಲ್ಕು ಘಟನೆಗಳಲ್ಲಿ ಚಲಿಸುತ್ತಿರುವ ವಾಹನದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ.

ಈ ಕುರಿತು ಅಂಕಿಅಂಶಗಳನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ಪ್ರಸ್ತುತ ವರ್ಷ 580 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದರೆ, ಕಳೆದ ವರ್ಷ 480 ಅತ್ಯಾಚಾರದ ಪ್ರಕರಣಗಳು ದಾಖಲಾಗಿದ್ದವು. ವರ್ಷದಿಂದ ವರ್ಷಕ್ಕೆ ಇಂತಹ ಘಟನೆಗಳು ಜಾಸ್ತಿಯಾಗುತ್ತಿದ್ದರೂ ಪೊಲೀಸ್ ಇಲಾಖೆ ಏನೂ ಮಾಡದಂತಾಗಿದೆ. ಅತ್ಯಾಚಾರಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ನೀಡದಿದ್ದರೆ ಇಂತಹ ಇನ್ನೆಷ್ಟು ಅತ್ಯಾಚಾರಗಳನ್ನು ಮುಂದಿನ ವರ್ಷ ನೋಡಬೇಕಾಗುತ್ತದೋ? [ಈ ಪ್ರಕರಣದಲ್ಲಿ ಬಾಲಾಪರಾಧಿ ಆರೋಪ ಸಾಬೀತು]

2001ರಲ್ಲಿ

2001ರಲ್ಲಿ

ಈ ಶತಮಾನದ ಮೊದಲ ವರ್ಷ ಇಂತಹ ಮೊದಲ ಪ್ರಕರಣ ದೆಹಲಿಯಲ್ಲಿ ದಾಖಲಾಗಿತ್ತು. ಬ್ಲೂಲೈನ್ ಬಸ್ಸು ಚಲಿಸುತ್ತಿದ್ದಾಗ 26 ವರ್ಷದ ಮಹಿಳೆಯನ್ನು ನಾಲ್ವರು ಅತ್ಯಾಚಾರ ಮಾಡಿದ್ದರು. ದಕ್ಷಿಣ ದೆಹಲಿಯ ಮಧುರಾ ರಸ್ತೆಯಲ್ಲಿ ಬಸ್ಸನ್ನು ಹತ್ತಿದ ಮಹಿಳೆಯ ಮೇಲೆ ನಾಲ್ವರು ಅತ್ಯಾಚಾರವೆಸಗಿ ಚಲಿಸುತ್ತಿದ್ದ ಬಸ್ಸಿನಿಂದಲೇ ಆಕೆಯನ್ನು ತಳ್ಳಿದ್ದರು.

2003ರಲ್ಲಿ

2003ರಲ್ಲಿ

2003ರಲ್ಲಿ 35 ವರ್ಷದ ಚಿತ್ರ ನಿರ್ಮಾಪಕಿಯನ್ನು ದಕ್ಷಿಣ ದೆಹಲಿಯ ಸಿರಿ ಫೋರ್ಟ್ ಆಡಿಟೋರಿಯಂ ಬಳಿ ಅಪಹರಿಸಿದ್ದ ಇಬ್ಬರು ಕಾಮಿಗಳು ಚಲಿಸುತ್ತಿದ್ದ ಕಾರಿನಲ್ಲಿ ಬಲಾತ್ಕಾರ ಮಾಡಿದ್ದರು. ಆರೋಪಿಗಳು ನಂತರ ಆ ಮಹಿಳೆಯನ್ನು ಪಂಚಶೀಲ ರಸ್ತೆಯ ಬಳಿ ಬಿಸಾಕಿ ಹೋಗಿದ್ದರು.

2005ರಲ್ಲಿ

2005ರಲ್ಲಿ

ಮತ್ತೆ ದಕ್ಷಿಣ ದೆಹಲಿಯಲ್ಲಿ, 2005ರಲ್ಲಿ ಈ ಘಟನೆ ನಡೆದಿತ್ತು. ದೌಲಾ ಕುವಾನ್ ಬಳಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ರಾತ್ರಿ ತಿನ್ನಲು ಆಹಾರ ಖರೀದಿಸಿ ತನ್ನ ಸ್ನೇಹಿತನೊಡನೆ ಚಲಿಸುತ್ತಿದ್ದಾಗ, ಆಕೆಯನ್ನು ಅಪಹರಿಸಿದ್ದ ನಾಲ್ವರು ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು.

2006ರಲ್ಲಿ

2006ರಲ್ಲಿ

ಹನ್ನೆರಡನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದಾಗ, ಆಕೆಯನ್ನು ಕಾರಿನಲ್ಲಿ ಅಪಹರಿಸಿದ ನಾಲ್ವರು ದುರುಳರು ಕಾರು ಓಡುತ್ತಿದ್ದಾಗಲೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಈ ಘಟನೆ ಪಶ್ಚಿಮ ದೆಹಲಿಯ ಜಾನಕಪುರಿಯಲ್ಲಿ 2006ರಲ್ಲಿ ನಡೆದಿತ್ತು.

2010ರಲ್ಲಿ

2010ರಲ್ಲಿ

ಮಂಗೋಲಪುರಿಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಮಹಿಳೆ ಮತ್ತು 18 ವರ್ಷದ ಯುವತಿಯನ್ನು ಓರ್ವ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿ ನಾಲ್ಕು ಜನರು ಉತ್ತರ ದೆಹಲಿಯ ಸುಲ್ತಾನಪುರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬಲಾತ್ಕಾರ ಮಾಡಿದ್ದರು.

2010ರಲ್ಲಿ ಮತ್ತೆ

2010ರಲ್ಲಿ ಮತ್ತೆ

ಅದೇ ವರ್ಷ ಮಣಿಪುರ ಮೂಲದ ಬಿಪಿಓದಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆ ರಾತ್ರಿಪಾಳಿ ಮುಗಿಸಿ ಮರಳುತ್ತಿದ್ದಾಗ ಕುಡಿದ ಅಮಲಿನಲ್ಲಿದ್ದ ನಾಲ್ಕು ಜನರು ಸತತ 40 ನಿಮಿಷಗಳ ಕಾಲ ಆಕೆಯ ಮಾನ ಅಪಹರಿಸಿದ್ದರು. ಈ ಘಟನೆ ನಡೆದಿದ್ದು ದೌಲಾ ಕುವಾನ್ ಬಳಿ.

2011ರಲ್ಲಿ

2011ರಲ್ಲಿ

ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಇನ್ನೂ ಭಯಾನಕ ಅತ್ಯಾಚಾರ ನಡೆದಿತ್ತು. ಗುರ್‌ಗಾಂವ್‌ನ ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಮೂವರು ಅತ್ಯಾಚಾರಿಗಳು ದಕ್ಷಿಣ ದೆಹಲಿಯಲ್ಲಿ ಕಾರಿನಲ್ಲಿ ಒಂದು ವೃತ್ತವನ್ನು ಸುತ್ತುತ್ತಲೇ ಅತ್ಯಾಚಾರ ಮಾಡಿದ್ದರು.

2012ರ ಆಗಸ್ಟ್‌ನಲ್ಲಿ

2012ರ ಆಗಸ್ಟ್‌ನಲ್ಲಿ

2012ರ ಆಗಸ್ಟ್ ತಿಂಗಳಿನಲ್ಲಿ ಪಿತಾಂಪುರದಲ್ಲಿ ನಡೆದ ಈ ಘಟನೆಯಲ್ಲಿ ಸ್ನೇಹಿತೆಯರೊಡನೆ ಮಾರುಕಟ್ಟೆಗೆ ಕಾರಿನಲ್ಲಿ ಹೋಗಿದ್ದ ಅಪ್ರಾಪ್ತ ವಯಸ್ಕ ಬಾಲಕಿಯನ್ನು 9 ಬಾಲಕರು ಅತ್ಯಾಚಾರವೆಸಗಿದ್ದರು. ಕಾರನ್ನು ಗನ್ ತೋರಿಸಿ ನಿಲ್ಲಿಸಿ ಉಳಿದಿಬ್ಬರನ್ನು ಎಳೆದು ಬಿಸಾಕಿ ಚಲಿಸುತ್ತಿದ್ದ ಕಾರಿನಲ್ಲಿ 9 ಬಾಲಕರು ಸಾಮೂಹಿಕವಾಗಿ ಬಲಾತ್ಕಾರ ಮಾಡಿದ್ದರು.

2012ರ ಆಗಸ್ಟ್‌ನಲ್ಲಿ ಮತ್ತೆ

2012ರ ಆಗಸ್ಟ್‌ನಲ್ಲಿ ಮತ್ತೆ

ದೆಹಲಿ ನೀರು ಮಂಡಳಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 21ರ ಹರೆಯದ ಯುವತಿಯನ್ನು 8 ಜನರು ಫರೀದಾಬಾದ್‌ನ ಹೊರವಲಯದಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು. ಆರೋಪಿಗಳಲ್ಲಿ ಓರ್ವ ಯುವತಿಗೆ ಪರಿಚಯವಿದ್ದ. ಇದನ್ನು ದುರ್ಬಳಿಸಿಕೊಂಡ ಯುವಕರು ಚಲಿಸುತ್ತಿದ್ದ ಕಾರಿನಲ್ಲಿ ಯುವತಿಯ ಮಾನ ಅಪಹರಿಸಿದ್ದರು.

2012ರ ನವೆಂಬರ್‌ನಲ್ಲಿ

2012ರ ನವೆಂಬರ್‌ನಲ್ಲಿ

24 ವರ್ಷದ ರ್ವಾಂಡಾದ ಮಹಿಳೆಯನ್ನು ಐವರು ದುರುಳರು ಕಾರಿನಲ್ಲಿ ಹೊತ್ತೊಯ್ದು ಆಕೆಯ ಮೇಲೆ ಹಲ್ಲೆ ಮಾಡಿ, ಆಕೆಯ ಬಳಿಯಿದ್ದ ಎಲ್ಲವನ್ನೂ ಕದ್ದು, ಕಡೆಗೆ ಆಕೆಯ ಮಾನವನ್ನೂ ದೋಚಿದ್ದರು. ಈ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಉತ್ತರ ದೆಹಲಿಯ ತಿಮರಪುರ ಪ್ರದೇಶದಲ್ಲಿ ನಡೆದಿತ್ತು.

English summary
As many as 10 rapes have been registered in Delhi, which have happened in moving vehicle. In 2012 only 4 such incidents have occurred. In the fresh incident, where 4 people have gang-raped a 23-year-old woman in front of her friend in a moving bus. Will this stop in 2013?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X