ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RSS ವಶೀಕರಣ: ಸಂಕೇಶ್ವರಗೆ ಶೆಟ್ಟರ್ ತಿರುಗೇಟು

By Srinath
|
Google Oneindia Kannada News

rss-hypnotized-bjp-cm-shettar-reacts-vijay-sankeshwar
ಹುಬ್ಬಳ್ಳಿ, ಡಿ.15: ಬಿಜೆಪಿಗೆ ಗುಡ್ ಬೈ ಹೇಳಿ ಮೇಲ್ಮನೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಬಿಜೆಪಿ ಜತೆಗೆ RSS ಅನ್ನು ತೀವ್ರ ತರಾಟೆಗೆ ಉದ್ಯಮಿ ವಿಜಯ ಸಂಕೇಶ್ವರಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶುಕ್ರವಾರ ತಿರುಗೇಟು ನೀಡಿದ್ದಾರೆ.

ಬಿಜೆಪಿ RSS ಕೈಗೊಂಬೆಯಲ್ಲ: ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು ಇದರಲ್ಲಿ ಆರ್ ಎಸ್ಎಸ್ ಹಸ್ತಕ್ಷೇಪ ನಡೆಸುತ್ತಿಲ್ಲ. ಹಾಗಾಗಿ ವಿಜಯ ಸಂಕೇಶ್ವರ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಯವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಇನ್ನು ಬಿಜೆಪಿ ಪಕ್ಷದ ಕಾಯನಿರ್ವಹಣೆಯಲ್ಲೂ RSS ಮೂಗುತೂರಿಸುತ್ತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಸಂಘ ಪರಿವಾರ ಎಂದಿಗೂ ಆಡಳಿತದಲ್ಲಾಗಲಿ, ಪಕ್ಷದಲ್ಲಾಗಲಿ ಹಸ್ತಕ್ಷೇಪ ಮಾಡಿಲ್ಲ. ಯಾವ ಕಾರಣಕ್ಕೆ ವಿಜಯ ಸಂಕೇಶ್ವರ್ ಇಂತಹ ಆರೋಪ ಮಾಡಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.

ಶೀಘ್ರವೇ ಸಂಪುಟ ವಿಸ್ತರಣೆ ಮಾಡುವೆ: ಬಿಜೆಪಿಯ ಶಾಸಕರು ಸರಕಾರ ಹಾಗೂ ಪಕ್ಷದೊಂದಿಗೆ ಇದ್ದಾರೆ. ಸರಕಾರಕ್ಕೆ ಸ್ಪಷ್ಟ ಬಹುಮತವಿದ್ದು ಪೂರ್ಣಾವಧಿ ಪೂರೈಸಲಿದೆ. ಅಲ್ಲದೆ, ಮುಂದಿನ ಸಾಲಿನ ಫೆಬ್ರವರಿಯಲ್ಲಿ ಬಜೆಟ್‌ ಅನ್ನು ನಾನೇ ಮಂಡಿಸುತ್ತೇನೆ ಎಂದು ಸಿಎಂ ಶೆಟ್ಟರ್ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ಸಂಪುಟ ವಿಸ್ತರಣೆ ಇನ್ನಿಲ್ಲ ಎಂದಿದ್ದ ಸಿಎಂ ಶೆಟ್ಟರ್ ಶೀಘ್ರವೇ ಇಬ್ಬರನ್ನು ಸಂಪಟುಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಬಿಜೆ ಪುಟ್ಟಸ್ವಾಮಿ ಹಾಗೂ ಸುನೀಲ್ ವಲ್ಯಾಪುರೆ ಅವರ ಸ್ಥಾನಗಳು ತೆರವಾಗಿವೆ.ಆ ಸಚಿವ ಸ್ಥಾನಗಳನ್ನು ಶೀಘ್ರವೆ ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.

English summary
Industrialist Vijay Sankeshwar while resigning from BJP and MLC had waged a war agaisnt BJP and RSS. He had blamed that BJP was hypnotized by RSS. But Chief Minister Jagadish Shettar has declined it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X