ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಹತ್ಯೆ ನಿಷೇಧ:ಗವರ್ನರ್ ಭೇಟಿ ಮಾಡಿದ ಎಚ್ಡಿಕೆ

|
Google Oneindia Kannada News

H D kumaraswamy met governor Hamsaraj Bharadwaj
ಬೆಂಗಳೂರು, ಡಿ 14: ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಕಲಾಪದಲ್ಲಿ ವಿರೋಧಪಕ್ಷಗಳ ಅನುಪಸ್ಥಿತಿಯಲ್ಲಿ ಮಸೂದೆಯನ್ನು ಮಂಡಿಸಲಾಗಿದೆ. ಅದಕ್ಕೆ ತುರ್ತಾಗಿ ನೀವು ಮಧ್ಯಪ್ರವೇಶಿಸಿ ತಡೆ ನೀಡಬೇಕೆಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.

ಶುಕ್ರವಾರ (ಡಿ 14) ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಆಡಳಿತ ಬಿಜೆಪಿ ಪಕ್ಷ ಕಲಾಪದ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಂಡಿದೆ.

ವಿರೋಧಪಕ್ಷಗಳು ಸಭ್ಯಾತ್ಯಾಗ ಮಾಡಿದ ಸಮಯದಲ್ಲಿ ವಿಧೇಯಕವನ್ನು ಮಂಡಿಸಲಾಗಿದೆ ಎಂದು ರಾಜ್ಯಪಾಲರಿಗೆ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಸರಕಾರ ಗೋಹತ್ಯೆ ನಿಷೇಧ ಮತ್ತು ಖಾಸಾಗಿ ವಿಶ್ವವಿದ್ಯಾಲಯಗಳ ಕುರಿತು ಮಸೂದೆ ಮಂಡಿಸಿದೆ. ವಿರೋಧಪಕ್ಷಗಳ ಅನುಪಸ್ಥಿತಿಯಲ್ಲಿ ಮಸೂದೆಗೆ ಅಂಗೀಕಾರ ಕೂಡ ಪಡೆದುಕೊಂಡಿದೆ.

ವಿಧೇಯಕಗಳನ್ನು ನೀವು ಆಂಗೀಕರಿಸಬಾರದು ಎಂದು ಕುಮಾರಸ್ವಾಮಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಲ್ಲಿ ಮನವಿ ಮಾಡಿದ್ದಾರೆ.

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಧಿವೇಶನವನ್ನು ಒಂದು ದಿನ ವಿಸ್ತರಿಸಬೇಕೆಂದು ಸ್ಪೀಕರ್ ಬೋಪಯ್ಯ ಅವರಲ್ಲಿ ವಿನಂತಿಸಿ ಕೊಂಡಿದ್ದರು.

ಸ್ಪೀಕರ್ ಇದಕ್ಕೆ ಅನುಮತಿ ನಿರಾಕರಿಸಿದರು, ಇದನ್ನು ಪ್ರತಿಭಟಿಸಿ ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಸಭಾತ್ಯಾಗ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಲವು ವಿಧೇಯಕಗಳನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಂಡಿದೆ ಎಂದು ಕುಮಾರಸ್ವಾಮಿ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ.

English summary
Former CM H D Kumaraswamy met governor Hamsaraj Bharadwaj on Friday i.e. 14.12.2012 to discuss government passed various bills in absence of opposition party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X