ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಪ್ಪಾ! ಬ್ಯಾಂಕ್ ನೆಲಮಾಳಿಗೆಯಲ್ಲಿದೆ 4600 ಟನ್ ಚಿನ್ನ

By Srinath
|
Google Oneindia Kannada News

ಲಂಡನ್, ಡಿ.14: ಒಂದೂವರೆ ವರ್ಷದ ಹಿಂದೆ ನಮ್ಮ ತಿರುವನಂತಪುರದಲ್ಲಿ ಪದ್ಮನಾಭ ದೇಗುಲದಲ್ಲಿ ಕಂಡುಬಂದ ಚಿನ್ನವನ್ನು ನೋಡಿ ನಿಜಕ್ಕೂ ಬೆಚ್ಚಿಬಿದ್ದಿದ್ದೆವು. ಆದರೆ ಲಂಡನ್ನಿನಲ್ಲಿರುವ Bank of Englandನ ನೆಲಮಾಳಿಗೆಯಲ್ಲಿರುವ ಚಿನ್ನವನ್ನು ನೋಡಿಬಿಟ್ಟರೆ ನೀವು ಏನನ್ನುತ್ತೀರೋ?

ಏನ್ ಗೊತ್ತಾ, mailonline ಎಂಬ ಪತ್ರಿಕೆ 10 ತಿಂಗಳ ಹಿಂದೆ ಇದರ ಫೋಟೋಗಳನ್ನು ಪ್ರಕಟಿಸಿದೆ. ಅವುಗಳನ್ನು ಒಂದೊಂದೇ ನೋಡುತ್ತಾ ಹೋದರೆ ಅಪ್ರಯತ್ನವಾಗಿ ನೀವೇ ಬಾಯ್ಬಿಟ್ಟುಕೊಂಡು ನೋಡುವಂತಾಗುತ್ತದೆ.

ಏನ್ ಗೊತ್ತಾ, ರಾಜಧಾನಿ ಲಂಡನ್ನಿನ ರಸ್ತೆಗಳ ಕೆಳಗೆ ಸುರಂಗಗಳಲ್ಲಿ ಈ ಚಿನ್ನ ಅಡಗಿ ಕುಳಿತಿದೆ. ಆದರೆ ಭದ್ರತೆಯ ದೃಷ್ಟಿಯಿಂದ ನಿಖರವಾಗಿ ಇದು ಇಂತಹ ಕಡೆಯೇ ಇದೆ ಎಂದು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.

4600-tons-156-billion-pound-worth-gold-bank-of-england

ಅದೆಲ್ಲ ಸರಿ ಚಿನ್ನ ಎಷ್ಟಿದೆ ಅದನ್ನು ಮೊದಲು ಹೇಳಿ ಅಂದಿರಾ? ನೋಡಿ, ಅಲ್ಲಿ 156 ಶತಕೋಟಿ ಪೌಂಡ್ (17.2 ಲಕ್ಷ ಕೋಟಿ ರೂ) ಮೌಲ್ಯದ ಚಿನ್ನದ ಗಟ್ಟಿಗಳು ಇವೆ. ಇದರ ತೂಕ 4,600 ಟನ್ ! ಅಂದಹಾಗೆ ಈ ಮೌಲ್ಯವನ್ನು ಲೆಕ್ಕ ಹಾಕಿರುವುದು 2 ವರ್ಷದ ಹಿಂದೆ. ಇನ್ನು ಇಂದಿನ ದರದಲ್ಲಿ ಎಷ್ಟಾಗುತ್ತದೋ ನೀವೇ ಸುಮ್ಮನೇ ಹಾಗೇ ಲೆಕ್ಕ ಹಾಕಿಕೊಳ್ಳಿ.

ಅಬ್ಬಾ ಅದನ್ನೆಲ್ಲ ಹೇಗೆ ಪೇರಿಸಿಟ್ಟಿದ್ದಾರೆ ಗೊತ್ತಾ? ಯಾವುದಾದರೂ ಸೂಪರ್ ಮಾರ್ಕೆಟ್ಟುಗಳಲ್ಲಿ Rackಗಳಲ್ಲಿ ಥಳಪಳನೆ ಹೊಳೆಯುವ ಹಾಗೆ ಬಿಸ್ಕತ್ ಪ್ಯಾಕೆಟ್ಟುಗಳನ್ನು ಜೋಡಿಸಿರುತ್ತಾರಲ್ಲಾ ಹಾಗಿದೆ. ಅಥವಾ ನಮ್ಮ ಮೈಸೂರು ಪಾಕ್ ಜೋಡಿಸಿಟ್ಟಂತಿದೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ Rackಗಳಲ್ಲಿ ಫಳಫಳನೆ ಹೊಳೆಯುತ್ತಿದೆ ರೀ ಈ ಸಾವಿರಾರು ಟನ್ ಚಿನ್ನದ ಬಿಸ್ಕತ್. ಎಲ್ಲ ಶುದ್ಧ ಚಿನ್ನದ ಗಟ್ಟಿ, ಬಾರ್ ಗಳು. ಅದು ಪದ್ಮನಾಭನ ದೇಗುಲದಲ್ಲಿ ಸಿಕ್ಕಿದಂತಹ ಥರಹಾವರಿ ಆಭರಣಗಳಲ್ಲ.

ಪತ್ರಿಕೆಯು ಭದ್ರತೆಯ ದೃಷ್ಟಿಯಿಂದ ಅಥವಾ ಯಾರದಾದರೂ ದೃಷ್ಟಿ ತಗಲುತ್ತದೆ ಎಂದೂ ಎಲ್ಲ ಚಿನ್ನದ ಫೋಟೋಗಳನ್ನು ಪ್ರಕಟಿಸಿಲ್ಲ. 4 ಫೋಟೋಗಳಿವೆ. ಅದನ್ನು ನೋಡಿಬಿಟ್ಟರೆ ಅಬ್ಬಬ್ಬಾ? 'ಸದ್ಯ ಇಷ್ಟೊಂದು ಚಿನ್ನ ಇನ್ನೂ ಅವರ ಬಳಿಯೂ ಇದೆ. ನಮ್ಮ ಬಳಿಯೂ ಇದೆಯಲ್ವಾ' ಎಂದು ಸಮಾಧಾನದ ನಿಟ್ಟುಸಿರುಬಿಡುವಂತಾಗುತ್ತದೆ.

ತಲಾ 28 ಪೌಂಡಿನ 22 ಕ್ಯಾರೆಟ್ ನ ಚಿನ್ನದ ಬಾರುಗಳನ್ನು ಜೋಡಿಸಿಡಲಾಗಿದೆ. ಚಿತ್ರವೊಂದರಲ್ಲಿರುವ Rackನಲ್ಲಿ 15,000 ಬಾರ್ ಗಳಿವೆ. ಅಂದರೆ 210 ಟನ್ ಶುದ್ಧ ಚಿನ್ನ. ಅದರ ಬೆಲೆ ಅಂದಾಜು 3 ಶತಕೋಟಿ. ಇನ್ನು ಇಂತಹ Rackಗಳು ಎಷ್ಟಿವೆಯೋ?

ಬಹುಶಃ ಇದನ್ನು 1940ರಿಂದ ಪೇರಿಸಿಡಲಾಗಿದೆ. ಏಕೆಂದರೆ ಚಿತ್ರವೊಂದರಲ್ಲಿ Rack ಹಿಂಭಾಗದಲ್ಲಿ 1940ರ ಕ್ಯಾಲೆಂಡರುಗಳನ್ನು ತೂಗುಹಾಕಲಾಗಿದೆ. ನೋಡಿ ಮೂರು ಅಡಿ ಉದ್ದದ ಬೀಗದ ಕೀಯನ್ನು ತಿರುಗಿಸಿ, ಈ ನೆಲಮಾಳಿಗೆಯ ಬೀಗ ತೆಗೆಯಬೇಕಂತೆ!

ಹಾಗಂತ ಇದೆಲ್ಲ ಬ್ರಿಟೀಷರದ್ದಾ? ಅವರು ಬಿಡಿ ನಮ್ಮಂಥ ಅನೇಕ ದೇಶಗಳನ್ನು ಕೊಳ್ಳೆ ಹೊಡೆದು ಸಾಗಿಸಿರಬಹುದು ಎನ್ನುವ ಹಾಗಿಲ್ಲ. ಏಕೆಂದರೆ ಅಧಿಕೃತ ಮಾಹಿತಿಯಂತೆ ಇಲ್ಲಿರುವ ಚಿನ್ನ ಬೇರೆ ಬೇರೆ ರಾಷ್ಟ್ರಗಳಿಗೂ ಸೇರಿದೆ. ಇದರಲ್ಲಿ ಬ್ರಿಟನ್ ಪಾಲು ಕೇವಲ 310 ಟನ್ ಮಾತ್ರವೇ. ಉಳಿದದ್ದೆಲ್ಲ ನಾನಾ ರಾಷ್ಟ್ರಗಳಿಗೆ ಸೇರಿದ್ದಾಗಿದೆ.

ಬ್ರಿಟನ್ನಿನ ರಾಣಿ ಎಲಿಜಬೆತ್ ನಿನ್ನೆ (ಡಿ. 13) ಇದನ್ನು ನೋಡಬೇಕು ಎಂಬ ಬಯಕೆ ವ್ಯಕ್ತಪಡಿಸಿದಾಗ ಅವರನ್ನು ಆ ನಿಗೂಢ ಜಾಗಕ್ಕೆ ನಿಗೂಢವಾಗಿ ಕರೆದೊಯ್ಡು ನಿಗೂಢವಾಗಿಯೇ ಅಷ್ಟೂ ಚಿನ್ನವನ್ನು ತೋರಿಸಲಾಗಿದೆ. ಅಂದಹಾಗೆ ಅವರು ಈ ಹಿಂದೆ 1937ರಲ್ಲಿ ಮೇರಿ ರಾಣಿ ಜತೆ ಮೊಟ್ಟಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿ ಈ ಚಿನ್ನದ ಗಟ್ಟಿಗಳನ್ನು ನೋಡಿದ್ದರಂತೆ. ಆ ನಂತರ 1998ರಲ್ಲಿ ದಂಪತಿ ಸಮೇತರಾಗಿ ಒಮ್ಮೆ ಇಲ್ಲಿಗೆ ಭೇಟಿ ನೀಡಿದ್ದರಂತೆ. ನಿನ್ನೆಯದ್ದು ಮೂರನೆಯ ಭೇಟಿ.

English summary
4600 tons £ 156 billion worth gold stash in Bank of England. The Queen and His Royal Highness The Duke of Edinburgh seemed to enjoy their visit to the vaults of the Bank of England yesterday (Dec 13).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X