ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೇಕಪ್ ರಾಣಿ' ಅವೈಳನ್ನು ಹೊರದಬ್ಬಿದ ಕಾಂಗ್ರೆಸ್

By Srinath
|
Google Oneindia Kannada News

congress-suspends-corrupt-bbmp-corporator-avvai
ಬೆಂಗಳೂರು, ಡಿ.13: ಕಾರ್ಪೊರೇಟರ್ ಅಂಗಮುತ್ತು ಅವೈ ಭ್ರಷ್ಟಾಚಾರದ ಬಗ್ಗೆ ನಮ್ಮಲ್ಲಿ ಪ್ರಕಟವಾದ ಸುದ್ದಿ ಓದಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಅವಳು ಲಂಚಲೋಕದ ಮಾರಿಮುತ್ತು ಥರ ಕಾಣಿಸುತ್ತಾಳೆ ಎಂದು ಕೆಲವರು ಜರಿದಿದ್ದರೆ ಇನ್ನು ಕೆಲವರು 'ಅವಳು ಅವೈ ಷಣ್ಮುಗಿ-420' ಎಂದಿದ್ದಾರೆ.

ಹೌದು ಇಷ್ಟೆಲ್ಲ ಆದ ಬಳಿಕ ಬೀದಿ ಬದಿ ಇಡ್ಲಿ ಹಾಕುತ್ತಾ ಕಷ್ಟುಪಟ್ಟು ಜೀವನ ಸಾಗಿಸುತ್ತಿದ್ದ ದುಡಿಮೆದಾರನಿಂದ ಲಂಚಕ್ಕೆ ಬಾಯ್ಬಿಟ್ಟ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಅಂಗಮುತ್ತು ಅವೈಳನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಿದೆ.

ಆದರೆ ಅವಳ ಲಂಚಾವತಾರ ಸಾಬೀತಾಗಲು ಇಷ್ಟು ದಿನ ಅಧಿಕೃತವಾಗಿ ಸಾಕ್ಷಿ/ಪುರಾವೆಗೆ ಕಾಯುವ ಬದಲು ಇನ್ನೂ ಮುಂಚೆಯೇ ಪಕ್ಷದಿಂದ ಹೊರಹಾಕಬಹುದಿತ್ತಲ್ವಾ? ಎಂದು ಬೆಂಗಳೂರು ಮಹಾಜನತೆ ಕೇಳುತ್ತಿದ್ದಾರೆ.

ಈ ಮಧ್ಯೆ, ಫುಲ್ ಮೇಕಪ್ ನಲ್ಲಿದ್ದ ಸುಧಾಮನಗರ ವಾರ್ಡ್ ಪಾಲಿಕೆ ಸದಸ್ಯೆ ಅಂಗಮುತ್ತು ಅವೈಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯವು 3 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಿ, ಪರಪ್ಪನ ಅಗ್ರಹಾರ ಜೈಲಿಗಟ್ಟಿದೆ.

ಇತ್ತ ತನ್ನನ್ನು ಲಂಚದ ಕೇಸಿನಲ್ಲಿ ಸಿಕ್ಕಿಹಾಕಿಸಿದ ದೂರುದಾರ ಚನ್ನೇಗೌಡನಿಗೆ 'ಜೈಲಿನಿಂದ ಹೊರಬಂದ ಬಳಿಕ ನಿನ್ನನ್ನು ವಿಚಾರಿಸಿಕೊಳ್ಳುತ್ತೇನೆ' ಎಂದು ಅವೈ ಬೆದರಿಕೆಯೊಡ್ಡಿರುವುದಕ್ಕೆ ಚನ್ನೇಗೌಡನಿಗೆ ಪೊಲೀಸ್ ರಕ್ಷಣೆ ನೀಡುವಂತೆ ಲೋಕಾಯುಕ್ತ ಕೋರ್ಟ್ ಆದೇಶಿಸಿದೆ.

ಒಂದೆರಡು ತಿಂಗಳ ಹಿಂದೆ ಹೀಗೇ ದೂರುದಾರರೊಬ್ಬರು ಇದೇ ಬಿಬಿಎಂಪಿಯ ಸದಸ್ಯೆ ವಿರುದ್ಧ ದೂರು ನೀಡಿದ್ದನ್ನೇ ನೆಪವಾಗಿಸಿಕೊಂಡು ಆತನನ್ನು ಪರಲೋಕಕ್ಕೆ ಕಳುಹಿಸಿರುವ ಪ್ರಕರಣದ ನಿದರ್ಶನವಿರುವಾಗ ಮತ್ತೊಂದು ದುರಂತ ಸಂಭವಿಸುವುದು ಬೇಡ ಎಂಬ ಮುನ್ನೆಚ್ಚರಿಕೆಯೂ ಇಲ್ಲಿ ಕೆಲಸ ಮಾಡಿದೆ.

ಕಾಂಗ್ರೆಸ್ ಶಿಸ್ತು ಕ್ರಮ ಟೀಕೆಗೆ ಗುರಿ
: ಪತ್ರಕರ್ತ ಲಿಂಗರಾಜು ಪ್ರಕರಣದಲ್ಲಿ ನಿನ್ನೆ ಬಂಧನಕ್ಕೊಳಗಾದ ಆಜಾದ್ ನಗರದ ಕಾರ್ಪೊರೇಟರ್ ಗೌರಮ್ಮನನ್ನೂ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆದರೆ

ಉದಯ ಕುಮಾರ್ ಎಂಬುವವರಿಂದ 2 ಲಕ್ಷ ರೂ. ಲಂಚ ಪಡೆದು, ಇತ್ತೀಚೆಗೆ ಜೈಲುಪಾಲಾಗಿದ್ದ ಬಿಬಿಎಂಪಿಯ ಗಣೇಶ ಮಂದಿರ ವಾರ್ಡ್ ಸದಸ್ಯ, ಕಾಂಗ್ರೆಸ್ಸಿನ ಎಲ್ ಗೋವಿಂದರಾಜು ಬಗ್ಗೆ ಕಾಂಗ್ರೆಸ್ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಆಶ್ಚರ್ಯಕರವಾಗಿದೆ.

English summary
Congress suspends corrupt BBMP Sudham Nagar Corporator A Avvai and Sudham Nagar Corporator Gowramma from the Party. Bangalore Lokayukta policeon Dec 11th had arrested BBMP Sudham Nagar Corporator A Avvai when she was caught red handed while recieving Rs. 20k from a hotelier in Kalasipalya office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X