ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಥ ಮಕ್ಕಳ ದತ್ತು ಪಡೆದ ಪೋಷಕರ ಸಮ್ಮಿಲನ

By Prasad
|
Google Oneindia Kannada News

ಬೆಂಗಳೂರು, ಡಿ. 12 : ಅನಾಥ ಮಕ್ಕಳನ್ನು ದತ್ತು ಪಡೆದು ಸಲಹುತ್ತಿರುವ 58ಕ್ಕೂ ಅಧಿಕ ಪೋಷಕರು ತಮ್ಮ ದತ್ತು ಮಕ್ಕಳೊಂದಿಗೆ ಭಾಗಿಯಾಗಿ ಸುಖ ಸಂತೋಷ ಹಂಚಿಕೊಂಡ ವಿಶಿಷ್ಟಬಗೆಯ ಕಾರ್ಯಕ್ರಮ ಬೆಂಗಳೂರಿನಲ್ಲಿ ಶನಿವಾರ ಜರುಗಿತು. ಈ ಕಾರ್ಯಕ್ರಮ ಪೋಷಕರಿಗೆ ಮಾತ್ರವಲ್ಲ ಅಪ್ಪ ಅಮ್ಮನನ್ನು ಪಡೆದ ಅನಾಥ ಮಕ್ಕಳಿಗೂ ನೆನಪಿಟ್ಟುಕೊಳ್ಳುವಂತಿತ್ತು.

ಕೆನರಾ ಬ್ಯಾಂಕ್ ರಿಲೀಫ್ ಮತ್ತು ವೆಲ್‌ಫೇರ್ ಸೊಸೈಟಿಯ ಮಾತೃಛಾಯಾ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ರಂಗಭೂಮಿ ಕಲಾವಿದ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರು ಪಾಲ್ಗೊಂಡಿದ್ದರು.

master hirannaiah

ಸಂಸ್ಥೆಯ ದತ್ತು ಯೋಜನೆಯಡಿ ದೇಶದಲ್ಲಿ 300ಕ್ಕೂ ಹೆಚ್ಚು ಮತ್ತು ವಿದೇಶಗಳಲ್ಲಿ 100ಕ್ಕೂ ಅಧಿಕ ಅನಾಥ ಮಕ್ಕಳನ್ನು ದತ್ತು ಪಡೆದು ಪೋಷಿಸುತ್ತಿರುವ ಪೋಷಕರ ಔದಾರ್ಯವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಇಂಥ ಪೋಷಕರು ಇತರರಿಗೂ ಮಾದರಿಯಾಗಬೇಕು ಎಂದು ಆಶಿಸಿದರು.

ಈ ಸಂಸ್ಥೆಯ ಮಕ್ಕಳ ಕಲ್ಯಾಣ ಸಮಿತಿಯ ಶಿವಮಲ್ಲು, ಕಾರ್ಯದರ್ಶಿ ಅರವಿಂದ ರಾವ್, ಜಂಟಿ ಕಾರ್ಯದರ್ಶಿ ಪ್ರೇಮಾ ರತ್ನಾಕರ್, ಮಾತೃಛಾಯಾ ಪ್ರಬಂಧಕಿ ಸುಮಂಗಲ ಜಿ. ಅಂಗಡಿ ಮತ್ತು ಮಾಲತಿ ಮೋಹನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕುಮಾರಿ ಅನಿತಾ ಸಂಜಯ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕೊನೆಯಲ್ಲಿ ಅನನ್ಯ ಕಲಾನಿಕೇತನ ತಂಡದವರಿಂದ ಭರತನಾಟ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

English summary
Canara bank relief and welfare society had organized congregation of parents who have adopted orphan children in Bangalore on 8th December. More than 58 parents participated in this memorable event and shared their happiness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X