ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ: ಶೋಭಾ ಸಿದ್ಧತೆ

By Mahesh
|
Google Oneindia Kannada News

Shobha Karandlaje
ಬೆಳಗಾವಿ, ಡಿ. 12: ಮುಂದಿನ ಜನವರಿಯಿಂದ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೂರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಪರ್ಯಾಯ ಇಂಧನ ವ್ಯವಸ್ಥೆ ಮಾಡಲಾಗುತ್ತಿದೆ. ಆದಷ್ಟು ಲೋಡ್ ಶೆಡ್ಡಿಂಗ್ ಕಡಿಮೆ ಮಾಡಲಾಗುತ್ತದೆ ಎಂದು ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ವಿಧಾನ ಪರಿಷತ್‌ನಲ್ಲಿ ಮಂಗಳವಾರ(ಡಿ.11) ಭರವಸೆ ನೀಡಿದ್ದಾರೆ.

ಸುವರ್ಣ ವಿಧಾನ ಸೌಧದ ಮೇಲ್ಮನೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಶೋಭಾ ಅವರು, ವಿದ್ಯುತ್ ಸಮಸ್ಯೆ ತಲೆದೋರದಂತೆ ಶಿವನಸಮುದ್ರದ ಸೋಲಾರ್ ಘಟಕದ 5 ಮೆಗಾವ್ಯಾಟ್, ರಾಯಚೂರು ಶಾಖೋತ್ಪನ್ನ ಘಟಕದಿಂದ 3 ಮೆ.ವ್ಯಾ., ನಾಗಜರಿಯಿಂದ 15 ಮೆ.ವ್ಯಾ. ಹಾಗೂ ಬಳ್ಳಾರಿ ಶಾಖೋತ್ಪನ್ನ ಘಟಕದಿಂದ 500 ಮೆಗಾವ್ಯಾಟ್ ಸೇರಿ 773 ಮೆಗಾವ್ಯಾಟ್ ವಿದ್ಯುತನ್ನು ಬೇರೆ ಬೇರೆ ಮೂಲಗಳಿಂದ ಪಡೆಯಲಾಗುತ್ತದೆ ಎಂದರು.

ಅಲ್ಲದೆ, ಪವನ ವಿದ್ಯುತ್ ಯೋಜನೆಗೂ ಚಾಲನೆ ನೀಡಿದ್ದು, 2 ವರ್ಷಗಳ ಅವಧಿಯಲ್ಲಿ 469 ಘಟಕಗಳನ್ನು ಅನುಷ್ಠಾನ ಮಾಡಲಾಗಿದೆ. ಮಳೆ ಕೊರತೆ ಮತ್ತು ಬರಗಾಲದ ಹಿನ್ನೆಲೆಯಲ್ಲಿ ಜಲಾಶಯಗಳು ಬರಿದಾಗಿದೆ. ವಿದ್ಯುತ್ ಉತ್ಪಾದನೆ ಕೂಡ ಕುಂಠಿತಗೊಂಡಿದೆ ಎಂದು ಶೋಭಾ ವಿವರಿಸಿದರು.

ಆದರೆ, ವಿದ್ಯುತ್ ಕ್ಷಾಮ ಎದುರಿಸಲು ಇಂಧನ ಇಲಾಖೆ ಸಿದ್ಧವಾಗಿದೆಯೇ? ವಿದ್ಯುತ್ ಸಮಸ್ಯೆಗೆ ಏನು ಸಿದ್ಧತೆ ನಡೆದಿದೆ?

ವಿದ್ಯುತ್ ಸ್ವಾವಲಂಬಿ: 2014ರ ವೇಳೆಗೆ ದೇಶದಲ್ಲಿ ಗುಜರಾತ್ ನಂತೆ ಕರ್ನಾಟಕ ಕೂಡಾ ವಿದ್ಯುತ್‌ನಲ್ಲಿ ಸ್ವಾವಲಂಬಿ ರಾಜ್ಯವಾಗಲಿದೆ ಎಂದು ಶೋಭಾ ಹೇಳಿದ್ದಾರೆ.

ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ 880 ಮೆ.ವ್ಯಾ ವಿದ್ಯುತ್ (220 ಮೆ.ವ್ಯಾ X4). ದಕ್ಷಿಣ ವಲಯದ ಗ್ರಿಡ್ ಗೆ 2011ರಲ್ಲಿ ಜೋಡಣೆ ಮಾಡಲಾಗಿದೆ. ಕೇಂದ್ರ ಸರಕಾರ ಕಾರಿಡಾರ್ ಯೋಜನೆಯನ್ನು ವಿಳಂಬಗೊಳಿಸಿದ ಪರಿಣಾಮವಾಗಿ ಕರ್ನಾಟಕ ಮಾತ್ರ ವಲ್ಲದೆ ಇತರ ರಾಜ್ಯಗಳಿಗೂ ವಿದ್ಯುತ್ ಖರೀದಿಗೆ ಸಮಸ್ಯೆಯಾಗಿದೆ.

2014ರ ಡಿಸೆಂಬರ್ ಅಂತ್ಯದೊಳಗೆ ಕಾರಿಡಾರ್ ಕೆಲಸ ಪೂರ್ಣವಾಗಲಿದೆ ಎಂದು ಹೇಳಿದರು. ಜುಲೈ 2011 ರಿಂದ ಜೂನ್ 2012ಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶೇ 24 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ.

ಇದೇ ರಾಷ್ಟ್ರದ ಇತರೆಡೆ ಶೇ 12 ರಿಂದ 13ರಷ್ಟಿದೆ. ಅನಗತ್ಯವಾಗಿ ವಿದ್ಯುತ್ ಪೊಲಾಗುವುದನ್ನು ಕಡಿಮೆ ಮಾಡಿ, ಪರ್ಯಾಯ ಇಂಧನ ಬಳಕೆಯತ್ತ ಕೂಡಾ ಗಮನಹರಿಸಬೇಕಾದ ಅನಿವಾರ್ಯತೆ ರಾಜ್ಯಕ್ಕಿದೆ ಎಂದು ಶೋಭಾ ಇದೇ ಸಂದರ್ಭದಲ್ಲಿ ಹೇಳಿದರು.

English summary
Karnataka Power Minister Shobha Karandlaje is confident of smooth handling of power situation during summer, Karnataka is opting for alternative method of generating power. Load shedding problem will be reduced she assured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X