• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಂದೇ ಮಾತರಂ ಹಾಡದ ಮುಸ್ಲಿಂರಿಗೆ ಮತದಾನದ ಹಕ್ಕೇಕೆ?

By Mahesh
|

ಬೆಂಗಳೂರು, ಡಿ.11: ಇಲ್ಲಿನ ಮುಸ್ಲಿಮರು ಈ ದೇಶದವರಲ್ಲವೇ ? ಈ ದೇಶದವರೆ ಎನ್ನುವುದಾದರೆ ಅವರು ವಂದೇ ಮಾತರಂ ಹೇಳಲಿ ಜನ್ಮಭೂಮಿಗೆ ವಂದಿಸಲು ನಿರಾಕರಿಸುವವರ ಮತದಾನದ ಹಕ್ಕನ್ನು ರದ್ದುಪಡಿಸಬೇಕೆಂದು ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ ಸಿಂಘಾಲ್ ಗುಡುಗಿದ್ದಾರೆ.

ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ಹಿಂದಿರುಗಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧೀಜಿಯವರು ಕಂಡ ರಾಮರಾಜ್ಯದ ಕಲ್ಪನೆ ಇಂದು ತಿರುವು ಮುರುವು ಆಗಿದ್ದು, ಈ ದೇಶವನ್ನು ರಾವಣ ರಾಜ್ಯವನ್ನಾಗಿ ಮಾಡಲಾಗಿದೆ.

ರಾಜಕೀಯದಲ್ಲಿ ನಾಸ್ತಿಕತೆ ತಾಂಡವವಾಡುತ್ತಿದ್ದು, ನಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ವಿಕೃತಗೊಳಿಸುವ ಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.

ರಾಮ ಹುಟ್ಟಿದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳಬೇಕು. ಈ ಸ್ಥಳವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಆದರೆ

ಸಂಪೂರ್ಣ ಜಾಗದಲ್ಲಿ ಮಂದಿರ ನಿರ್ಮಾಣವಾಗಬೇಕು.

ಈ ವಿಷಯ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳುವ ಮೊದಲು ಸಂಸತ್ತಿನಲ್ಲಿ ಈ ಕುರಿತು ನಿರ್ಣಯವಾಗಬೇಕು. ಅಯೋಧ್ಯೆಯನ್ನು ಮುಸ್ಲಿಂ ಕೇಂದ್ರವನ್ನಾಗಿ ಮಾಡುವ ಯತ್ನ ನಡೆಯುತ್ತಿದ್ದು, ಇದನ್ನು ಹಿಂದೂಗಳು ಸಹಿಸುವುದಿಲ್ಲ ಎಂದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಗಡ್ಕರಿ ಅವರನ್ನು ಬೆಂಬಲಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಘಾಲ್, ಯಾರೆ ಆಗಲಿ ಸಂಸ್ಕೃತಿ-ಸಂಪ್ರದಾಯಗಳ ರಕ್ಷಣೆಗಾಗಿ ಸಾಧು-ಸಂತರ ಹಿಂದೆ ಬರಬೇಕು. ಅಂಥವರಿಗೆ ನಮ್ಮ ಬೆಂಬಲ ಇದೆ ಎಂದರು.

ಇಸ್ಲಾಂ ಧರ್ಮಕ್ಕೆ ವಿರೋಧಿ ಎನ್ನುವ ಕಾರಣಕ್ಕೆ ರಾಷ್ಟ್ರೀಯ ಗೀತೆ ವಂದೇ ಮಾತರಂ ವಿರುದ್ಧ ಇಸ್ಲಾಂ ಸಂಘಟನೆಗಳು ಇಂದು ಫತ್ವಾ ಹೊರಡಿಸಿದ್ದನ್ನು ಸ್ಮರಿಸಬಹುದು.

ವಂದೇ ಮಾತರಂ ಗೀತೆಯಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸುವ ಸಾಲುಗಳಿವೆ. ಆ ಸಾಲುಗಳನ್ನು ತೆಗೆದು ಹಾಕಿ ಎಂದು ಒತ್ತಾಯಿಸಿವೆ. ಮುಸ್ಲಿಮರು ಯಾವುದೇ ಕಾರಣಕ್ಕೂ ವಂದೇಮಾತರಂ ಗೀತೆಯನ್ನು ಹಾಡಬಾರದು

ಮುಸ್ಲಿಮರು ವಂದೇ ಮಾತರಂ ಗೀತೆಯನ್ನು ಹಾಡಲೇಬಾರದು ಎಂದು ಯಾವುದೇ ನಿರ್ಬಂಧವಿಲ್ಲ. ಇಷ್ಟ ಇರುವವರು ಹಾಡಬಹುದು

ಇಂತಹ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವಿಷಯಗಳಿಗೆ ಹೆಚ್ಚಿನ ಪ್ರಚಾರ ನೀಡಿ ಹಿಂದೂ ಮುಸ್ಲಿಂ ಬಾಂಧವರ ನಡುವೆ ವೈಮನಸ್ಸು ತರುವ ಪ್ರಯತ್ನವನ್ನು ಕೈಬಿಡಬೇಕು.

ಇದು ದೇಶವನ್ನು ಒಡೆಯುವ ರಾಜಕೀಯ ಹೊರತು ಬೇರೇನೂ ಅಲ್ಲ ಎಂದು ಅಂಜುಮನ್ ಫನ್ ಕಾರಾನೆ ಉರ್ದು ಸಂಸ್ಥೆಯ ಕಾರ್ಯದರ್ಶಿ ಶರ್ಯಾರ್ ಖಾನ್ ಸ್ಪಷ್ಟನೆ ನೀಡಿದ ಮೇಲೆ ವಿಷಯ ತಣ್ಣಗಾಗಿತ್ತು.

ರಾಷ್ಟ್ರಗೀತೆಯನ್ನು ಹಾಡುವಂತೆ ಅಥವಾ ಹಾಡದಿರುವಂತೆ ಒತ್ತಡ ಹೇರುವುದು ಸರಿಯಲ್ಲ. ಕೆಲವರು ಮುಸ್ಲಿಮರನ್ನು ಪ್ರಚೋದಿಸುವ ಸಲುವಾಗಿಯೇ ವಂದೇ ಮಾತರಂ ಹಾಡುತ್ತಾರೆ ಎನ್ನುವ ಸಂಘಟನೆಯ ಹೇಳಿಕೆಗೆ ನನ್ನ ವಿರೋಧವಿದೆ ಎಂದು ಸಚಿವ ಸಲ್ಮಾನ್ ಖುರ್ಷಿದ್ ಕೂಡಾ ದನಿಗೂಡಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vishwa Hindu Parishat Chief Ashok Singhal urges Muslim should also recite Vande Mataram if they are citizens of India. Those who don't sing Vande Mataram should not be be eligible to Vote in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more