• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗ್ನ ದೇಹದ ಮೇಲೆ ಅರಳಿದ ಭೋಜನದ ಕಲೆ

By Prasad
|

ನಾವು ಹೋಟೆಲಿನ ಊಟ ತಿಂಡಿಗಳು ಮಾತ್ರವಲ್ಲ, ಬಡಿಸುವ ಟೇಬಲ್ ಅತ್ಯಂತ ಸ್ವಚ್ಛವಾಗಿರಬೇಕು ಮತ್ತು ಸಪ್ಲೈ ಮಾಡುವ ಮಾಣಿ ಕೂಡ ಅತ್ಯಂತ ಶಿಸ್ತಿನಿಂದ ದಿರಿಸು ಧರಿಸಿರಬೇಕು ಎಂದು ಬಯಸುವವರು ನಾವು. ಟೇಬಲ್ ಮೇಲೆ ಒಂದು ಸಣ್ಣ ಅನ್ನದ ಅಗಳು ಅಥವಾ ಸಾಂಬಾರಿನ ತುಣುಕು ಬಿದ್ದಿದ್ದರೂ ಸಾಕು ಮಾಣಿಯನ್ನು ಕೂಗಿ ಕರೆದು ಎಲ್ಲ ಸಾಪಾಗಿದೆ ಎಂದು ತಿಳಿದ ನಂತರವೇ ಆಹಾರವನ್ನು ಆರ್ಡರ್ ಮಾಡುತ್ತೇವೆ.

ಅಂಥದರಲ್ಲಿ ಟೇಬಲ್ ಬದಲು ಸಂಪೂರ್ಣ ನಗ್ನಳಾಗಿರುವ ಸುಂದರ ಮಾಡೆಲ್ ದೇಹದ ಮೇಲೆ ರುಚಿಕಟ್ಟಾದ ಪಕ್ವಾನ್ನಗಳನ್ನು ಬಡಿಸಿದರೆ ಹಿಡಿಸುವುದೆ ನಮಗೆ, ಅಂದರೆ ನಮ್ಮ ಭಾರತೀಯರಿಗೆ? ಹಿಡಿಸುವುದೇನು ಬಂತು, ಅಂಥ ಸಂಪ್ರದಾಯವನ್ನು ನಮ್ಮ ದೇಶದ ಬಾಗಿಲೊಳಗೆ ಬರುವುದಕ್ಕೆ ಕೂಡ ಬಿಡುವುದಿಲ್ಲ. ಹೋಟೆಲುಗಳಲ್ಲಿ ಗಂಡಸರದ್ದೇ ದರ್ಬಾರಿರುವಾಗ ಬೆತ್ತಲೆ ಹೆಣ್ಣಿನ ಮೇಲೆಲ್ಲಿ ಭೋಜನ ಬಡಿಸುವುದು ಅಂತೀರಾ?

ಆದರೆ, ಜಪಾನ್‌ನಂತಹ ದೇಶದಲ್ಲಿ ನೂರಾರು ವರ್ಷಗಳಿಂದ ಇಂತಹ ವಿಭಿನ್ನ ಬಗೆಯ ಆಹಾರ ಸಂಸ್ಕೃತಿ ಚಾಲ್ತಿಯಲ್ಲಿದೆ. ಮೀನು ಅಥವಾ ಕಡಲು ಆಹಾರವನ್ನು ಬಳಸಿ ಅನ್ನದ ಜೊತೆ ಸ್ವಾದಿಷ್ಟವಾದ ಖಾದ್ಯಗಳಿರುವ 'ಸುಶಿ' ಎಂಬ ಆಹಾರವನ್ನು ಟೇಬಲ್ ಮೇಲೆ ನಿರ್ವಾಣ ಸ್ಥಿತಿಯಲ್ಲಿ ಮಲಗಿಕೊಂಡ ಶೋಢಷಿಯರ ಉಬ್ಬುತಗ್ಗುಗಳ ಮೇಲೆ ಬಡಿಸಲಾಗುತ್ತದೆ. ಇದನ್ನು ಬಿಸಿನೆಸ್ ಎಂದು ಅವರು ಕರೆಯುವುದಿಲ್ಲ, ಇದನ್ನು ಅದ್ಭುತ ಕಲೆ ಎನ್ನುತ್ತಾರೆ.

ಇಂಥ ವಿಶಿಷ್ಟವಾದ ಆಹಾರವನ್ನು ಜನರು ತಿನ್ನುವಾಗ ಸ್ವಲ್ಪ ಕಷ್ಟವಾದರೂ ಇಷ್ಟಪಟ್ಟು ತಿನ್ನುತ್ತಾರೆ. ಈ ಹೋಟೆಲು ನಡೆಸುವವರಿಗೆ ನಷ್ಟವಂತೂ ಇಲ್ಲವೇ ಇಲ್ಲ. ಇಂಥದೊಂದು ಹೋಟೆಲ್ ಅನ್ನು ಅಮೆರಿಕದ ಮಿಯಾಮಿಯಲ್ಲಿ ಕೂಡ ಇತ್ತೀಚೆಗೆ ಆರಂಭವಾಗಿದೆ. ಈ ಸಂಪ್ರದಾಯಕ್ಕೆ ಏನೆನ್ನುತ್ತಾರೆ ಗೊತ್ತಾ? ನ್ಯೋಟೈಮೋರಿ. ಜಪಾನಿ ಭಾಷೆಯಲ್ಲಿ ಇದಕ್ಕೆ ಹೆಣ್ಣಿನ ದೇಹದ ಪ್ರದರ್ಶನ ಎಂದು ಅರ್ಥ.

ನಗ್ನ ಮಾಡೆಲ್‌ಗಳಿಗೆ ಪೂರ್ವ ತರಬೇತಿ

ನಗ್ನ ಮಾಡೆಲ್‌ಗಳಿಗೆ ಪೂರ್ವ ತರಬೇತಿ

ಸಮತಟ್ಟಾದ ಟೇಬಲ್ ಮೇಲೆ ಹಾಕಿರುವ ಬಾಳೆಎಲೆ ಮೇಲೆ ಸುರಿಯುವ ಸಾರೇ ನಿಲ್ಲುವುದಿಲ್ಲ, ಇನ್ನು ಉಬ್ಬುತಗ್ಗು ಏರಿಳಿತಗಳಿರುವ ರೂಪದರ್ಶಿಯ ನಗ್ನ ದೇಹದ ಮೇಲೆ ತಿನಿಸುಗಳು ಹೇಗೆ ನಿಂತಾವು? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಇಲ್ಲಿದೆ ಉತ್ತರ. ಈ ಮಾಡೆಲ್‌ಗಳಿಗೆ ಟೇಬಲ್ ಮೇಲೆ ಗಂಟೆಗಟ್ಟಲೆ ಅಲ್ಲಾಡದೆ ಮಲಗಲು ತರಬೇತಿ ನೀಡಲಾಗುತ್ತದೆ.

ಸುಗಂಧ ದ್ರವ್ಯಗಳಿಂದ ಸ್ನಾನ ಮಾಡಿರುತ್ತಾರೆ

ಸುಗಂಧ ದ್ರವ್ಯಗಳಿಂದ ಸ್ನಾನ ಮಾಡಿರುತ್ತಾರೆ

ಗಂಟೆಗಟ್ಟಲೆ ಬೆತ್ತಲಾಗಿ ಮಲಗಿಕೊಳ್ಳಬೇಕಾಗಿರುವುದರಿಂದ ರೂಪದರ್ಶಿಯರು ವಿಶೇಷವಾದ ಸುಗಂಧ ದ್ರವ್ಯದಿಂದ ಸ್ನಾನ ಮಾಡಿರುತ್ತಾರೆ. ನಂತರ ಐಸ್ ಕೋಲ್ಡ್ ಆಹಾರಗಳನ್ನು ಅವರ ದೇಹ ತಡೆದುಕೊಳ್ಳಲಿ ಎಂಬ ಉದ್ದೇಶದಿಂದ ಅವರ ಮೇಲೆ ತಣ್ಣಗಿನ ನೀರನ್ನು ಎರಚಲಾಗುತ್ತದೆ. ಗ್ರಾಹಕರು ಆಹಾರ ಸವಿಯುವಾಗ ಅಲ್ಲಾಡಿ ರಸಾಭಾಸ ಉಂಟುಮಾಡದಿರಲಿ ಎಂಬ ಉದ್ದೇಶದಿಂದ ಸಾಕಷ್ಟು ತಯಾರಿ ಮಾಡಿರುತ್ತಾರೆ.

ಸಮತಟ್ಟಲ್ಲದ ದೇಹದ ಮೇಲೆ ಹೇಗೆ ಬಡಿಸುತ್ತಾರೆ?

ಸಮತಟ್ಟಲ್ಲದ ದೇಹದ ಮೇಲೆ ಹೇಗೆ ಬಡಿಸುತ್ತಾರೆ?

ಇದಕ್ಕಾಗಿ ರೂಪದರ್ಶಿಯರನ್ನು ತಯಾರು ಮಾಡುವುದು ಮಾತ್ರವಲ್ಲ, ಬಡಿಸುವವರೂ ನುರಿತವರಾಗಿರುತ್ತಾರೆ. ಕೆಲಬಾರಿ ಸ್ತನ ಮತ್ತು ಖಾಸಗಿ ಭಾಗವನ್ನು ಹಸಿರು ಎಳೆ ಅಥವಾ ಪ್ಲಾಸ್ಟಿಕ್ಕಿನಿಂದ ಮುಚ್ಚಿ ಉಳಿದ ಭಾಗದ ಮೇಲೆ ಭೋಜನವನ್ನು ಬಡಿಸಲಾಗುತ್ತದೆ. ಇಲ್ಲದಿದ್ದರೆ ಅಲ್ಲಿ ಕೂಡ ಖಾದ್ಯಗಳನ್ನು ಬಡಿಸುತ್ತಾರೆ. ಸಂಪೂರ್ಣ ನಗ್ನರಾದ ರೂಪದರ್ಶಿಯರಿಗೆ ಹೆಚ್ಚಿನ ಬೇಡಿಕೆ ಮತ್ತು ಹೆಚ್ಚಿನ ಕಮಾಯಿ ಕೂಡ.

ಊಟ ಮಾಡುವವರು ಏನು ಮಾಡುತ್ತಾರೆ?

ಊಟ ಮಾಡುವವರು ಏನು ಮಾಡುತ್ತಾರೆ?

ನಗ್ನ ಮಹಿಳೆಯ ಸುತ್ತಲೂ ವೈನ್‌ಗಳನ್ನು ಇಟ್ಟಿರುತ್ತಾರೆ. ಸ್ಟಿಕ್ ಬಳಸಿ ಅನ್ನವನ್ನು ಸವಿಯುತ್ತಲೇ ಸುರಾಪಾನವನ್ನೂ ಮಾಡಬಹುದು. ಆದರೆ, ಅಪ್ಪಿತಪ್ಪಿಯೂ ರೂಪದರ್ಶಿಯನ್ನು ಸ್ಪರ್ಶಿಸುವಂತಿಲ್ಲ. ಆದರೆ, ಮಹಿಳೆಯರಿಗೆ ಮಾತ್ರ ಇಲ್ಲಿ ರಿಯಾಯಿತಿ ಇದೆ. ಕೆಲವರು ಸ್ಟಿಕ್ ಕೂಡ ಬಳಸದೆ ನೇರವಾಗಿ ಬಾಯಿ ಹಾಕಿ ಸ್ವಾದಿಷ್ಟ ಭೋಜನವನ್ನು ಚಪ್ಪಿಸುತ್ತಾರೆ.

ಈ ಆಹಾರ ಸಂಸ್ಕೃತಿ ವಿವಾದಕ್ಕೂ ಗುರಿಯಾಗಿದೆ

ಈ ಆಹಾರ ಸಂಸ್ಕೃತಿ ವಿವಾದಕ್ಕೂ ಗುರಿಯಾಗಿದೆ

ಥೂ ಇದೇನಿದು? ಟೇಬಲ್ ಮೇಲೆ ಪೋಸ್ಟ್ ಮಾರ್ಟಂಗಾಗಿ ಕಾದಿರುವ ಮಹಿಳೆಯನ್ನು ಮಲಗಿಸಿದಂತೆ ಭಾಗವಾಗುತ್ತದೆ ಎಂದು ಗಾರ್ಡಿಯನ್ ಪತ್ರಿಕೆ ಟೀಕಿಸಿದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಂದು ಚೀನಾ ಈ ಪದ್ಥತಿಯನ್ನು ನಿಷೇಧಿಸಿದೆ. 2010ರ ಅಕ್ಟೋಬರ್ ತಿಂಗಳಲ್ಲಿ ಆಫ್ರಿಕಾದ ಉದ್ಯಮಿಯೊಬ್ಬರು ಇಂಥ ಹೋಟೆಲಲ್ಲಿ ಪಾರ್ಟಿ ಆಯೋಜಿಸಿ ತೀವ್ರ ವಿವಾದಕ್ಕೆ ಗುರಿಯಾಗಿದ್ದರು.

English summary
Nyotaimori, the art of serving Sushi food on naked model. Delicious Japanese food will be served on female body, who wear nothing except food. People call this kind of food culture an art. But, this practice has received wide criticism too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X