• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಥಾಯ್ಲೆಂಡ್ ಕಾಂಡೋಮ್ ಮ್ಯೂಸಿಯಂ:ವಿಶ್ವದಲ್ಲೇ ಚೊಚ್ಚಲು

By Srinath
|

ನಾಂತಬೂರಿ (ಥಾಯ್ಲೆಂಡ್)‌, ಡಿ.10: ಸಂಗ್ರಹಾಲಯಗಳ ಬಗ್ಗೆ ಅಬಾಲವೃದ್ಧರಾಗಿ ಯಾರಿಗೆ ತಾನೆ ಕುತೂಹಲ, ಆಸಕ್ತಿ ಇರುವುದಿಲ್ಲ ಹೇಳಿ. ಆದರೆ ಥಾಯ್ಲೆಂಡಿನಲ್ಲೊಂದು ಸಂಗ್ರಹಾಲಯ ಅಸ್ತಿತ್ವಕ್ಕೆ ಬಂದಿದೆ. ಇದರ ಬಗ್ಗೆ ಜನರಿಗೆ ಶ್ಯಾನೆ ಕುತೂಹಲ ಉಂಟಾಗಿ ನೂಕುನುಗ್ಗಲು ಆಗುತ್ತಿದೆ. ಆದರೆ ಈ ಮ್ಯೂಸಿಯಂಗೆ ಅಬಾಲವೃದ್ಧರ ಪೈಕಿ ಬಾಲಕರನ್ನು ಬಿಡುತ್ತಿಲ್ಲ. ಅದೇನಿದ್ದರೂ ಕಡ್ಡಾಯವಾಗಿ ವಯಸ್ಕರರಿಗೆ ಮಾತ್ರ. ಏಕೆಂದರೆ ಇದು ಹೇಳಿಕೇಳಿ ಕಾಂಡೋಮ್ ಮ್ಯೂಜಿಯಂ!

ಥಾಯ್ಲೆಂಡಿನ ಈ ಕಾಂಡೋಮ್ ಮ್ಯೂಸಿಯಂ ಇಡೀ ವಿಶ್ವದಲ್ಲೇ ಚೊಚ್ಚಲು. ಥಾಯ್ಲೆಂಡಿನ ನಾಂತಬೂರಿ ನಗರದಲ್ಲಿರುವ ಈ ಸಂಗ್ರಹಾಲಯದತ್ತ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಆದರೆ ಇದೇನಪ್ಪಾ ಥಾಯ್ಲೆಂಡಿನಲ್ಲಿ ಕಾಂಡೋಮ್ ಮ್ಯೂಸಿಯಂ? ಎಂದು ಮೂಗುಮುರಿಯುವ ಹಾಗಿಲ್ಲ. ಏಕೆಂದರೆ ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಾಂಡೋಮ್ ತಯಾರಿಸುವ ರಾಷ್ಟ್ರವೆಂದರೆ ಅದು ಥಾಯ್ಲೆಂಡ್ ಮಾತ್ರ.

ಕಾಲಕ್ಕೆ ತಕ್ಕಂತೆ ಬಳಕೆಯಾದ ಅಂದರೆ ಇತಿಹಾಸದ ಆಯಾ ಕಾಲಘಟ್ಟಗಳಲ್ಲಿ ಬಳಕೆಗೆ ಬಂದ ಕಾಂಡೋಮುಗಳನ್ನು ಒಪ್ಪ ಓರಣವಾಗಿ ತೋರಣವಾಗಿ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಅಂಗಡಿಗಳಲ್ಲಿ ನಾನಾ ಗಾತ್ರ, ಬಣ್ಣ, ವಾಸನೆಗಳಲ್ಲಿ ಲಭ್ಯವಾಗುವ ಕಾಂಡೋಮ್ ಇಲ್ಲಿ ಪ್ರದರ್ಶನಕ್ಕೆ ಇದೆ.

ಇದಲ್ಲದೆ ಇನ್ನೂ ಅನೇಕಾನೇಕ ವಸ್ತುಗಳೂ ಇಲ್ಲಿ ಬಹಿರಂಗವಾಗಿವೆ. ಅವುಗಳಲ್ಲಿ ಕಾಂಡೋಮ್ ಗಳಿಗೆ ಗಾಳಿಯೂದುವ ಸಾಧನ (ಪೆನ್ನಿಸ್ ಪಂಪ್) ಕಣ್ಣಿಗೆ ರಾಚುವಂತೆ ಎದ್ದುಕಾಣುತ್ತದೆ. ಇನ್ನು ಮ್ಯೂಸಿಯಂನ ಗೋಡೆಗಳನ್ನು ಈ ಹಿಂದೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಕಾಂಡೋಮ್ ಕುರಿತಾದ ಜಾಹೀರಾತುಗಳೂ ಇವೆ.

ಇನ್ನು, ಕಾಂಡೋಮಿನ ತಾಳಿಕೆ/ಬಾಳಿಕೆಯನ್ನು ಪರೀಕ್ಷಿಸುವ ಸಾಧನವನ್ನೂ ಇಲ್ಲಿಡಲಾಗಿದೆ. ಈ ಸಂಗ್ರಹಾಲಯ ಕಾಂಡೋಮ್ ಗಷ್ಟೇ ಮೀಸಲಾಗುವುದಿಲ್ಲ. ಸೆಕ್ಸ್, ಸಂಭೋಗ, ಪುರುಷ, ಮಹಿಳೆಗೆ ಸಂಬಂಧಪಟ್ಟಂತೆ ವಿಷಯ/ವಸ್ತುಗಳೂ ಇಲ್ಲಿ ಜಾಗವನ್ನಾಕ್ರಮಿಸಿಕೊಂಡಿವೆ.

ಅದ್ಸರಿ ಗುಪ್ತವಾಗಿ ಬಳಸುವ ಸಾಧನ/ ಸಮಾಚಾರವನ್ನು ಹೀಗೆ ಮ್ಯೂಸಿಯಂನಲ್ಲಿ ಸಾರ್ವಜನಿಕವಾಗಿ ತೆರೆದಿಡುವ ಜರೂರತ್ತಾದರೂ ಏನು ಎಂದು ಕೇಳಿ ನೋಡಿ ಥಟ್ಟಂತ ಉತ್ತರ ಬರುತ್ತದೆ:

ಜನರಿಗೆ ಕಾಂಡೋಮಿನ ಬಗ್ಗೆ ಅವೈಜ್ಞಾನಿಕ, ತಪ್ಪು ತಿಳಿವಳಿಕೆ ಇದೆ. ಇಂದಿನ ಏಡ್ಸ್ ಯುಗದಲ್ಲಿ ಸುರಕ್ಷಿತ ಸಂಭೋಗದ ಬಗ್ಗೆ ಜಾಗೃತ್ತಿ ಮೂಡಿಸುವ ಜರೂರತ್ತು ಬಹಳಷ್ಟಿದೆ. ಕಾಂಡೋಮ್ ಬಳಕೆಗೆ ಜನರನ್ನು ಉತ್ತೇಜಿಸುವ ಅಗತ್ಯ ಬಹಳಷ್ಟಿದೆ. ಹಾಗಾಗಿ ಈ ಸಂಗ್ರಹಲಾಯ. ಜನ ಯಾವುದೇ ಮುಜುಗುರ, ಮಡಿವಂತಿಕೆಯಿಲ್ಲದೆ ಕಾಂಡೋಮ್ ನೋಡಿಕೊಂಡು ಹೋಗುತ್ತಿದ್ದಾರೆ ಎಂದು ಮ್ಯೂಸಿಯಂ ಅಧಿಕಾರಿಗಳು ಉತ್ಸಾಹದಿಂದ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
First of its kind condom museum in Nonthaburi Thailand. As funny it may sound, it is true. A condom museum in Nonthaburi, Thailand is drawing tourists from all round the globe. It shouldn’t be a surprise owing to the fact that Thailand is the world’s largest producer of Condoms. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more