• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಟ್ಟಾ ಆರೆಸ್ಸೆಸ್ಸಿಗ ಕಾಗೇರಿ ಹಾವೇರಿಗೆ ಬಂದಿದ್ಯಾಕೆ?

By Shami
|

ಹಾವೇರಿ, ಡಿ. 8 : ಕರ್ನಾಟಕದಲ್ಲಿ ಧೂಳೆಬ್ಬಿಸುತ್ತಿರುವ ಕರ್ನಾಟಕ ಜನತಾ ಪಕ್ಷದ ಸಮಾವೇಶಕ್ಕೆ ಬೃಹತ್ ವೇದಿಕೆ ಸಿದ್ಧಗೊಂಡಿದ್ದು, ಬಂದು ಸೇರುವ ಸಾವಿರಾರು ಜನರ ನಡುವೆ ಯಾವ್ಯಾವ ಬಿಜೆಪಿ ತಲೆಗಳು ಕಾಣಿಸುತ್ತವೆ ಎಂದು ಎಲ್ಲರೂ ಲೆಕ್ಕ ಹಾಕುತ್ತಿದ್ದಾರೆ. ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರ ಆಗಮನ ಸಹಜವಾಗಿದ್ದರೆ, ಇನ್ನು ಕೆಲವರು ಆಗಮಿಸಿ ಅಚ್ಚರಿ ಮೂಡಿಸುವ ನಿರೀಕ್ಷೆಯಿದೆ.

ಅಂತಹುದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಬ್ರಾಹ್ಮಣ, ಶಿರಸಿ ಶಾಸಕ, ವಿದ್ಯಾರ್ಥಿಯಾಗಿದ್ದಾಗಲೇ ಕಟ್ಟಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿರುವ ಉನ್ನತ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾವೇರಿಯಲ್ಲಿ ಶನಿವಾರ ಬೆಳಿಗ್ಗೆ ಕಾಣಿಸಿಕೊಂಡು ಅನೇಕರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಆದರೆ, ಊಹಾಪೋಹಗಳಿಗೆ ನೀರು ಹಾಕುವ ಮುನ್ನ, ತಾವು ಅಲ್ಲಿ ಬಂದಿದ್ಯಾಕೆ ಎಂದು ಅವರು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟಪಡಿಸಿದರು. ತಮಗೆ ಕೆಜೆಪಿಯಿಂದ ಯಾವುದೇ ಆಹ್ವಾನ ಬಂದಿಲ್ಲ. ತಾವು ಹಾವೇರಿಗೆ ಬಂದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಅವರ ಮಗಳ ಮದುವೆಗೆ ಎಂದು ಅವರು ಹೇಳಿದರು.

ಬಿಜೆಪಿ ಸರಕಾರ ಕೊನೆಯ ಹಂತದಲ್ಲಿ ಬಂದಿದ್ದರೂ ಜೂನ್‌ವರೆಗೆ ಸರಕಾರಕ್ಕೆ ಯಾವುದೇ ಧಕ್ಕೆಯಿಲ್ಲ. ಅನೇಕ ವರ್ಷಗಳಿಂದ ಬಲವಾಗಿ ಬೆಳೆಸಿದಂತಹ ಪಕ್ಷ ಬಿಜೆಪಿ. ಪಕ್ಷ ಇಂದು ಒಡೆದಿದ್ದರೂ, ಅದನ್ನು ಮತ್ತಷ್ಟು ಬಲಪಡಿಸುವುದು ಮತ್ತು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಕಣ್ಣಮುಂದಿದೆ. ಅದು ನಮ್ಮ ಜವಾಬ್ದಾರಿ ಕೂಡ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.

ಯಾರೇ ಪಕ್ಷ ಬಿಟ್ಟು ತೊಲಗಿದರೂ ಬಿಜೆಗೆ ಯಾವುದೇ ಧಕ್ಕೆ ತರಲು ಸಾಧ್ಯವಿಲ್ಲ. ಯಾರು ಎಷ್ಟೇ ತಿಪ್ಪರಲಾಗ ಹಾಕಿದರೂ ಗಟ್ಟಿಯಾಗಿ ಬೇರೂರಿರುವ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಪಕ್ಷದಲ್ಲಿ ಹೊಸಗಾಳಿ ಬೀಸುತ್ತಿದೆ, ಪಕ್ಷವನ್ನು ಬಲಪಡಿಸಲು ಹೊಸ ತಂತ್ರಗಾರಿಕೆ ರೂಪಿಸುತ್ತಿದ್ದೇವೆ. ರಾಜ್ಯ ಬಿಜೆಪಿಯಲ್ಲಿ ಉದ್ಭವವಾಗಿರುವ ಪರಿಸ್ಥಿತಿಯ ಕುರಿತು ರಾಜ್ಯದ ನಾಯಕರು ಮತ್ತು ರಾಷ್ಟ್ರದ ಹಿರಿಯ ನಾಯಕರು ಚರ್ಚಿಸುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why did education minister, RSS man Vishweshwar Hegde Kageri come to Haveri on 8th December, 2012? No need to speculate. He was in Haveri to participate in the marriage of daughter of DDPI S.B. Kodi. He spoke to Oneindia on this occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more