ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನೀರಿಗಾಗಿ ಹೋರಾಟ; ವಿಧಾನಸೌಧ ಘೇರಾವೊ

By Srinath
|
Google Oneindia Kannada News

cauvery-protests-peaks-madegowda-ghereo-vidhana-soudha
ಮಂಡ್ಯ, ಡಿ.8: ಮುಖಮಂತ್ರಿ ಜಗದೀಶ್ ಶೆಟ್ಟರ್ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಮಂಡ್ಯ ರೈತರು ಸೋಮವಾರ ರಾಜಧಾನಿಗೆ ಬಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಹಿರಿಯ ರೈತ ನಾಯಕ ಜಿ ಮಾದೇಗೌಡರು ಶನಿವಾರ ಹೇಳಿಸಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿಗೆ 12 ಟಿಎಂಸಿ ನೀರು ಹರಿಸುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಶುಕ್ರವಾರ ಕರ್ನಾಟಕಕ್ಕೆ ಆದೇಶ ನೀಡಿದ್ದೇ ತಡ ಒಂದೇ ಸಮನೆ ಕೆಆರ್ ಎಸ್ ಅಣೆಕಟ್ಟೆಯಿಂದ ನೀರು ಹರಿಯುತ್ತಿದೆ.

ನ್ಯಾಯಾಂಗ ಉಲ್ಲಂಘನೆಯಾಗಬಾರದು ಎಂದು 'ಸುರಕ್ಷಿತ ಸಿದ್ಧಾಂತ' ಅಳವಡಿಸಿಕೊಂಡಿರುವ ಆಡಳಿತಾರೂಢ ಬಿಜೆಪಿ ಸರಕಾದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾವೇರಿ ರೈತರು ಶನಿವಾರ ಬೆಳಗ್ಗೆಯಿಂದ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ.

ಇದೇ ವೇಳೆ, ಕರ್ನಾಟಕ ರೈತರ ಹಿಸಾಕ್ತಿ ಕಾಪಾಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಶೆಟ್ಟರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ರೈತರಿಗೆ ಮಾದೇಗೌಡ ಕರೆ ನೀಡಿದ್ದಾರೆ.

English summary
Cauvery row intensifies- Cauvery protection committee President G Madegowda has criticised CM Shettar. He declared that farmers will continue protests untill water release to Tamil Nadu stops. In the meanwhile Madegowda said that farmers will Ghereo Vidhana Soudha in Bangalore on Monday (Dec 10).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X