ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ PF ಪಾಸ್‌ಬುಕ್ ಅಂತರ್ಜಾಲದಲ್ಲಿ ಲಭ್ಯ

By Srinath
|
Google Oneindia Kannada News

pf-members-can-download-pass-book-through-internet
ಹೊಸದಿಲ್ಲಿ, ಡಿ.6: ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಹೊಸ ಅಂತರ್ಜಾಲ ಸೇವೆಯೊಂದನ್ನು ಆರಂಭಿಸಿದೆ. ಇದರಿಂದ ಸದಸ್ಯರು ಅಂದರೆ ಪ್ರಾವಿಡೆಂಟ್ ಫಂಡ್ ಚಂದಾದಾರರು ಆನ್‌ಲೈನ್ ಮೂಲಕ ತಮ್ಮ ಖಾತೆಗಳನ್ನು ತಾಜಾ ಆಗಿ ಪರಿಶೀಲಿಸಬಹುದಾಗಿದೆ.

ದೇಶದಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಪ್ರಾವಿಡೆಂಟ್ ಫಂಡ್ ಚಂದಾದಾರರು ಇದ್ದಾರೆ. e-pass bookಗಾಗಿ ಇಪಿಎಫ್‌ಒ ಸದಸ್ಯರು ತಮ್ಮ ಪಾನ್‌ ಕಾರ್ಡ್, ಆಧಾರ್, ಚಾಲನಾ ಪರವಾನಿಗೆ, ಪಾಸ್‌ಪೋರ್ಟ್, ಚುನಾವಣಾ ಗುರುತು ಚೀಟಿ, ಪಡಿತರ ಚೀಟಿಗಳಂತಹ ಭಾವಚಿತ್ರವಿರುವ ಗುರುತಿನ ಸಂಖ್ಯೆಯನ್ನು ಉಪಯೋಗಿಸಿ ಸದಸ್ಯತ್ವ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮೊಬೈಲ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಉಪಯೋಗಿಸಬೇಕು.

ಆದರೆ ಒಂದೇ ಕಂಡೀಷನ್. ನಿಮ್ಮ PF ಖಾತೆ ಸಂಸ್ಥೆಯ ಲೆಕ್ಕಪುಸ್ತಕದಲ್ಲಿ ಚಾಲ್ತಿಯಲ್ಲಿದ್ದು, ಅದು update ಆಗಿರಬೇಕು ಅಷ್ಟೇ. ಇದಕ್ಕಾಗಿ ಸದಸ್ಯರು ತಾವು ನೌಕರಿ ಮಾಡುವ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗ ಅಥವಾ ಲೆಕ್ಕ ವಿಭಾಗದಿಂದ ತಮ್ಮ PF ಖಾತೆಯ ಸಂಖ್ಯೆಯನ್ನು ತಿಳಿದುಕೊಳ್ಳಬೇಕು. ಈ ಸೇವೆ ಪಡೆಯಲು ಇಲ್ಲಿಗೆ ಭೇಟಿ ನೀಡಿ: www.epfindia.gov.in

English summary
PF members can download pass book through internet. The Employees' Provident Fund Organisation (EPFO) members will now be able to download their e-pass book by registering himself/herself on the Member Portal by using his/her Photo Identification number such as PAN, Aadhar, NPR, Driving License, Passport, Voter ID, Ration Card and use the mobile number as the password.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X