ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರಿಗೆ ಸ್ವಾಗತಕಾರಿಣಿ ಹುದ್ದೆ ಬೇಡ: ಫ‌ತ್ವಾ

By Srinath
|
Google Oneindia Kannada News

muslim-women-receptionist-against-sharia-law-up-deoband
ಮುಜಾಫ‌ರ್‌ನಗರ, ಡಿ.5: ಮುಸ್ಲಿಂ ಮಹಿಳೆಯರನ್ನು ಸ್ವಾಗತಕಾರಿಣಿ ಹುದ್ದೆಗೆ ನೇಮಿಸುವಂತಿಲ್ಲ. ಈ ಬಗ್ಗೆ ದಾರುಲ್‌ ಉಲೂಂ ದೇವ ಬಂದ್‌ ಫ‌ತ್ವಾ ಹೊರಡಿಸಿದೆ. ಮಹಿಳೆಯರು ಸ್ವಾಗತಕಾರಿಣಿ (receptionist) ಹುದ್ದೆ ನಿರ್ವಹಿಸುವುದು ಷರಿಯತ್‌ ಕಾನೂನಿಗೆ ವಿರುದ್ಧವಾಗಿದೆ ಎಂದು ದೇವಬಂದ್‌ ಅಭಿಪ್ರಾಯಪಟ್ಟಿದೆ.

ಪಾಕ್‌ ಮೂಲದ ಕಂಪನಿಯೊಂದು 'ಮುಸ್ಲಿಂ ಮಹಿಳೆಯನ್ನು ಸ್ವಾಗತಕಾರಿಣಿಯಾಗಿ ನೇಮಿಸಬಹುದೇ?' ಎಂದು ಇತ್ತೀಚೆಗೆ ದೇವಬಂದ್‌ ಸಲಹೆ ಕೇಳಿತ್ತು.

ಮುಸ್ಲಿಂ ಮಹಿಳೆಯರು ಮುಖದ ಮೇಲೆ ಪರದೆ (ಬುರ್ಖಾ) ಧರಿಸದೆ ಗಂಡಸರ ಎದುರು ಹೋಗುವುದಾಗಲಿ, ಅವರೊಡನೆ ವ್ಯವಹರಿಸುವುದಾಗಲಿ ಇಸ್ಲಾಂ ಕಾನೂನಿಗೆ ವಿರುದ್ಧ. ಆದರೆ ಯಾವುದೇ ಸ್ವಾಗತಕಾರಿಣಿಯು ಮುಖದ ಮೇಲೆ ಪರದೆ ತೊಟ್ಟು ಮುಖ ಮುಚ್ಚಿಕೊಂಡು ತನ್ನ ಕೆಲಸ ಮಾಡುವಂತಿಲ್ಲ. ಹಾಗಾಗಿ ಮುಸ್ಲಿಂ ಮಹಿಳೆಯನ್ನು ಸ್ವಾಗತಕಾರಿಣಿಯಾಗಿ ನೇಮಿಸಕೂಡದು ಎಂದು ದಾರುಲ್‌ ಉಲೂಂ ದೇವಬಂದ್‌ ಹೇಳಿದೆ.

ಷರತ್ತುಬದ್ಧ ಒಪ್ಪಿಗೆ: ಈ ಮಧ್ಯೆ, ಉತ್ತರಪ್ರದೇಶದ ಇಸ್ಲಾಂ ಒಕ್ಕೂಟದ ಅಧ್ಯಕ್ಷ ಮುಫ್ತಿ ಖುಲ್ಫೀಕರ್ ಅಲಿ ದೇವಬಂದ್‌ ಹೊರಡಿಸಿರುವ ಫ‌ತ್ವಾಗೆ ಸಹಮತಿ ಸೂಚಿಸಿದ್ದಾರೆ. ಇದೇ ವೇಳೆ, ಮಹಿಳೆಯರು ಸ್ವಾಗತಕಾರಿಣಿ ಹುದ್ದೆಯನ್ನು ನಿರವವಹಿಸಬಹುದು. ಅದರಲ್ಲಿ ಅತನದೇನೂ ಅಭ್ಯಂತರವಿಲ್ಲ. ಆದರೆ ಹಾಗೆ ಕಾರ್ಯನಿರ್ವಹಿಸುವಾಗ ಅವರು ಬುರ್ಖಾ ತೊಟ್ಟಿರಲೇಬೇಕು ಎಂದು ಷರತ್ತು ಹಾಕಿದ್ದಾರೆ.

English summary
Muslim women as receptionist illegal: UP Deoband. Leading Islamic seminary Darul Uloom Deoband has issued a fatwa against appointment of Muslim women as receptionists, calling it illegal and against sharia law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X