ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸ್ಡಾಕ್ 100ನಿಂದ ಇನ್ಫೋಸಿಸ್ ಹೊರಕ್ಕೆ

By Mahesh
|
Google Oneindia Kannada News

Infosys dropped from NASDAQ 100
ಬೆಂಗಳೂರು, ಡಿ. 5: ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಗೆ ಬುಧವಾರ (ಡಿ.5) ಬೆಳ್ಳಂಬೆಳ್ಳಗ್ಗೆ ಕಹಿ ಸುದ್ದಿ ಸಿಕ್ಕಿದೆ. ಪ್ರತಿಷ್ಠಿತ ನಾಸ್ಡಾಕ್ ನ ಟಾಪ್ 100 ಪಟ್ಟಿಯಿಂದ ಇನ್ಫೋಸಿಸ್ ಹೊರ ಬಿದ್ದಿದೆ.

ನ್ಯಾಸ್ಡಾಕ್ 100 ಇಂಡೆಕ್ಸ್ ನಿಂದ ಇನ್ಫೋಸಿಸ್ ಕೆಳಗಿಳಿದಿರುವ ಸುದ್ದಿ ಹಬ್ಬುತ್ತಿದ್ದಂತೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಇನ್ಫೋಸಿಸ್ ಷೇರುಗಳ ಏರಿಳಿತ ಆರಂಭವಾಗಿದೆ.

ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಿಎಸ್ ಇನಲ್ಲಿ ಇನ್ಫಿ ಷೇರುಗಳು 2388.75 ರು ನಂತೆ ಶೇ 1.67 ರಷ್ಟು ಇಳಿಮುಖವಾಗಿತ್ತು.

ಎನ್ ಎಸ್ ಇನಲ್ಲಿ 2389.60 ರುನಂತೆ ಶೇ 1.96 ರಷ್ಟು ಕುಸಿತ ಕಂಡಿದೆ.

ಆದರೆ, ನಾಸ್ಡಾಕ್ ನಲ್ಲಿ 44.03 ಡಾಲರ್ ನಂತೆ ಶೇ 0.07 ರಷ್ಟು ಪ್ರಗತಿ ಸಾಧಿಸಿ ಸುಧಾರಣೆ ಕಂಡಿದೆ.

ಫೇಸ್ ಬುಕ್ ಮೇಲಕ್ಕೆ: ನಾಸ್ಡಾಕ್ 100 ತಂತ್ರಜ್ಞಾನ ಕ್ಷೇತ್ರದ ಇಂಡೆಕ್ಸ್ ನಲ್ಲಿ ಇನ್ಫೋಸಿಸ್ ಜಾಗವನ್ನು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಇದೇ ಮೊದಲ ಬಾರಿಗೆ ಆಕ್ರಮಿಸಿದೆ.

ಕಳೆದ ಕೆಲವು ತ್ರೈಮಾಸಿಕದಲ್ಲಿ ಕಳಪೆ ಪ್ರದರ್ಶನ ನೀಡುತ್ತಾ ಬಂದು ಲಯ ಕಳೆದುಕೊಂಡಿರುವ ಇನ್ಫೋಸಿಸ್ ಸಂಸ್ಥೆ ಮೇಲೆ ಹೂಡಿಕೆದಾರರು ಗಮನ ಹರಿಸುವುದನ್ನು ಬಿಟ್ಟಿದ್ದಾರೆ. ಎಚ್ ಸಿಎಲ್ ಹಾಗೂ ಟಿಸಿಎನ್ ನಂಥ ಸಂಸ್ಥೆಗಳು ಪ್ರತಿ ತ್ರೈಮಾಸಿಕದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ನಾಸ್ಡಾಕ್ 100 ನಿಂದ ಹೊರಬಿದ್ದಿರುವುದು ಇನ್ಫೋಸಿಸ್ ಪಾಲಿಗೆ ಭಾರಿ ಹಿನ್ನೆಡೆ ಎನ್ನಬಹುದು. 13 ವರ್ಷಗಳ ಬಳಿಕ ಇನ್ಫೋಸಿಸ್ ತುಂಬಾ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ.

1999 ರಲ್ಲಿ 100 ಮಿಲಿಯನ್ ಡಾಲರ್ ಆದಾಯ ಗಳಿಕೆಯೊಂದಿಗೆ ಜಾಗತಿಕ ಮಟ್ಟದ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಭಾರತದ ಕಂಪನಿ ಎಂಬ ಹೆಗ್ಗಳಿಕೆಗೆ ಇನ್ಫೋಸಿಸ್ ಪಾತ್ರವಾಗಿತ್ತು.

English summary
Shares of Infosys Technologies, India's second largest software player fell almost two percent in trade, following reports that the company will not be a part of Nasdaq 100 with effect from next Wednesday(Dec.5).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X