ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯಾಗ್ರಾ ನುಂಗಿ ಅಂಧನಾದ 86ರ ಹರೆಯದ ಗಂಡು

By Mahesh
|
Google Oneindia Kannada News

Viagra turns 86year-old man blind
ವಾಷಿಂಗ್ಟನ್, ಡಿ.4: ವಯಾಗ್ರಾ ನುಂಗಿದರೆ ಪುರುಷತ್ವ ಉಕ್ಕಿ ಲೈಂಗಿಕ ಕ್ರಿಯೆಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂದು ಎಲ್ಲರೂ ನಂಬಿದ್ದಾರೆ. ಆದರೆ, ಇಲ್ಲೊಬ್ಬ 86ರ ಹರೆಯದ ಗಂಡಿನ ಕಣ್ಣುಗಳನ್ನೇ ವಯಾಗ್ರಾ ಎಂಬ 'ನೀಲಿ' ಮಾತ್ರೆ ನುಂಗಿ ಹಾಕಿದೆ

ಕಳೆದ ಕೆಲ ವರ್ಷಗಳಿಂದ ವಯಾಗ್ರಾ ಸೇವಿಸುವುದರಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಕೂಗೆದ್ದಿದೆ.

ಆದರೆ, ವಯಾಗ್ರಾದ ಪರಿಣಾಮವಾಗಿ ಯಾರು ಕಣ್ಣು ಕಳೆದುಕೊಂಡ ಪ್ರಸಂಗ ದಾಖಲಾಗಿಲ್ಲ. ಇತ್ತೀಚೆಗೆ ಅಂಥೋನಿ ಅಂಡ್ರೆಸಾಕಿಸ್ ಎಂಬ ವ್ಯಕ್ತಿಗೆ ವಯಾಗ್ರಾದಿಂದ ಅಂಧತ್ವ ಪ್ರಾಪ್ತಿಯಾಗಿದೆ.

ಮ್ಯಾಹಟನ್ ಫೆಡರಲ್ ಕೋರ್ಟ್ ಗೆ ಈ ಬಗ್ಗೆ ಅಂಥೋನಿ ದೂರು ನೀಡಿದ್ದಾರೆ. ವಯಾಗ್ರಾ ಮಾತ್ರೆ ಮಾರಾಟವನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಹಾಗೂ ನನ್ನ ಕಣ್ಣುಗಳನ್ನು ನುಂಗಿದ ಸಂಸ್ಥೆ ನನಗೆ ಪರಿಹಾರ ಧನರೂಪವಾಗಿ 2 ಮಿಲಿಯನ್ ಡಾಲರ್ ನೀಡಬೇಕು ಎಂದು ದೂರು ಸಲ್ಲಿಸಿದ್ದಾರೆ.

ಕಳೆದ ಏಪ್ರಿಲ್ 2012ನಲ್ಲಿ ವಯಾಗ್ರಾ ಸೇವಿಸಿದೆ ಅಂದಿನಿಂದ ಇಲ್ಲಿವರೆಗೂ ನನಗೆ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಎಲ್ಲಾ ರೀತಿ ಚಿಕಿತ್ಸೆ ನೀಡಿದರೂ ಕಣ್ಣಿನ ದೃಷ್ಟಿ ಮರಳುತ್ತಿಲ್ಲ.

ಇದು ವಯಾಗ್ರಾ ನುಂಗಿದ ಸೈಡ್ ಎಫೆಕ್ಟ್ ಎಂದು ನಂತರ ತಿಳಿಯಿತು. ನನ್ನ ಉಳಿದ ಜೀವನದ ಖುಷಿ ಕಸಿದುಕೊಂದ ಫೈಜರ್ ಕಂಪನಿಗೆ ಶಿಕ್ಷೆ ವಿಧಿಸಿ ಎಂದು ಅಂಥೋನಿ ಮೊರೆ ಇಟ್ಟಿದ್ದಾರೆ.

ಕಣ್ಣಿನ ಸಮಸ್ಯೆ ತಲೆದೋರಿದ ತಕ್ಷಣವೇ ಈ ಬಗ್ಗೆ Pfizer ಸಂಸ್ಥೆಯನ್ನು ಸಂಪರ್ಕಿಸಿದ ಅಂಥೋನಿ ಸಹಾಯ ಕೋರಿದ್ದಾರೆ.

ಅದರೆ, ಆ ರೀತಿ ತೊಂದರೆ ಸಹಜ ಕೆಲ ದಿನಗಳ ನಂತರ ಸರಿ ಹೋಗುತ್ತದೆ ಎಂದು ಕಂಪನಿಯವರು ಭರವಸೆ ನೀಡಿದ್ದರು ಆದರೆ, ಮತ್ತೆ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಅಂಥೋನಿ ದೂರಿದ್ದಾರೆ.

ವಯಾಗ್ರದಿಂದ ಅಂಧತ್ವ ಸಾಧ್ಯವೆ?: 1998ರಿಂದ ಮಾರುಕಟ್ಟೆಯಲ್ಲಿರುವ 'ವಂಡರ್ ಗುಳಿಗೆ' ವಯಾಗ್ರಾದಿಂದ ಈ ವರೆಗೂ ಯಾರಿಗೂ ಕಣ್ಣು ಹೋದ ದಾಖಲೆಗಳಿಲ್ಲ. ಈ ಪ್ರಕರಣದಲ್ಲಿ ಅಂಥೋನಿ ಮಾತು ನಿಜವಾದರೆ ಹಲವರ ಕಣ್ಣು ತೆರೆಯಲಿದೆ .

ಶಿಶ್ನ ನಿಮಿರುವಿಕೆ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ವಯಾಗ್ರಾ ಸೇವಿಸಿ ಹೆಚ್ಚಿನ ಲೈಂಗಿಕ ಸುಖ ಅನುಭವಿಸುವುದು ಮಾಮೂಲಿನ ಸಂಗತಿಯಾಗಿದೆ.

ಎಲ್ಲಾ ಮಾತ್ರೆಗಳಂತೆ ವಯಾಗ್ರಾ ಸೇವಿಸುವುದರಿಂದಲೂ ಸೈಡ್ ಎಫೆಕ್ಟ್ ಉಂಟಾಗುತ್ತದೆ. ಆದರೆ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ.

ಸಾಮಾನ್ಯವಾಗಿ, ತಲೆನೋವು, ಶೀತ, ಮಲಬದ್ಧತೆ, ಕಣ್ಣು ಕತ್ತಲೆ ಕಟ್ಟುವಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತದೆ.

ಅದರೆ, ಕೆಲವೊಮ್ಮೆ ಎದೆನೋವು, ಮೈಕೈ ನೋವು, ಚರ್ಮದಲ್ಲಿ ತುರಿಕೆ, ನಿದ್ರಾಹೀನತೆ, ಸ್ಪರ್ಶ ಹೀನತೆ, ಬಾಯಿ ಒಣಗುವಿಕೆ, ಅತಿಯಾಗಿ ಬೆವರುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡ ಉದಾಹರಣೆಗಳಿದೆ.

ಆದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗುಳಿಗೆ ಸೇವಿಸಿದರೆ, ಸೈಡ್ ಎಫೆಕ್ಟ್ ದೊಡ್ಡದಾಗೆ ಕಾಡುತ್ತದೆ.

ಪಾರ್ಶ್ವವಾಯು, ಮೂರ್ಛೆ ಹೋಗುವುದು, ಮೂಗಿನಲ್ಲಿ ರಕ್ತ ಸೋರುವುದು, ಅಧಿಕ ರಕ್ತದೊತ್ತಡ, ಕಿವುಡಾಗುವಿಕೆ ಅಲ್ಲದೆ ಹೃದಯಾಘಾತ ಕೂಡಾ ಸಂಭವಿಸುವ ಸಾಧ್ಯತೆಗಳಿರುತ್ತದೆ.

ವಿಚಿತ್ರವೆಂದರೆ ಕೆಲವು ಪ್ರಕರಣಗಳಲ್ಲಿ ನಿಮಿರಿಕೆಗೆ ಒಳಪಟ್ಟ ಶಿಶ್ನ ಸುಮಾರು 4 ಗಂಟೆಗಳ ಅದೇ ಸ್ಥಿತಿಯಲ್ಲೇ ಉಳಿದು ಸಮಸ್ಯೆ ಉಂಟು ಮಾಡಿದ್ದು ಇದೆ. ಅದರೆ, ಮೇಲ್ಕಂಡ ಪ್ರಕರಣದಲ್ಲಿ ಅಂಥೋನಿ ವಯಸ್ಸು 86 ವರ್ಷವಾದ್ದರಿಂದ ಸೈಡ್ ಎಫೆಕ್ಟ್ ಗೂ ಮೀರಿದ ಸಮಸ್ಯೆ ಎದುರಾಗಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

English summary
Anthony Andresakis from America alleged that he’s been left with “serious visual impairment” after taking Viagra. He went to Manhattan federal court to ask a judge to shut down sales of the erectile-dysfunction drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X