ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FDI ಅಗ್ನಿಪರೀಕ್ಷೆ: ಯಡಿಯೂರಪ್ಪ 'ಚಿಲ್ರೆ' ರಾಜಕೀಯ

By Srinath
|
Google Oneindia Kannada News

fdi-acid-test-upa-yeddyurappa-to-play-retail-politics
ನವದೆಹಲಿ, ಡಿ.4: ಸಿಬಿಐ ಇಕ್ಕಳದಲ್ಲಿ ಸಿಕ್ಕಿ, ಪರಿತಪಿಸುತ್ತಿರುವ KJP ಧುರೀಣ ಬಿಎಸ್‌ ಯಡಿಯೂರಪ್ಪ ಅವರಿಗೆ ಅನಿರೀಕ್ಷಿತವಾಗಿ ಮೊದಲ ಅಗ್ನಿಪರೀಕ್ಷೆ ಎದುರಾಗಿದೆ. ಅದಕ್ಕೂ ಮುನ್ನ ಯಾವ ಪಕ್ಷದ ಆಣತಿಯ ಮೇಲೆ ಹೊಸ ಪಕ್ಷ ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆಯೋ ಆ ಪಕ್ಷಕ್ಕೂ ಇದೇ ಅಗ್ನಿಪರೀಕ್ಷೆ ಎದುರಾಗಿದೆ.

ಹೌದು ಥ್ಯಾಂಕ್ಸ್ ಟು ಮಮತಾ ಬ್ಯಾನರ್ಜಿ ಇಂದಿನಿಂದ ಕಾಂಗ್ರೆಸ್ ನೇತೃತ್ವದ UPA ಸರಕಾರವು ಸಂಸತ್ತಿನಲ್ಲಿ FDI ಅಗ್ನಿಪರೀಕ್ಷೆ ಎದುರಿಸಬೇಕಾಗಿದೆ. ಇಂದಿನಿಂದ ನಡೆಯುವ ಚರ್ಚೆಗಳ ಬಳಿಕ ಭಾರತದೊಳಕ್ಕೆ ರೀಟೇಲ್ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಬಿಟ್ಟುಕೊಳ್ಳಬೇಕೋ, ಬೇಡ್ವೋ ಎಂಬುದರ ಬಗ್ಗೆ ಮತದಾನವೂ ನಡೆಯಲಿದೆ. ಮತ್ತು ಅದು UPAಗೆ ನಿರ್ಣಾಯಕವೆನಿಸಲಿದೆ.

ಹಾಗಾಗಿ, UPA ಅರ್ಥಾತ್ ಕಾಂಗ್ರೆಸ್ ಈ ಮತದಾನದಲ್ಲಿ ಗೆಲ್ಲಲು ಪರಿತಪಿಸುತ್ತಿದೆ. ಒಂದೊಂದು ಮತವೂ ಕಾಂಗ್ರೆಸ್ ಗೆ ಅತ್ಯಂತ ಮಹತ್ವವಾಗಿದೆ. ಈ ಮಧ್ಯೆ, ಸಿಬಿಐ ಗಾಳ ಬೀಸಿ ಯಡಿಯೂರಪ್ಪನವರನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಂಡಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.

ಈ ಹಿನ್ನೆಲೆಯಲ್ಲಿ, ಯಡಿಯೂರಪ್ಪನವರ ಪರ ಬಿಜೆಪಿ ವಿರುದ್ಧ ಸೆಟೆದುನಿಂತಿರುವ 10ಕ್ಕೂ ಹೆಚ್ಚು ಸಂಸದರ ಮತಗಳನ್ನು ಅಡ್ಡಮತದಾನದ ಮೂಲಕ ದಕ್ಕಿಸಿಕೊಂಡು ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಾಂಗ್ರೆಸ್ಸಿನ ತಂತ್ರಗಾರಿಕೆಯಾಗಿದೆ.

ಹಾಗಾಗಿ, ತಮ್ಮ ಬೆಂಬಲಿಗ ಬಿಜೆಪಿ ಸಂಸದರಿಗೆ ಅಡ್ಡಮತದಾನಕ್ಕೆ 'ವಿಪ್' ಜಾರಿಗೊಳಿಸುವುದು ಯಡಿಯೂರಪ್ಪಗೆ ಅನಿವಾರ್ಯವಾಗಿದೆ. ತನ್ಮೂಲಕ ಕಾಂಗ್ರೆಸ್ ಪಕ್ಷವನ್ನು ಸದ್ಯದ ಗಂಡಾಂತರದಿಂದ ಪಾರು ಮಾಡಿ ಕೃತಾರ್ಥರಾಗುವುದು ಯಡಿಯೂರಪ್ಪನವರ ಇರಾದೆಯಿದ್ದಂತಿದೆ.

ಅಥವಾ ಮತದಾನಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರಕ್ಕೆ ನೆರವಾಗುವರೇ ಎಂಬ ಕುತೂಹಲವೂ ಇದೆ ಎಂದು ಕರ್ನಾಟಕದ ಹಿರಿಯ ಸಂಸದರೊಬ್ಬರು ಹೇಳಿದ್ದಾರೆ. ಆದರೆ ಬಿಜೆಪಿ ಈ ಮುಜುಗರದಿಂದ ಹೇಗೆ ಪಾರಾಗುತ್ತದೆ ಎಂಬುದು ಸದ್ಯದ ಕುತೂಹಲ.

ಚಿಲ್ಲರೆ ಕಿರಾಣಿ ವಹಿವಾಟು ಕ್ಷೇತ್ರದಲ್ಲಿ ಶೇ. 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಈಗಾಗಲೇ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ಸರ್ಕಾರ, ಮಂಗಳವಾರದಿಂದ ಎರಡು ದಿನ FDI ಕುರಿತು ಚರ್ಚೆ ಮತ್ತು ಮತದಾನ ಎದುರಿಸಲು ಅಣಿಯಾಗಿದೆ.

545 ಸದಸ್ಯ ಬಲದ ಲೋಕಸಭೆಯಲ್ಲಿ ಪ್ರಸಕ್ತ ಯುಪಿಎಗೆ 265ರ ಸದಸ್ಯರ ಖಚಿತ ಬೆಂಬಲವಿದೆ. ವಿಪಕ್ಷಗಳ ಸಂಖ್ಯಾಬಲ 237. ಹಾಗಾಗಿ, ಮತದಾನದಲ್ಲಿ ಗೆಲುವು ಸಾಧಿಸಲು ಅದಕ್ಕೆ 273 ಸದಸ್ಯರ ಬೆಂಬಲ ಬೇಕೇ ಬೇಕು. ಹೀಗಾಗಿ ಎಸ್‌ಪಿ (22) ಅಥವಾ ಬಿಎಸ್ ಪಿ (21) ಇವೆರಡರಲ್ಲಿ ಒಂದು ಪಕ್ಷದ ಮತ ಪಡೆಯುವುದು ಅನಿವಾರ್ಯ.

ಬಹುಮತವಿಲ್ಲದ UPAಗೆ ರಾಜ್ಯಸಭೆಯಲ್ಲಿ ಏನಾಗುವುದು!?:
ಇನ್ನೊಂದೆಡೆ ಬುಧವಾರದಿಂದ ರಾಜ್ಯಸಭೆಯಲ್ಲಿಯೂ ಈ ವಿಷಯದ ಕುರಿತು ಚರ್ಚೆ ಮತ್ತು ಮತದಾನ ನಡೆಯಲಿದೆ. ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲದೇ ಇರುವುದರಿಂದ, ಅಲ್ಲಿ ಗೆಲುವು ಸಾಧಿಸಲು ಯಾವ ತಂತ್ರಗಾರಿಕೆ ಪ್ರದರ್ಶಿಸಲಿದೆ ಎಂಬ ಕುತೂಹಲವಿದೆ.

English summary
Karnataka former Chief Minister BS Yeddyurappa has to show his political acumen to bail out Congress led UPA govt in the FDI test in Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X