ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಬಗ್ಗೆ ಸುಷ್ಮಾ ಅಚ್ಚರಿಯ ಹೇಳಿಕೆ

|
Google Oneindia Kannada News

Sushma Swaraj endorses Narendra Modi as PM candidate
ವಡೋದರಾ, ಡಿ 2: ಗುಜರಾತ್ ನಲ್ಲಿ ನರೇಂದ್ರ ಮೋದಿ ಪಕ್ಷವನ್ನು ಪ್ರಭಲವಾಗಿ ಬೆಳೆಸಿದ್ದಾರೆ. ರಾಷ್ಟ್ರ ಮಟ್ಟದಲ್ಲೂ ಮೋದಿ ಒಬ್ಬ ಪ್ರಭಾವಿ ನಾಯಕ. ಪ್ರಧಾನಿಯಾಗುವ ಎಲ್ಲಾ ಅರ್ಹತೆಯನ್ನು ಮೋದಿ ಹೊಂದಿದ್ದಾರೆಂದು ಲೋಕಸಭೆಯಲ್ಲಿನ ವಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಇದೇ ಮೊದಲ ಬಾರಿಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅಸೆಂಬ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಸುಷ್ಮಾ, ಮೋದಿ ಅಭಿವೃದ್ದಿಯ ಹರಿಕಾರ.

ಅವರ ಅವಧಿಯಲ್ಲಿ ಗುಜರಾತ್ ಅದ್ಭುತ ಅಭಿವೃದ್ದಿಯನ್ನು ಕಂಡಿದೆ. ಅವರಿಗೆ ರಾಷ್ಟ್ರಮಟ್ಟದಲ್ಲೂ ಉತ್ತಮ ಹೆಸರಿದೆ ಎಂದು ಮೋದಿಯನ್ನು ಕೊಂಡಾಡಿದ್ದಾರೆ.

ಮೋದೀಜಿ ನಮ್ಮ ಪಕ್ಷದ ಹಿರಿಯ ನಾಯಕ. ಅವರ ಅಧಿಕಾರದ ಅವಧಿಯಲ್ಲಿ ಗುಜರಾಜಿನ ಅಭಿವೃದ್ದಿ ರಾಷ್ಟ್ರಕ್ಕೆ ಮಾದರಿಯಾಗಿದೆ.

ಅವರು ಪ್ರಧಾನಿ ಹುದ್ದೆ ನಿಭಾಯಿಸುವ ಎಲ್ಲಾ ಕ್ಷಮತೆ ಹೊಂದಿದ್ದಾರೆಂದು ಸುಷ್ಮಾ ಸ್ವರಾಜ್ ಹೇಳಿಕೆ ನೀಡಿದ್ದಾರೆ.

ಸುಷ್ಮಾ ಅವರ ಈ ಹೇಳಿಕೆ ಪಕ್ಷದ ಪ್ರಧಾನಿ ಹುದ್ದೆಯ ಆಕಾಂಕ್ಷಿ ಎಲ್ ಕೆ ಆಡ್ವಾಣಿ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಮೈತ್ರಿಕೂಟದ ಪ್ರಮುಖ ನಾಯಕ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮೋದಿಯವರನ್ನು ಪ್ರಧಾನಿಯೆಂದು ಬಿಂಬಿಸುವುದಕ್ಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಹುದ್ದೆಗೆ ಸುಷ್ಮಾ ಸ್ವರಾಜ್ ಸೂಕ್ತ ಆಯ್ಕೆಯೆಂದು ಇತ್ತೀಚಿಗೆ ನಿಧನ ಹೊಂದಿದ್ದ ಶಿವಸೇನೆಯ ಮುಖ್ಯಸ್ಥ ಬಾಳಾ ಠಾಕ್ರೆ ಹೇಳಿಕೆ ನೀಡಿದ್ದರು.

English summary
Senior BJP leader Sushma Swaraj has sorted out the leadership issue in BJP ahead of the 2014 general elections by saying that Narendra Modi is fit to become the Prime Minister of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X