ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಕೆಳಗೆ ದಬ್ಬಿ ಮೇಲಕ್ಕೇರಿದ ಟಿಸಿಎಸ್

By Mahesh
|
Google Oneindia Kannada News

Market cap of top 10 firms
ಬೆಂಗಳೂರು, ಡಿ.2: ದೇಶದ ಅಗ್ರಗಣ್ಯ 10 ಕಂಪನಿಗಳ ಮಾರುಕಟ್ಟೆ ಮೌಲ್ಯ ಕಳೆದ ವಾರ ಸುಧಾರಣೆ ಕಂಡಿದೆ. ಕಳೆದ ವಾರದ ಲೆಕ್ಕಾಚಾರದಂತೆ ಟಿಸಿಎಸ್, ಒಎನ್ ಜಿಸಿ ಹಾಗೂ ಎಚ್ ಡಿಎಫ್ ಸಿ ಉತ್ತಮ ಪ್ರಗತಿ ಸಾಧಿಸಿದೆ. ಒಟ್ಟು ಟಾಪ್ 10 ಕಂಪನಿಗಳ ಮೌಲ್ಯ 66,590 ಕೋಟಿ ರು ದಾಟಿದೆ.

ಸರ್ಕಾರಿ ಸ್ವಾಮ್ಯದ ಒಎನ್ ಜಿಸಿ ಕಂಪನಿಯೊಂದೆ ಕಳೆದ ವಾರ 11,806 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡಿದೆ. ಕಂಪನಿ ಷೇರು ಗಳು ಶೇ 5 ರಷ್ಟು ಪ್ರಗತಿ ಕಂಡಿತ್ತು. ಕಂಪನಿ ಒಟ್ಟಾರೆ ಮೌಲ್ಯ 2,26,634 ಕೋಟಿ ರು ಆಗಿದೆ.

ಕಳೆದ ವಾರದ ಅತಿ ಹೆಚ್ಚು ಗಳಿಕೆ ಪಡೆದ ಕಂಪನಿಯಲ್ಲಿ ಎಚ್ ಡಿಎಫ್ ಸಿ ಕೂಡಾ ಸೇರಿದೆ. ಸುಮಾರು 9,683 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು 1,29,327 ಕೋಟಿ ರು ಮೊತ್ತದ ಕಂಪನಿ ಎನಿಸಿದೆ.

* ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಮೌಲ್ಯ 4,844 ಕೋಟಿ ರು ಏರಿಕೆ ಕಂಡು 2,56,953 ಕೋಟಿ ರು ಮೌಲ್ಯಕ್ಕೇರಿದೆ.
* ಟಿಸಿಎಸ್ ಬದ್ಧವೈರಿ ಇನ್ಫೀಸಿಸ್ ಸಂಸ್ಥೆ ಮೌಲ್ಯ 3,480 ಕೋಟಿ ರು ಪ್ರಗತಿ ಕಂಡು 1,39,917 ಕೋಟಿ ರು ಆಗಿದೆ.
* ಆರ್ ಐಎಲ್ ಸಂಸ್ಥೆ 6730 ಕೋಟಿ ರು ಮೌಲ್ಯ ಏರಿಸಿಕೊಂಡು 2,56,868 ಕೋಟಿ ರು ಆಗಿದೆ.
* ಐಟಿಸಿ 9475 ಕೋಟಿ ರು ಮೌಲ್ಯ ಸಾಧಿಸಿ 2,34,517 ಕೋಟಿ ರು ಆಗಿದೆ.
*ಎಚ್ ಡಿಎಫ್ ಸಿ ಬ್ಯಾಂಕ್ 7700 ಕೋಟಿ ರು ಮೌಲ್ಯ ಹೆಚ್ಚಿಕೊಂಡು, 1,65,839 ಕೋಟಿ ರು ಆಗಿದೆ.

ಕಂಪನಿಗಳು ತ್ರೈಮಾಸಿಕದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದರೂ ಕೆಲ ಕಂಪನಿ ಷೇರು ಮೌಲ್ಯ ಕುಸಿತ ಕಂಡಿದ್ದರಿಂದ ಟಾಪ್ ಕಂಪನಿಗೆ ತಲೆನೋವಾಗಲಿದೆ.

ಟಾಪ್ 10 ಕಂಪನಿಗಳು, ಮಾರುಕಟ್ಟೆ ಮೌಲ್ಯ (ನ.23-ನ.30) ಹೀಗಿದೆ:
1. ಟಿಸಿಎಸ್, 2,56,953 ಕೋಟಿ ರು
2. ರಿಲಯನ್ಸ್ ಇಂಡಸ್ಟ್ರೀ ಲಿಮಿಟೆಡ್, 2,56,868 ಕೋಟಿ ರು
3. ಐಟಿಸಿ, 2,34,517 ಕೋಟಿ ರು
4. ಸಿಐಎಲ್, 2,31,147 ಕೋಟಿ ರು
5. ಒಎನ್ ಜಿಸಿ,2,26,634 ಕೋಟಿ ರು
6. ಎಚ್ ಡಿಎಫ್ ಸಿ ಬ್ಯಾಂಕ್, 1,65,839 ಕೋಟಿ ರು
7. ಎಸ್ ಬಿಐ,
8. ಇನ್ಫೋಸಿಸ್,
9. ಎನ್ ಟಿಪಿಸಿ,
10. ಎಚ್ ಡಿಎಫ್ ಸಿ

ಬಿಎಸ್ ಇನಲ್ಲಿ ನೋಂದಾಯಿತ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಪ್ರತಿದಿನದ ಮಾರುಕಟ್ಟೆ ಏರಿಳಿತ ಹಾಗೂ ಷೇರು ಮೌಲ್ಯದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಇಲ್ಲಿ ನೀಡಿರುವ ಅಂಕಿ ಅಂಶಗಳು ಭಾನುವಾರ, 2 ಡಿಸೆಂಬರ್ 2012ಕ್ಕೆ ಅನ್ವಯವಾಗುವಂತೆ ಮಾತ್ರ ಇದೆ ಎಂದು ಓದಿಕೊಳ್ಳತಕ್ಕದ್ದು.

English summary
Market cap of top 10 firms : TCS had reclaimed the number one position(Nov23-Nov30) with Reliance Industries in second spot followed by ITC, CIL, ONGC, HDFC Bank, SBI, Infosys, NTPC and HDFC. TCS' m-cap climbed by Rs. 4,844 crore to Rs. 2,56,953 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X