• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದು ಚೆಸ್ ಆಡಲು ಬಿಡಿ! ಮಕ್ಕಳು ಚತುರಮತಿಗಳಾಗಲಿ

By Srinath
|

ಬೆಂಗಳೂರು, ನ.30: 'ಮಕ್ಕಳಿಗೆ ಏನನ್ನು ಯೋಚಿಸಬೇಕು ಎಂಬುದನ್ನು ಕಲಿಸುವ ಬದಲು ಹೇಗೆ ಯೋಚಿಸಬೇಕು ಎಂಬುದನ್ನು ಕಲಿಸಬೇಕು' ಎನ್ನುತ್ತಾರೆ ಮಾರ್ಗರೇಟ್ ಮೀಡ್.

ಕಂಕಣ ತೊಟ್ಟಿರುವ ಶಿಕ್ಷಣ ಇಲಾಖೆ: ಇದು ಯಾರ ideaನೋ ಗೊತ್ತಿಲ್ಲ. ಆದರೆ ಇದಕ್ಕೆ ಕಾರಣಕರ್ತರಾಗಿರುವವರಿಗೆ ಕೋಟಿ ವಂದನೆ ಸಲ್ಲಿಸಬೇಕು. ಏನೆಂದರೆ ಕರ್ನಾಟಕ ಶಿಕ್ಷಣ ಇಲಾಖೆಯು ಚದುರಂಗ ಆಟವನ್ನು ಎಲ್ಲ (ಸುಮಾರು 15 ಸಾವಿರ) ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮಕ್ಕಳಿಗೆ ಕಲಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಶುಕ್ರವಾರ ನವೆಂಬರ್ 30, 2012ರಂದು ಚೆಸ್ ದಿನಾಚರಣೆ ಮೂಲಕ ಚತುರಮತಿಯ ಚದುರಂಗ ಆಟವನ್ನು ಉತ್ತೇಜಿಸಲು ಕಂಕಣ ತೊಟ್ಟಿದೆ.

ಬಹುಶಃ ಇದೇ ಮೊದಲ ಬಾರಿಗೆ ಸರಕಾರ ಇಂತಹ ಪ್ರಯತ್ನಕ್ಕೆ ಕೈಹಾಕಿದಂತಿದೆ. ಈ ಹಿಂದೆ ಶಾಲಾ ಮಟ್ಟದಲ್ಲಿ ಚೆಸ್ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ಬುದ್ಧಿಮತ್ತೆಗೆ ಸಾಣೆ ಹಿಡಿಯುತ್ತಿತ್ತು. ಆದರೆ ಚೆಸ್ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಚೆಸ್ ಗಾಗಿಯೇ ಒಂದು ದಿನವನ್ನು ಮುಡಿಪಾಗಿಡುವುದು ನಿಜಕ್ಕೂ ಸ್ತುತ್ಯಾರ್ಹ.

ಒಂದಷ್ಟು ಚೆಸ್ ಪ್ರಯೋಗಗಳು: ಇಂತಹ ಪ್ರಯೋಗಗಳು ಜಗತ್ತಿನ ಬೇರೆಡೆಗಳಲ್ಲಿ ಕಾಲಕಾಲಕ್ಕೆ ನಡೆಯುತ್ತಾ ಬಂದಿದೆ. ಅದರಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗಿ, ಅವರ ಆಲೋಚನಾಕ್ರಮವೇ ಬದಲಾದ ಉದಾಹರಣೆಗಳಿವೆ. ವೆನಿಜುಲಾ, ಐಸ್ ಲ್ಯಾಂಡ್, ರಷ್ಯಾ ಸೇರಿದಂತೆ 30 ಕ್ಕೂ ಹೆಚ್ಚು ರಾಷ್ಟ್ರಗಳು ಚೆಸ್ ಆಟವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಕೊಂಡಿಸಿವೆ.

ಸದ್ಯಕ್ಕೆ ರಾಜ್ಯದಲ್ಲಿ ರಾಜಕೀಯ ಚದುರಂಗದಾಟ ಮೇಲಾಗಿದೆ. ಆದಾಗ್ಯೂ ಶಿಕ್ಷಣ ಇಲಾಖೆಯ ಈ ಪ್ರಯತ್ನಕ್ಕೆ ಸರಕಾರ ನೀರೆರೆದಿದೆ. ಇದರಿಂದ ಮತ್ತಷ್ಟು ಪ್ರೇರಣೆ ಪಡೆದು ಜಗತ್ತಿನ ಇತರೆ ರಾಷ್ಟ್ರಗಳಂತೆ ಚೆಸ್ ಆಟವನ್ನು ಕರ್ನಾಟಕದ ಶಾಲಾ ಪಠ್ಯಕ್ರಮದಲ್ಲಿಯೂ ಅಳವಡಿಸುವಂತಾಗಲಿ. 'ಚೆಸ್ ಗೆ ಕಾಶಿ' ಎನಿಸಿರುವ ನೆರೆಯ ಚೆನ್ನೈನಿಂದಲೂ ಒಂದಷ್ಟು ಸೂಕ್ತ ಸಲಹೆ ಪಡೆಯಲಿ.

ಚದುರಂಗದಾಟದಿಂದ ನಾನಾ ರೀತಿಯ ಮಾನಸಿಕ ಸಾಮರ್ಥ್ಯಗಳಾದ ಶಿಸ್ತು, ತಾಳ್ಮೆ, ಸಹನೆ, ಆತ್ಮವಿಶ್ವಾಸ, ದೃಢತೆ, ನೆನಪಿನ ಶಕ್ತಿ, ತಾರ್ಕಿಕ ಆಲೋಚನೆ ಬೆಳವಣಿಗೆಯಾಗಲಿದೆ. ಅದೂ ಚಿಕ್ಕ ವಯಸ್ಸಿಗೇ ಪ್ರಾಥಮಿಕ ಶಾಲಾ ಹಂತದಲ್ಲಿ ಚೆಸ್ ಆಟಕ್ಕೆ ಮಣೆ ಹಾಕುವುದು ಉತ್ತಮ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಬುದ್ಧಿಶಕ್ತಿಗೆ ಕಾರಣವಾಗುವ 'ಡೆಂಡ್ರೈಟ್ಸ್' ಬೆಳವಣಿಗೆಯು ಚದುರಂಗ ಆಟ ಆಡುವುದರಿಂದ ಚುರುಕಾಗುತ್ತದೆ ಎಂದು ತಿಳಿದುಬಂದಿದೆ.

ಪೋಷಕರಿಗೆ ಚೆಕ್ ಮೇಟ್: 'ಈಗಿನ ಮಕ್ಕಳು ಅದ್ಭುತ ಪ್ರತಿಭೆಗಳು. ಅವರಿಗೆ ಏನಿಷ್ಟವೋ ಅದನ್ನು ಆಡಲು ಬಿಡಬೇಕು' ಎನ್ನುವುದರಿಂದ ಹಿಡಿದು 'ತಮ್ಮ ಮಕ್ಕಳು ಎಲ್ಲ ಕ್ರೀಡೆ/ಸ್ಪರ್ಧೆಗಳಲ್ಲೂ ವಿಜೃಂಭಿಸುವಂತಾಗಲಿ' ಎಂದು ಇದ್ದಬದ್ದದ್ದಕ್ಕೆಲ್ಲ ಪೋಷಕರು ತಮ್ಮ ಮಕ್ಕಳನ್ನು ಹಚ್ಚುತ್ತಾರೆ. ಆದರೆ ಅದು ಸರ್ವಥಾ ಸಾಧುವಲ್ಲ.

ಹಿರಿಯರೆನಿಸಿಕೊಂಡ ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿದ್ದು ಯಾವುದಾದರೂ ಒಂದೋ ಎರಡೂ ಕ್ರೀಡೆಗಳನ್ನು ಆರಿಸಿಕೊಂಡು ಮಕ್ಕಳು ದೊಡ್ಡ ಸಾಧನೆ ಮಾಡಲು ಬಿಡಿ. ಅದು ಬಿಟ್ಟು ಸುಖಾಸುಮ್ಮನೆ Jack of all - master of none ಆಗುವುದು ಬೇಡ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to Vishveshwara Hegde Kageri, the minister for primary and secondary education, the Chess Day will be celebrated in all high schools in the state today (November 30) as part of a government initiative to encourage this brain-sharpening game among students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more