ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ಸಬ್ಸಿಡಿ ಸಿಲಿಂಡರ್‌ ಪೂರೈಕೆ ಇನ್ನು ದೂರದ ಮಾತು

By Srinath
|
Google Oneindia Kannada News

Domestic LPG Cylinders cap 6/12 cant be rised - Analysis
ನವದೆಹಲಿ, ನ.30: ಕಳೆದ ಸೆಪ್ಟೆಂಬರಿನಿಂದ ಅಡುಗೆ ಅನಿಲ ಸಿಲಿಂಡರ್ ಸಂಖ್ಯೆಯನ್ನು 6/12ಕ್ಕೆ ಸೀಮಿತಗೊಳಿಸಿರುವ ಕೇಂದ್ರ ಸರಕಾರ ಅದನ್ನು 9/12ಕ್ಕೆ ಏರಿಸುವುದು ಇನ್ನು ಕನಸಿನ ಮಾತಾಗಿದೆ. ಹಾಗಾಗಿ ಸರಕಾರ ಹಾಗೂ ಹೀಗೂ ಅಡುಗೆ ಅನಿಲ ಸಿಲಿಂಡರುಗಳನ್ನು ಕನಿಷ್ಠ 9 ಆದರೂ ಪೂರೆಸುತ್ತದೆ ಎಂಬ ಆಸೆಯಿದ್ದರೆ ಬಿಟ್ಟುಬಿಡಿ.

ಪಿ ಚಿದಂಬರಂ ನೇತೃತ್ವದ ಹಣಕಾಸು ಸಚಿವಾಲಯ ಒಪ್ಪಿಗೆ ಸೂಚಿಸಿದರೆ ಪ್ರತಿ ಕುಟುಂಬಕ್ಕೆ ನಿಗದಿ ಮಾಡಲಾಗಿರುವ ಸಬ್ಸಿಡಿ ಸಹಿತ ಸಿಲಿಂಡರ್‌ ಮಿತಿಯನ್ನು 9ಕ್ಕೆ ಏರಿಸಲಾಗುವುದು ಎಂದು ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರು ಹತಾಶರಾಗಿ ಹೇಳಿದ್ದಾರೆ.

ವಾರ್ಷಿಕ 6 ಸಿಲಿಂಡರ್‌ಗಳ ಮಿತಿಯನ್ನು 9ಕ್ಕೆ ಏರಿಸಿದರೆ ಅದರಿಂದ ತೈಲ ಕಂಪನಿಗಳಿಗೆ 3,000 ಕೋಟಿ ರೂ. ಹೊರೆ ಬೀಳುತ್ತದೆ. ಈ ಹೊರೆಯನ್ನು ಭರಿಸಲು ಹಣಕಾಸು ಸಚಿವಾಲಯ ಸಮ್ಮತಿ ನೀಡಿದರೆ 9 ಸಿಲಿಂಡರ್‌ ನೀಡಬಹುದು ಎಂಬ ಮಾತನ್ನು ತೈಲ ಕಂಪನಿಗಳು ಆಡಿವೆ. ಆದರೆ 2012-13 ಸಾಲಿಗೆ ಸಬ್ಸಿಡಿ ನೀಡುವ ಕುರಿತು ಚಿದಂಬರಂ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ ಎಂದು ಮೊಯ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಒಂದು ಲೆಕ್ಕಾಚಾರದ ಪ್ರಕಾರ ಚಿದು ಸಚಿವಾಲಯ 3,000 ಕೋಟಿ ರೂ. ನೀಡುವುದು ಹಾಗಿರಲಿ ಸಬ್ಸಿಡಿ ಬಾಬತ್ತಿನಲ್ಲಿ ಬಿಡಿಗಾಸು ನೀಡಲೂ ವಿತ್ತ ಸಚಿವಾಲಯದಲ್ಲಿ ಹಣವಿಲ್ಲ. ಹಾಗಾಗಿ ಸಬ್ಸಿಡಿ ದರದಲ್ಲಿ 9 ಸಿಲಿಂಡರ್‌ ಸರಬರಾಜು ಆಗುವುದು ಇನ್ನು ಕನಸಿನ ಮಾತು ಎಂದು ಸಚಿವಾಲಯದ ಮೂಲಗಳು ಪಿಸುಗುಟ್ಟಿವೆ.

ಇದಲ್ಲದೆ ಡೀಸೆಲ್ ಮತ್ತು ಸೀಮೆಎಣ್ಣೆಯನ್ನು ಸಬ್ಸಿಡಿ ದರದಲ್ಲಿ ಪೂರೈಸುತ್ತಿರುವುದರಿಂದ ತೈಲ ಕಂಪನಿಗಳು ಪ್ರಸ್ತುತ ಪ್ರತಿದಿನವೂ 400 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗ 9/12 ಸಿಲಿಂಡರುಗಳ ಪೂರೈಕೆಗೆ ಕಂಪನಿಗಳು ಅಂಕಿತವಾಗುವುದು ದುಸ್ತರವಾಗಿದೆ.

ಗಮನಾರ್ಹವೆಂದರೆ ದೇಶದಲ್ಲಿ ಅರ್ಧದಷ್ಟು ಕುಟುಂಬಗಳು ವರ್ಷದಲ್ಲಿ 6 ಸಬ್ಸಿಡಿ ಸಿಲಿಂಡರುಗಳಷ್ಟೇ ಬಳಕೆ ಮಾಡಿದರೆ ಇನ್ನರ್ಧ ಕುಟುಂಬಗಳಿಗೆ ಹೆಚ್ಚುವರಿಯಾಗಿ 3-6 ಸಿಲಿಂಡರುಗಳ ಅಗತ್ಯವಿದೆ.

English summary
Domestic LPG Cylinders cap 6/12 cant be rised - Analysis. As the Finance Ministry is not in a position to agree to give an additional Rs 3,000 crore in 2012-13 the cap on supply of subsidised cooking gas (LPG) to 9 cylinders per household is not possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X