ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಂಬಿ ಆಡಳಿತಾಧಿಕಾರಿಯಿಂದ ಲೈಂಗಿಕ ಕಿರುಕುಳ

By Prasad
|
Google Oneindia Kannada News

Harassment to lady doctor by IIM-B admn officer
ಬೆಂಗಳೂರು, ನ. 29 : ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರೊಬ್ಬರು ಪಿಎಚ್‌ಡಿ ವಿದ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ ನೀಡಿದಂತಹ ತಲೆತಗ್ಗಿಸುವಂತಹ ಘಟನೆ ದೇಶದ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ - ಬೆಂಗಳೂರಿನಲ್ಲಿ ನಡೆದಿರುವುದು ಐಐಎಂ-ಬಿ ಪ್ರತಿಷ್ಠೆಯನ್ನೇ ಮಸುಕುಗೊಳಿಸಿದೆ.

ಐಐಎಂ-ಬಿನ ಮುಖ್ಯ ಆಡಳಿತಾಧಿಕಾರಿಯೊಬ್ಬರು ಮಹಿಳಾ ವೈದ್ಯಾಧಿಕಾರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. 2009ರಿಂದ ಸತತ ಎರಡು ವರ್ಷಗಳ ಕಾಲ ತಮ್ಮ ಮೇಲೆ ಲೈಂಗಿಕ ದಬ್ಬಾಳಿಕೆ ನಡೆಸಿದ್ದಾರೆ ಎಂದು ಮಹಿಳಾ ವೈದ್ಯಾಧಿಕಾರಿ ದೂರಿದ್ದಾರೆ. ಇದನ್ನು ವಿರೋಧಿಸಿ ಮಹಿಳಾ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು.

ಆಡಳಿತಾಧಿಕಾರಿ ಪೀಡನೆಯಿಂದ ಬೇಸತ್ತ ಮಹಿಳಾ ವೈದ್ಯಾಧಿಕಾರಿ ಐಐಎಂಬಿಯ ಜೆಂಡರ್ ಸೆನ್ಸಿಟಿವ್ ಕಮಿಟಿಗೆ 2011ರಲ್ಲಿ ದೂರು ಸಲ್ಲಿಸಿದ್ದರು. ಆದರೆ, ವಿಚಾರಣೆ ನಡೆಯುತ್ತಿರುವಾಗಲೇ ವೈದ್ಯಾಧಿಕಾರಿಯನ್ನು 2012ರ ಜನವರಿಯಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ.

ತಾತ್ಕಾಲಿಕ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಸೇವೆಯನ್ನು 2009ರಲ್ಲಿ ಖಾಯಂಗೊಳಿಸಲಾಗಿತ್ತು ಮತ್ತು ಆಕೆಯನ್ನು ಲೈಂಗಿಕ ಕಿರುಕುಳ ನೀಡಿದ ಮುಖ್ಯ ಆಡಳಿತಾಧಿಕಾರಿಯ ಅಡಿಯಲ್ಲಿ ನೇಮಿಸಲಾಗಿತ್ತು. ಆಗಿಂದಲೇ ಆತ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದನ್ನು ವಿರೋಧಿಸಿ ಐಐಎಂಬಿ ಮ್ಯಾನೇಜ್ಮೆಂಟಿಗೆ ದೂರು ನೀಡಿದ ಮೇಲೆ ಮತ್ತಷ್ಟು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ ಎಂದು ಅವರು ಆರೋಪಿಸಿದ್ದಾರೆ.

ನಂತರ ಅವರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿದ ಮೇಲೂ ಕೆಲಸ ಮಾಡಲಾಗದಂತಹ ವಾತಾವರಣವನ್ನು ಸೃಷ್ಟಿಸಲಾಗಿದೆ. ಮುಂದುವರಿದ ಕಿರುಕುಳವನ್ನು ಸಹಿಸಲಾಗದೆ ಲಿಖಿತ ದೂರು ನೀಡುವುದು ಖಾತ್ರಿಯಾಗುತ್ತಿದ್ದಂತೆ ಕೆಲಸ ಬಿಡಲು ಆಕೆಗೆ ಸೂಚಿಸಲಾಗಿದೆ. ಜನವರಿ 30, 2012ರಂದು ಲಿಖಿತ ದೂರು ನೀಡಿದ ಮರುದಿನವೇ ಜನವರಿ 31ರಂದು ಆಕೆಯನ್ನು ಕೆಲಸದಿಂದ ಕಿತ್ತುಹಾಕಲಾಗಿದೆ.

ಕೆಲಸದಿಂದ ಕಿತ್ತುಹಾಕಿದ್ದನ್ನು ಪ್ರಶ್ನಿಸಿ ಮಹಿಳಾ ವೈದ್ಯಾಧಿಕಾರಿ ಕರ್ನಾಟಕ ಹೈಕೋರ್ಟನ್ನು ಸಂಪರ್ಕಿಸಿದಾಗ ಅವರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದಾಗ ತಮ್ಮನ್ನು ಮಾತ್ರ ಕೆಲಸದಿಂದ ಕಿತ್ತುಹಾಕಲಾಯಿತು, ಆದರೆ, ಕಿರುಕುಳು ನೀಡಿದವರನ್ನು ಅಮಾನತಿನಲ್ಲಿ ಇಡಲಿಲ್ಲ. ನನಗೆ ನ್ಯಾಯ ದೊರಕಿಸಿಕೊಡುವವರು ಯಾರು ಎಂದು ಮಹಿಳೆ ಗೋಳು ತೋಡಿಕೊಂಡಿದ್ದಾರೆ.

ಮಹಿಳೆಯನ್ನು ಬೆಂಬಲಿಸಿ ಮಹಿಳಾ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದರೆ, ಐಐಎಂಬಿಯ ಮುಖ್ಯ ಆಡಳಿತಾಧಿಕಾರಿಯನ್ನು ಬೆಂಬಲಿಸಿ ಮ್ಯಾನೇಜ್ಮೆಂಟ್ ಸಂಸ್ಥೆಯ ಸಿಬ್ಬಂದಿಗಳು ಪ್ರತಿಭಟನೆಗೆ ಇಳಿದವೆ. ಈ ಕುರಿತಂತೆ ತಾವೇ ಸ್ವತಃ ಐಐಎಂಬಿ ಮ್ಯಾನೇಜ್ಮೆಂಟನ್ನು ಸಂಪರ್ಕಿಸುವುದಾಗಿ ಮಹಿಳಾ ಸಂಘಟನೆಗಳು ಹೇಳಿವೆ.

English summary
Lady medical officer has alleged that administrative head of Indian Institute of Management Bangalore has harassed her sexually for 2 years when she was working under him. This incident has tarnished the image of IIM-B, one of the prestigious management institute in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X