ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಮಾಲಿನ್ಯ : 2ನೇ ಸ್ಥಾನಕ್ಕೆ ಬೆಂಗಳೂರು ತೃಪ್ತಿ

By Prasad
|
Google Oneindia Kannada News

Bangalore 2nd best among most polluting cities
ಬೆಂಗಳೂರು, ನ. 29 : ಗಾರ್ಡನ್ ಸಿಟಿ (ಒನ್ಸ್ ಅಪಾನ್ ಅ ಟೈಮ್) ಬೆಂಗಳೂರಿನಲ್ಲಿ ಅದೇನು ಚಳಿ ಅಂತೀರಿ! ಅಬಾಬಾಬಾ ಬೆಳಿಗ್ಗೆ ಅಂತೂ ಎಲ್ಲೆಲ್ಲೂ ದಟ್ಟ ಮಂಜು, ಸ್ವೆಟರ್ ಇಲ್ದೆ ಕಾಲಿಡೋಕೆ ಆಗಲ್ಲ. ಅರೆ, ಬೆಳಿಗ್ಗೆ ಅಷ್ಟೇ ಏಕೆ, ಇಡೀ ದಿನ ಸಿಕ್ಕಾಪಟ್ಟೆ ಟ್ರಾಫಿಕ್ ಇರೋ ಏರಿಯಾದಲ್ಲಿ ಕೂಡ ಮಂಜು ಕವಿದಂತೆ ಇರುತ್ತದೆ ಅಂತೀರಾ?

ಸ್ವಾಮಿ ಅದು ಮಂಜು ಅಲ್ಲ. ಕನ್‌ಫ್ಯೂಸ್ ಮಾಡ್ಕೋಬೇಡಿ. ಅದು ರಾತ್ರಿ ಹನ್ನೆರಡು ಗಂಟೆಗಳವರೆಗೂ ರಸ್ತೆಗಳನ್ನು ತುಂಬಿ ತುಳುಕಿಸುವ ದ್ವಿಚಕ್ರ, ನಾಲ್ಕು ಚಕ್ರ, ಆರು ಚಕ್ರ, ಎಂಟು ಚಕ್ರದ ವಾಹನಗಳು ಬುಸುಬುಸು ಎಂದು ಉಗುಳುವ ಹೊಗೆ. ಥತ್ ನನ್ಮಂದು ಅದಕ್ಕೇ ಇರಬೇಕು, ಯಾವಾಗಲೂ ಕಣ್ಣು ಉರಿ, ಗಂಟಲು ಕೆರೆತ, ಉಸಿರಾಟದ ತೊಂದರೆ, ಆಸ್ತಮಾ... ಎಸಿ ಬಸ್ಸು, ಆಟೋ ಹಿಂದಿನಿಂದ ಒಮ್ಮೆ ಹೋಗಿ ನೋಡಿ ಗೊತ್ತಾಗುತ್ತದೆ.

ಇಂತಿರುವ ಬೆಂಗಳೂರಿಗೆ ಮತ್ತೊಂದು ಬಿರುದು ದಕ್ಕಿದೆ. ಅದೇನಪ್ಪಾ ಅಂದ್ರೆ, ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ವಾಯುಮಾಲಿನ್ಯ ಉಂಟು ಮಾಡುತ್ತಿರುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಅಮೆರಿಕಾದ ಪೋರ್ಟ್ ಲ್ಯಾಂಡ್ ಇದೆ. ಥತ್ತೇರೆಕಿ, ಎರಡನೇ ಸ್ಥಾನ ಹೇಗೆ ಬೆಂಗಳೂರಿಗೆ ಸಿಕ್ಕಿತು? ಬೆಂಗಳೂರಿಗೆ ವಾಯುಮಾಲಿನ್ಯ ಮಾಡುವ ನಗರಗಳಲ್ಲಿ ಮೊದಲನೇ ಸ್ಥಾನ ಸಿಗಬೇಕಿತ್ತು ಅಂತೀರಾ?

ಇದು ಅಂತಿಂಥ ಕಾಂಜಿಪಿಂಜಿಗಳು ಮಾಡಿರುವ ಅಧ್ಯಯನದಿಂದ ತಿಳಿದುಬಂದಿಲ್ಲ. ನಾಸಾದ ಹೈಟೆಕ್ ಉಪಗ್ರಹಗಳು ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ. ಒಟ್ಟು 189 ಮಹಾನಗರಗಳನ್ನು ಇಂತಹ ಅಧ್ಯಯನಕ್ಕೆ ಟೆಲ್ ಅವೀವ್ ಯುನಿವರ್ಸಿಟಿಯ ವಿಜ್ಞಾನಿಗಳು ಪರಿಗಣಿಸಿದ್ದರು. ಇದು ಸತತ ಎಂಟು ವರ್ಷಗಳ ಕಾಲ ನಡೆಸಿದ ಅಧ್ಯಯನದ ಫಲಿತಾಂಶ.

2002ರಿಂದ 2010ರವರೆಗೆ ಬೆಂಗಳೂರಿನಲ್ಲಿನ ಏರೊಸೋಲ್ (ವಾಯುಮಾಲಿನ್ಯ ಮಾಡುವ ಅನಿಲ, ಧೂಳಿನ ಪ್ರಮಾಣ) ಶೇ. 34ರಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಸಂಗತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. 2010ರಿಂದೀಚೆಗೆ ಈ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು. ಚೀನಾ, ಭಾರತ, ಮಧ್ಯಪ್ರಾಚ್ಯ ರಾಷ್ಟ್ರಗಳು, ಮಧ್ಯ ಆಫ್ರಿಕಾದ ರಾಷ್ಟ್ರಗಳು ವಾಯುಮಾಲಿನ್ಯ ಮಾಡುವುದರಲ್ಲಿ ಸ್ಪರ್ಧೆಗಿಳಿದಿವೆ. ಅದೇ ಯುರೋಪ್, ಅಮೆರಿಕಾದ ಕೇಂದ್ರ ಮತ್ತು ಉತ್ತರದ ದೇಶಗಳು ಈ ಪ್ರಮಾಣವನ್ನು ಇಳಿಸಿಕೊಂಡಿವೆ.

ಅಮೆರಿಕಾದ ಹೂಸ್ಟನ್ ಶೇ.31ರಷ್ಟು ಬ್ರಜಿಲ್‌ನ ಕ್ಯುರಿಟಿಬಾ ಶೇ. 26ರಷ್ಟು, ಸ್ವೀಡನ್‌ದ ಸ್ಟಾಕ್‌ಹೋಂ ಶೇ.23ರಷ್ಟು ವಾಯುಮಾಲಿನ್ಯ ಪ್ರಮಾಣವನ್ನು ಇಳಿಸಿಕೊಂಡಿವೆ. ಅತಿಹೆಚ್ಚು ವಾಯುಮಾಲಿನ್ಯ ವಾಹನಗಳು ಮತ್ತು ಕಾರ್ಖಾನೆಗಳು ಉಗುಳುವ ವಿಷಾನಿಲದಿಂದ ಉಂಟಾಗುತ್ತಿದೆ ಎಂದು ಅಧ್ಯಯನ ಹೇಳಿದೆ. ಮೊದಲ ಸ್ಥಾನದಲ್ಲಿರುವ ಪೋರ್ಟ್‌ಲ್ಯಾಂಡ್‌ನಲ್ಲಿ ಶೇ.53ರಷ್ಟು ಏರೊಸೋಲ್ ಪ್ರಮಾಣ ಏರಿಕೆಯಾಗಿದೆ.

ಬೆಂಗಳೂರಿನ ಟ್ರಾಫಿಕ್ಕಲ್ಲಿ ಅಡ್ಡಾಡುವುದೇ ಸಾಕಾಗಿದೆ. ಎಲ್ಲೆಲ್ಲೂ ಧೂಳು, ಹೊಗೆ, ಉಸಿರಾಡಲು ಕಷ್ಟವಾಗುತ್ತಿದೆ ಎಂದು ದೂರುವವರಿಗೆ ಸದ್ಯದಲ್ಲಿಯೇ ಮತ್ತೊಂದು 'ಸಂತಸ'ದ ಸುದ್ದಿ ತಿಳಿದುಬರಲಿದೆ. ಬೆಂಗಳೂರು ಜಗತ್ತಿನಲ್ಲಿಯೇ ಅತೀ ಹೆಚ್ಚು ಕಸ ಇರುವ ನಗರ, ಅತಿ ಹೆಚ್ಚು ಗಬ್ಬೆದ್ದಿರುವ ಸಿಟಿ ಎಂಬ ಬಿರುದು ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ, ನಮ್ಮ ಮೇಯರ್ ಸಾಹೇಬರು ವಿಲೇವಾರಿಯಾಗದ ಕಸವನ್ನೆಲ್ಲ, ಕಂಡಕಂಡಲ್ಲಿ ತಲೆಯೆತ್ತಿ ನಿಂತಿರುವ ಫ್ಲೈಓವರ್ ಕೆಳಗಡೆ ಹಾಕಿ ಎಂದು ಆಜ್ಞೆ ಮಾಡಿದ್ದಾರೆ!

ಅತಿ ಹೆಚ್ಚು ಮಾಲಿನ್ಯಪೀಡಿತ ನಗರ ಎಂಬ ಬಿರುದನ್ನು ಕಳಚಿಕೊಳ್ಳುವುದು ಹೇಗೆ?

English summary
Bangalore has been rated as the 2nd highest polluting mega cities in world. The study was conducted by Tel Aviv University scientists for 8 years, based by data provided by NASA high tech satellites. How to reduce aerosol content in the environment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X