• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾದಕವಸ್ತು ಸಾಗಾಟ ಮಾಡುತ್ತಿದ್ದ ಸುಂದರಿ ಹತ್ಯೆ

By Prasad
|

ಮೆಕ್ಸಿಕೊ, ನ. 27 : ಶಂಕಿತ ಮಾದಕವಸ್ತು ಸಾಗಾಟಗಾರರು ಮತ್ತು ಸೇನಾಪಡೆಯ ನಡುವೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಮೆಕ್ಸಿಕೋದ ಚೆಲುವೆ ಹತ್ಯೆಗೀಡಾಗಿದ್ದಾಳೆ. ಮಾದಕ ವಸ್ತು ಕಳ್ಳಸಾಗಣೆಗೆ ಕುಖ್ಯಾತಿ ಪಡೆದಿರುವ ಸಿನಾಲೋವಾ ಎಂಬ ಪ್ರದೇಶದಲ್ಲಿ ಶನಿವಾರ ಗುಂಡಿನ ಚಕಮಕಿ ನಡೆದಿದೆ. ಈ ಸಂಗತಿಯನ್ನು ಸೋಮವಾರ ಮಾಧ್ಯಮಗಳಿಗೆ ತಿಳಿಸಲಾಗಿದೆ.

ಮಾರಿಯಾ ಸುಸಾನಾ ಫ್ಲೋರೆಸ್ ಗಮೆಜ್ ಎಂಬ 20 ವರ್ಷದ ಸುಂದರಿ, ಮಾದಕ ವಸ್ತು ಕಳ್ಳಸಾಗಾಟಗಾರರು ಮತ್ತು ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ, ಕಳ್ಳರ ಗುಂಪಿನಲ್ಲಿದ್ದ ಆಕೆ ಸಾವಿಗೀಡಾಗಿದ್ದಾಳೆ. ಆಕೆಯ ಜೊತೆ ಗೆಳೆಯ ಕೂಡ ಸತ್ತಿದ್ದಾನೆ. ಮಾರಿಯಾ ಸುಸಾನಾ 2012ರಲ್ಲಿ 'ಮಿಸ್ ಸಿನಾಲೋವಾ' ಎಂಬ ಕೀರೀಟ ಧರಿಸಿದ್ದಳು.

ಆಕೆಯ ದೇಹದ ಬಳಿ ಒಂದು ಎಕೆ-47 ದೊರೆತಿದ್ದು, ಆಕೆ ಕೂಡ ಗುಂಡಿನ ಚಕಮಕಿಯಲ್ಲಿ ಭಾಗವಹಿಸಿದ್ದಳಾ ಎಂಬ ಶಂಕೆ ವ್ಯಕ್ತವಾಗಿದೆ. ಮಾರಿಯಾ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳೊಡನೆ ಇದ್ದಳೆಂದು ಸಿನಾಲೋವಾ ಅಟಾರ್ನಿ ಜನರಲ್ ಹೇಳಿದ್ದಾರೆ. ಈ ಘಟನೆಯಲ್ಲಿ ಇನ್ನೂ ಮೂವರು ಮೃತರಾಗಿದ್ದಾರೆ. ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಲಾಗಿದ್ದು ಅವರಿಂದ ಮಾದಕ ವಸ್ತು, ರೈಫಲ್ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರಿಯಾ ಸುಸಾನಾ ಫ್ಲೋರೆಸ್ ಗಮೆಜ್ ಕಮ್ಯುನಿಕೇಶನ್ ವಿದ್ಯಾರ್ಥಿನಿಯಾಗಿದ್ದಳು. ಇದೇ ವರ್ಷದ ಫೆಬ್ರವರಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಹಲವಾರು ಸುಂದರಿಯರನ್ನು ಹಿಂದಿಕ್ಕಿ 'ಮಿಸ್ ಸಿನಾಲೋವಾ 2012' ಪಟ್ಟ ಧರಿಸಿದ್ದಳು. ಇಷ್ಟೊಂದು ಸುಂದರವಾಗಿದ್ದ, ಯಾವಾಗಲೂ ಹಸನ್ಮುಖಿಯಾಗಿದ್ದ ಚೆಲುವೆ ಈ ರೀತಿ ಹತ್ಯೆಯಾಗಿದ್ದು ನಿಜಕ್ಕೂ ದುರದೃಷ್ಟಕರ ಎಂದು ಸೌಂದರ್ಯ ಸ್ಪರ್ಧೆಯ ಆಯೋಜಕರು ಹೇಳಿಕೆ ನೀಡಿದ್ದಾರೆ.

ಸುಂದರಿಯೊಬ್ಬಳು ಸಹವಾಸ ದೋಷದಿಂದ ಅಕ್ರಮ ಚಟುವಟಿಕೆಗಳಲ್ಲಿ ಇಳಿದಿದ್ದು ಸಿನಾಲೋವಾದಲ್ಲಿ ಇದು ಮೊದಲೇನಲ್ಲ. 2008ರಲ್ಲಿ ಲಾರಾ ಜುನಿಗಾ ಎಂಬ ಮತ್ತೊಬ್ಬ ಸುಂದರಿಯನ್ನು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಏಳು ಜನರೊಡನೆ ಬಂಧಿಸಲಾಗಿತ್ತು. ಒಂದು ವರದಿಯ ಪ್ರಕಾರ, 2006ರಿಂದೀಚೆಗೆ ಮಾದಕ ವಸ್ತು ಕಳ್ಳಸಾಗಾಟಕ್ಕೆ ಸಂಬಂಧಿಸಿದ ದಾಳಿಗಳಲ್ಲಿ 47 ಸಾವಿರ ಜನ ಮೆಕ್ಸಿಕೋದಲ್ಲಿ ಹತ್ಯೆಗೀಡಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Mexican beauty was gunned down by military. Maria Susana Flores Gamez named beauty was with drug peddlers when military started firing. AK-47 rifle was found near her body. She was crowned Miss Sinaloa 2012 in February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more