• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

26/11 ದಾಳಿ : ಮುಂಬೈನಲ್ಲಿ ಭಾರೀ ಬಿಗಿಭದ್ರತೆ

By Prasad
|

ಮುಂಬೈ, ನ. 25 : ನವೆಂಬರ್ 21ರಂದು ಉಗ್ರ ಪಾತಕಿ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಿದ ಮೇಲೆ ಪ್ರತೀಕಾರ ದಾಳಿ ಮಾಡುವುದಾಗಿ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ, ಮುಂಬೈನಲ್ಲಿ ದಾಳಿ ನಡೆದ 4ನೇ ವರ್ಷದ ಹಿಂದಿನ ದಿನ ಮುಂಬೈನಲ್ಲಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ.

ಪುಣೆಯ ಯರವಾಡಾ ಜೈಲಿನಲ್ಲಿ ನೇಣುಗಂಬವೇರಿದ ಅಜ್ಮಲ್ ಕಸಬ್‌ನನ್ನು 'ಹೀರೋ' ಎಂದು ಬಣ್ಣಿಸಿದ್ದ ಪಾಕಿಸ್ತಾನದ ತಾಲಿಬಾನ್ ಕಮಾಂಡರುಗಳು, ಪ್ರತೀಕಾರವಾಗಿ ಭಾರತದ ಪ್ರಮುಖ ಪ್ರದೇಶಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು.

ತಹರೀಕ್-ಇ-ತಾಲಿಬಾನ್ ಪಾಕಿಸ್ತಾನ ಎಂಬ ಸಂಘಟನೆಯ ವಕ್ತಾರ ಎಹಸಾನುಲ್ ಎಹಸಾನ್, ಅಜ್ಮಲ್ ಅಮೀರ್ ಕಸಬ್ ಸಾವಿಗೆ ಪ್ರತಿಯಾಗಿ ಭಾರತದ ಯಾವುದೇ ಪ್ರದೇಶದಲ್ಲಿ, ಯಾವುದೇ ಕ್ಷಣ ದಾಳಿ ನಡೆಸಬಹುದು ಎಂದು ಎಂದು ಎಚ್ಚರಿಕೆ ನೀಡಿದ್ದ. ಉಗ್ರ ಸಂಘಟನೆಯ ಹೇಳಿಕೆಯನ್ನು ಹಗುರವಾಗಿ ಪರಿಗಣಸದ ಪೊಲೀಸರು ವ್ಯಾಪಕ ಭದ್ರತೆಯನ್ನು ಒದಗಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬೈನ ಎಲ್ಲಾ ಪ್ರಮುಖ ಪ್ರದೇಶಗಳನ್ನು ಪೊಲೀಸರು ಹದ್ದಿನ ಕಣ್ಣಿಟ್ಟು ಕಾಯಲಿದ್ದಾರೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತಾಜ್ ಹೋಟೆಲ್, ವಿಕ್ಟೋರಿಯಾ ಟರ್ಮಿನಸ್, ಭಾಭಾ ಪರಮಾಣು ಸಂಶೋಧನಾ ಸಂಸ್ಥೆ, ವಾಂಖೆಡೆ ಕ್ರೀಡಾಂಗಣ (ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ನಡೆದಿದೆ)ಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ನಗರದಲ್ಲಿ ಬರುವವರ ಮೇಲೆ ನಿಗಾ ಇಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು 'ನಾಕಾಬಂದಿ' ಕಲ್ಪಿಸಿದ್ದು, ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.

ಮುಂಬೈನಲ್ಲಿ ಮಾತ್ರವಲ್ಲ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರದಿಂದಿರುವಂತೆ ಗುಪ್ತಚರ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಕೂಡ ಬಸ್, ರೈಲು ನಿಲ್ದಾಣ, ಐಟಿ ಕಂಪನಿಗಳು, ಇಸ್ರೋ ಕಚೇರಿ ಮುಂತಾದ ಪ್ರದೇಶಗಳಲ್ಲಿ ಕಟ್ಟೆಚ್ಚರದಿಂದಿರುವಂತೆ ಆದೇಶ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Security has been tightened all across the city on the eve of the fourth anniversary of the 26/11 terror attack. The security has also been tightened after the Pakistan Taliban said they would attack Indian targets to avenge the 'killing' of Kasab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more