ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್ ಕೇಜ್ರಿವಾಲ ಪಕ್ಷದ ಬಗ್ಗೆ 8 ಕುತೂಹಲ ಸಂಗತಿ

By Mahesh
|
Google Oneindia Kannada News

Know the name and 8 interesting facts of Kejriwal's party
ನವದೆಹಲಿ, ನ.24: ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ ಅವರು ರಾಜಕೀಯ ಪ್ರವೇಶ ಸ್ಥಿರವಾಗುತ್ತಿದ್ದಂತೆ, ಹೊಸ ಪಕ್ಷದ ಬಗ್ಗೆ ಕುತೂಹಲ ಹೆಚ್ಚುತ್ತಿದೆ. ನಿರೀಕ್ಷೆಯಂತೆ ಶನಿವಾರ(ನ.24) ತಮ್ಮ ಹೊಸ ಪಕ್ಷಕ್ಕೆ ಆಮ್ ಆದ್ಮಿ ಪಕ್ಷ ಎಂದು ಹೆಸರಿಟ್ಟಿದ್ದಾರೆ. ದೇಶದಲ್ಲಿ ಸ್ವರಾಜ್ಯ ಸ್ಥಾಪನೆ ನಮ್ಮ ಗುರಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಟೀಂ ಅಣ್ಣಾದ ಮಾಜಿ ಸದಸ್ಯ ಅರವಿಂದ್ ಕೇಜ್ರಿವಾಲ ಅವರು ಭ್ರಷ್ಟಾಚಾರ ವಿರುದ್ದ ಭಾರತ(IAC)ಕ್ಕೂ ಪಕ್ಷಕ್ಕೂ ಸಂಪರ್ಕವಿಲ್ಲ.

ನ.26 ರಂದು ದೆಹಲಿಯ ಜಂತರ್ ಮಂತರ್ ಬಳಿ ಹೊಸ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಎಲ್ಲರೂ ಬಂದು ಭಾಗವಹಿಸಿ ಎಂದು ಟ್ವಿಟ್ಟರ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರಶಾಂತ್ ಭೂಷಣ್ ಹಾಗೂ ಇತರೆ ಕಾರ್ಯಕರ್ತರ ಜೊತೆ ಚರ್ಚಿಸಿ ಪಕ್ಷದ ಹೆಸರು ಆಯ್ಕೆ ಮಾಡಲಾಗಿದೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ. ಜನ ಸಾಮಾನ್ಯ (ಆಮ್ ಆದ್ಮಿ)ರ ಕೈಗೆ ರಾಜಕೀಯ ಶಕ್ತಿ ಕೊಡಿಸುವುದು ನಮ್ಮ ಗುರಿ ಎಂದರು.

ಅರವಿಂದ್ ಕೇಜ್ರಿವಾಲ್ ಪಕ್ಷ ಕುರಿತ ಕೆಲ ಸಂಗತಿಗಳು:
1. ಪಕ್ಷದ ಹೆಸರು: ಆಮ್ ಆದ್ಮಿ ಪಾರ್ಟಿ

2. ಪಕ್ಷದಲ್ಲಿ ಮಹಿಳೆ ಮತ್ತು ಯುವ ಜನಾಂಗಕ್ಕೆ ಮಹತ್ವರ ಸ್ಥಾನಮಾನ ನೀಡಲಾಗುವುದು. ಸ್ವರಾಜ್ಯ ಪಕ್ಷದ ಮುಖ್ಯ ಧ್ಯೇಯ

3. ಆಮ್ ಆದ್ಮಿ ಪಕ್ಷದಲ್ಲಿ ಹೈ ಕಮಾಂಡ್ ಎಂದು ಯಾರು ಇರುವುದಿಲ್ಲ.

4. ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತಕ್ಕೆ ಕಡಿವಾಣ.

5. ಪಕ್ಷದಲ್ಲಿ ಆಂತರಿಕ ಲೋಕ್ ಪಾಲ್ ಸ್ಥಾಪನೆ ಹಾಗೂ ಅದು ಪ್ರಜಾಪ್ರಭುತ್ವ ಮಾದರಿಯಲ್ಲಿರುತ್ತದೆ

6.ಭಾರತದ ಸಂವಿಧಾನದಿಂದ ಪಕ್ಷ ಸ್ಫೂರ್ತಿ ಪಡೆಯಲಿದ್ದು, ಪ್ರಗತಿ ಪರ ಚಿಂತನೆಗೆ ಮಾತ್ರ ಒತ್ತು ನೀಡಲಾಗುತ್ತದೆ

7. ಪಕ್ಷದ ಕಾರ್ಯನಿರ್ವಹಣೆಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯನ್ನು ಸ್ಥಾಪಿಸಲಾಗುವುದು. 30 ಸದಸ್ಯರ ಕಾರ್ಯಕಾರಿ ಹಾಗೂ ವಿಶೇಷ ಸಂವಿಧಾನ ಸಮಿತಿ ರಚಿಸಲಾಗುತ್ತದೆ.

8. ಪಕ್ಷದಲ್ಲಿ ಯಾರು ಮುಖಂಡರಿರುವುದಿಲ್ಲ. ಪುಢಾರಿಗಳಿಂದ ಜನ ಬೇಸತ್ತಿದ್ದಾರೆ. ಇದು ಜನರ ಪಕ್ಷ.

ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಣ್ಣುಗಳ ರಾಜ ಮಾವು, ಅರವಿಂದ್ ಅವರ ಪಕ್ಷದ ಚಿನ್ಹೆಯಾದರೆ ಅದರಲ್ಲಿ ಆಶ್ಚರ್ಯವೇನಿಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಪುದುಚೇರಿಯಲ್ಲಿ ಮಾವು ಚಿನ್ಹೆಯನ್ನು ಅಲ್ಲಿನ ಪ್ರಾದೇಶಿಕ ಪಕ್ಷವೊಂದು ಬಳಕೆ ಮಾಡುತ್ತಿದೆ. ಪಟ್ಟಾಲಿ ಮಕ್ಕಳ್ ಕಚ್ಚಿ ಚುನಾವಣಾ ಚಿನ್ಹೆ ಕೂಡಾ ಮಾವು ಆಗಿದೆ. ಹೀಗಾಗಿ ಚುನಾವಣಾ ಆಯೋಗದಿಂದ ಅರವಿಂದ್ ಅವರ ಪಕ್ಷಕ್ಕೆ ಮಾವು ಸಿಗುವ ಕಮ್ಮಿ ಎನ್ನಲಾಗಿದೆ.

ಒಂದು ವೇಳೆ ಮಾವು ಸಿಗದಿದ್ದರೆ, ಗಾಂಧಿ ತತ್ವ ಸಿದ್ಧಾಂತವನ್ನು ಪಾಲಿಸುವ ಅರವಿಂದ್ ಕೇಜ್ರಿವಾಲ ಹಾಗೂ ಬೆಂಬಲಿಗರು ಗಾಂಧಿ ಟೋಪಿ ಯನ್ನು ಚುನಾವಣೆ ಚಿನ್ಹೆಯನ್ನಾಗಿ ಬಳಸುವ ಸಾಧ್ಯತೆ ಹೆಚ್ಚಿದೆ.

English summary
Social activist-turned-politician Arvind Kejriwal and his team finally decided their party name. Announcing the name of the party, Kejriwal on Saturday, Nov 24 claimed that his party would bring "Swaraj (democracy)" in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X