• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಲಜ್ಜಾ' ತಸ್ಲೀಮಾಗೆ ಒಂಟಿ ಬದುಕು ಸಾಕಾಯಿತಂತೆ

By Srinath
|

ಕೋಲ್ಕತ್ತಾ, ನ.24: 'ನನಗೆ ತೀವ್ರ ಒಂಟಿತನ ಕಾಡುತ್ತಿದೆ. ಇಲ್ಯಾರೂ ನನಗೆ ಗೆಳೆಯರಿಲ್ಲ. ಈ ರೀತಿ ಇನ್ನೆಷ್ಟು ದಿನ ಬದುಕಲು ಸಾಧ್ಯ' ಎಂದು ಬಾಂಗ್ಲಾ ಮೂಲದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಅಲವತ್ತುಕೊಂಡಿದ್ದಾರೆ.

ಅಂದಹಾಗೆ 5 ವರ್ಷಗಳಿಂದ ಅವರು ದೆಹಲಿಯ ಅಜ್ಞಾತ ಸ್ಥಳದಲ್ಲಿ ನೆಲೆಸಿದ್ದಾರೆ. ಹಾಗಾಗಿ, ಇನ್ನೆಷ್ಟು ದಿನ ಈ ರೀತಿ ಬದುಕಲು ಸಾಧ್ಯ ಎಂದು ತಸ್ಲೀಮಾ ಹತಾಶೆ ವ್ಯಕ್ತಪಡಿಸಿದ್ದಾರೆ. 2007ರ ನ. 22ರಂದು, ಐದು ವರ್ಷ ಹಿಂದೆ ಮೂಲಭೂತವಾದಿಗಳ ಪ್ರತಿಭಟನೆಯ ನಂತರ ಒತ್ತಾಯದಿಂದಾಗಿ ತಮ್ಮ ಕೋಲ್ಕತ್ತಾ ತೊರೆದು ದೆಹಲಿಯಲ್ಲಿ ನೆಲೆಸಿದ್ದಾರೆ.

ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿರುವ ತಸ್ಲೀಮಾ ತಮ್ಮ ಒಂಟಿ ಜೀವನದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ:

ನಾನು ಮೂಲತಃ ಬಂಗಾಳಿಯವಳು. ಪಶ್ಚಿಮ ಬಂಗಾಳ ಸರಕಾರವು ನನಗೆ ಕೋಲ್ಕತ್ತಾದಲ್ಲಿ ತಂಗಲು ಅನುಮತಿ ನೀಡುವ ದಿನಕ್ಕಾಗಿ ಕಾಯುತ್ತಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಅಥವಾ ಬಾಂಗ್ಲಾದೇಶದಲ್ಲಷ್ಟೇ ನೆಲೆಸಬಲ್ಲೆ.

ಇವೆರಡನ್ನು ಹೊರತುಪಡಿಸಿ ಬೇರೆಲ್ಲೂ ನೆಲೆಸಲು ನನಗೆ ಸಾಧ್ಯವಿಲ್ಲ. ಆದರೆ ದುರದೃಷ್ಟವಶಾತ್ ಈಗ ನಾನು ಇಚ್ಛಿಸುವ ಎರಡೂ ಕಡೆ ನೆಲೆಸಲು ನನಗೆ ಅನುಮತಿ ಇಲ್ಲ. ಬೇರೆ ಯಾವುದೇ ಜಾಗ ನನಗೆ ಹೊಂದುವುದಿಲ್ಲ.

ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಜ್ಞಾತ ಸ್ಥಳದಲ್ಲಿರುವಂತೆ ನನಗೆ ಸಲಹೆ ನೀಡಲಾಗಿದೆ. ಸಮಾನ ಮನಸ್ಕರೊಂದಿಗೆ ಸಂವಾದ ನಡೆಸಲು ಸಾಮಾಜಿಕ ಜಾಲತಾಣವೊಂದೇ ನನಗೆ ಆಸರೆಯಾಗಿದೆ. ಟ್ವಿಟರ್‌ನಲ್ಲಿ ಸುಮಾರು 45,000 ಜನರ ಸಂವಾದ ಬಳಗವನ್ನು ಹೊಂದಿದ್ದೇನೆ.

ಕೋಲ್ಕತ್ತಾಕ್ಕೆ ಭೇಟಿ ನೀಡಲು ತಸ್ಲೀಮಾ ಸಲ್ಲಿಸಿರುವ ಮನವಿಗಳಿಗೆ ಪಶ್ಚಿಮ ಬಂಗಾಳ ಸ್ಪಂದಿಸಿಲ್ಲ. 5 ವರ್ಷಗಳ ಹಿಂದೆ ತಸ್ಲೀಮಾ ಅವರ ವೀಸಾ ನವೀಕರಿಸಿದಾಗ ತೀವ್ರ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದ ಕಾರಣ ಅವರನ್ನು ಕೋಲ್ಕತ್ತಾದಿಂದ ಕಳುಹಿಸಲಾಗಿತ್ತು. ತಮ್ಮ 'ಲಜ್ಜಾ' ಕಾದಂಬರಿ ವಿವಾದಕ್ಕೀಡಾದಾಗ 1994ರಲ್ಲಿ ತಸ್ಲೀಮಾ ತಾಯ್ನಾಡು ಬಾಂಗ್ಲಾವನ್ನು ತೊರೆಯಬೇಕಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangladeshi Controversial writer Taslima Nasreen wants to return to Kolkata. Controversial Bangladeshi writer Taslima Nasreen on Friday said she longed to be back in Kolkata from where she was bundled out on November 21, 2007, after violent street protests by the All India Minority Forum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more