ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂಗೆ ಜಾಮೀನು

By Mahesh
|
Google Oneindia Kannada News

RTI activist Abraham gets bail
ಬೆಂಗಳೂರು, ನ.24: ಮರಣಾಂತಿಕ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರಿಗೆ 11ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ(ನ.23) ಜಾಮೀನು ನೀಡಿದೆ.

ಅಬ್ರಹಾಂ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 11ನೇ ಎಸಿಎಂಎಂ ನ್ಯಾಯಾಧೀಶರು ಶುಕ್ರವಾರ ವಿಚಾರಣೆ ನಡೆಸಿದರು.

ಈ ವೇಳೆ ಅಬ್ರಹಾಂ ಪರ ವಕೀಲರು, ತಮ್ಮ ಕಕ್ಷಿದಾರರು ಸಾಕ್ಷಿಗೆ ಬೆದರಿಕೆ ಹಾಕಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಅಲ್ಲದೆ, ಪೊಲೀಸರು ಹೇಳುವ ರೀತಿ ಅಬ್ರಹಾಂ ಅವರು ತಲೆಮರೆಸಿಕೊಂಡಿಲ್ಲ. ಹಲವು ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ
ಹಾಜರಾಗಿ ವಾದ ಮಂಡಿಸಿದ್ದಾರೆ.

ಇದಲ್ಲದೆ, 2001ರ ದೂರಿನ ವಿಚಾರವಾಗಿ ಹಲವು ಬಾರಿ ಪೊಲೀಸರ ಬಳಿ ಮಾಹಿತಿ ಕೋರಿದಾಗ ರಾಜನ್ ಚೌಧರಿ ದಾಖಲಿಸಿದ್ದ ಪ್ರಕರಣಕ್ಕೆ ಬಿ ರಿಪೋರ್ಟ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಕೊಟ್ಟರು.

ವಕೀಲರ ವಾದ ಆಲಿಸಿದ ನ್ಯಾಯಾಧಿಶರು 2 ಸಾವಿರ ರೂ. ಬಾಂಡ್ ಸೇರಿದಂತೆ ಇನ್ನಿತರ ಷರತ್ತು ವಿಧಿಸಿ ಅಬ್ರಹಾಂಗೆ ಜಾಮೀನು ಮಂಜೂರು ಮಾಡಿದರು.

ಅಶೋಕ್ ಖೇಣಿಯ ನೈಸ್ ರಸ್ತೆ ಯೀಜನೆಯಲ್ಲಿ ನಡೆದಿರುವ ಅಪಾರ ಭ್ರಷ್ಟಾಚಾರದ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಟಿಜೆ ಅಬ್ರಹಾಂ ಅವರು ಬೆಂಗಳೂರಿನಲ್ಲಿ ಬಾಣಸವಾಡಿ ಪೊಲೀಸರಿಂದ ಬಂಧನಕ್ಕೊಳಗಾದ ವೇಳೆ ಹೀಗೆ ಹೇಳಿದ್ದರು.

'ನನ್ನ ಬಂಧನ ನಿರೀಕ್ಷಿತವಾಗಿತ್ತು. ನನ್ನ ವಿರುದ್ಧ ನನಗೇ ಗೊತ್ತಿಲ್ಲದ ಪ್ರಕರಣದ ವಾರಂಟ್ ತಂದು ಬಾಣಸವಾಡಿ ಪೊಲೀಸರು ಬಂಧಿಸಿದ್ದರು. ಇದರಲ್ಲಿ ನನ್ನ ಎದುರಾಳಿಗಳೆಲ್ಲಾ ಸೇರಿ ನನ್ನನ್ನುಬಂಧಿಸಲು ಒತ್ತಡ ಹೇರಿದ್ದಾರೆ. ನನ್ನನ್ನು ಮಟ್ಟಹಾಕಲು ಈ ಕುತಂತ್ರ ಮಾಡಲಾಗಿದೆ. ಗೃಹ ಸಚಿವ ಆರ್ ಅಶೋಕ್ ಅವರೂ ನನ್ನನ್ನು ಬಂಧಿಸಲು ಪೊಲೀಸರಿಗೆ ತಿಳಿಸಿದ್ದಾರೆ' ಎಂದು ಅಬ್ರಹಾಂ ದೂರಿದ್ದರು.

ಈಗಾಗಲೇ ಅಬ್ರಹಾಂ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ದೇವೆಗೌಡ, ಎಸ್ಎಂ ಕೃಷ್ಣ, ಯಡಿಯೂರಪ್ಪ ವಿರುದ್ಧ ನೈಸ್ ಕಾರಿಡಾರ್ ಯೋಜನೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಅದಲ್ಲದೆ ತಮ್ಮ ಮಾಜಿ ರೂಮ್ ಮೇಟ್, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಡಿನೋಟಿಫಿಕೇಶ್ ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

2001ರಲ್ಲಿ ರಾಮಸ್ವಾಮಿ ಪಾಳ್ಯದಲ್ಲಿ ಟಿಜೆ ಅಬ್ರಹಾಂ ವಾಸವಾಗಿದ್ದರು. ಇವರು ಮನೆಯ ಮೊದಲ ಮಹಡಿಯಲ್ಲಿ ಕಂಪ್ಯೂಟರ್‌ ಬಿಡಿ ಭಾಗಗಳ ಮಾರಾಟಗಾರ ರಾಜನ್‌ ಚೌಧರಿ ಎಂಬುವರು ನೆಲೆಸಿದ್ದು, ಮನೆಯ ಸಮೀಪ ವಾಹನ ನಿಲುಗಡೆಯ ವಿಚಾರವಾಗಿ ಅಬ್ರಹಾಂ ಮತ್ತು ಚೌಧರಿ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆಗ ಕೋಪಗೊಂಡ ಅಬ್ರಹಾಂ, ಚೌಧರಿಗೆ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದರು.

ಈ ಪ್ರಕರಣದಲ್ಲಿ ಬಂಧಿತರಾದ ಅವರನ್ನು ಮೆಯೋಹಾಲ್‌ನ 11 ACMM ನ್ಯಾಯಾಲಯ ಡಿ. 4ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹಾಗಾಗಿ, ಅಬ್ರಹಾಂ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದರು. 'ಪೊಲೀಸರು ಬಂಧಿಸಿರುವುದು ನಿರೀಕ್ಷಿತವಾಗಿದ್ದು, ನ್ಯಾಯ ಸಿಗುವ ವಿಶ್ವಾಸ ಇದೆ. ಯಾವುದೇ ಕಾರಣಕ್ಕೂ ನೈಸ್‌ ವಿರುದ್ಧದ ಹೋರಾಟವನ್ನು ಕೈಬಿಡುವುದಿಲ್ಲ' ಎಂದು ಅಬ್ರಹಾಂ ಹೇಳಿದ್ದರು.

English summary
Social activist T J Abraham, who was arrested in connection with a 12-year-old assault case, was granted bail by the 11th Additional Chief Metropolitan Magistrate Court here on Friday(Nov.23).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X