ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ. 25ಕ್ಕೆ ಬಾಬಾ ಬುಡನ್ ಗಿರಿ ದತ್ತ ಪೀಠ ಪ್ರವೇಶ

By Mahesh
|
Google Oneindia Kannada News

Bababudangiri shrine set to re-open
ಚಿಕ್ಕಮಗಳೂರು, ನ.23: ಈ ತಿಂಗಳ25ರಿಂದ ಎಲ್ಲ ಭಕ್ತರಿಗೂ ದತ್ತ ಗುಹೆಗೆ ನಿರಂತರವಾಗಿ ಪ್ರವೇಶ ಮತ್ತು ದತ್ತ ಪಾದುಕೆಗಳ ಮುಕ್ತ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಅಂಜನ್ ಕುಮಾರ್ ಹೇಳಿದ್ದಾರೆ.

ನ.25ರಂದು ಶ್ರೀರಾಮಸೇನೆ ಸಂಘಟನೆಯು ದತ್ತಮಾಲೆ ಅಭಿಯಾನ ಆಚರಿಸಲಿದೆ. ಅಂದು ದತ್ತಪೀಠಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೂ ಗುಹೆ ಪ್ರವೇಶ ಮತ್ತು ದತ್ತ ಪಾದುಕೆಗಳ ದರ್ಶನಕ್ಕೆ ಅವಕಾಶ ನೀಡಲಾಗುತ್ತಎ. ಈ ಪದ್ಧತಿ ವರ್ಷದ ಎಲ್ಲಾ ದಿನವೂ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.

ದತ್ತಗುಹೆ ಕುಸಿತಕ್ಕೊಳಗಾಗಿದ್ದ ಕಾರಣ ಪಾದುಕೆಗಳನ್ನು ಬೇರಡೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲದೆ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರಿಗೆ ಗುಹೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

ಇದೀಗ ಗುಹೆ ದುರಸ್ತಿ ಪೂರ್ಣಗೊಂಡಿದೆ. ದತ್ತ ಪಾದುಕೆಗಳನ್ನು ಗುಹೆಯಲ್ಲಿ ಪುನರ್ ಸ್ಥಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೆ ಇದ್ದಂತೆ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಭಕ್ತರಿಗೆ ಮುಕ್ತ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದರು.

ಇನ್ನುಳಿದಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ 1975ಹಿಂದೆ ಇದ್ದ ಪದಟಛಿತಿಯಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಅವಕಾಶ ಇದೆ. ಅದರಂತೆ ಪಾದುಕೆಗಳಿಗೆ ಹೂಗಳನ್ನು ಸಮರ್ಪಿಸಿ ನಂದಾದೀಪ ಬೆಳಗಿಸಲಾಗುತ್ತದೆ. ಬರುವ ಭಕ್ತಾದಿಗಳಿಗೆ ತೀರ್ಥ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ನ.25ರಂದು ದತ್ತಮಾಲಾಧಾರಿಗಳು ಕೊಂಡೊಯ್ಯುವ ಇರುಮುಡಿಯನ್ನು ಗುಹೆಯ ಹೊರಭಾಗದಲ್ಲಿ ನಿಗದಿತ ಸ್ಥಳದಲ್ಲಿ ಒಪ್ಪಿಸಬೇಕು. ಭಕ್ತಾದಿಗಳಿಗೆ
ಕುಡಿಯುವ ನೀರು, ಶೌಚಾಲಯ, ಸ್ನಾನದ ಕೊಠಡಿ, ವೈದ್ಯಕೀಯ ಸೇವೆ ಇನ್ನಿತರೆ ಸೌಲಭ್ಯಗಳನ್ನೊಳಗೊಂಡ ತಾತ್ಕಾಲಿಕ ಟೆಂಟ್‌ಗಳನ್ನು ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

ನ. 25ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಕೈಮರ ಚೆಕ್ ಪೋಸ್ಟ್‌ನಿಂದ ವಾಹನಗಳನ್ನು ದತ್ತಪೀಠಕ್ಕೆ ಬಿಡಲಾಗುವುದು. ನಂತರ ಭಕ್ತಾದಿಗಳನ್ನು ಹೊತ್ತು ತರುವ ಯಾವುದೇ ವಾಹನಗಳನ್ನು ಬಿಡುವುದಿಲ್ಲ. ಪೀಠದ ಬಳಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಇಲ್ಲಿ ಅಪಾಯಕಾರಿ ಸ್ಥಿತಿ ಇರುವ ಕಾರಣ ವಾಹನ ಚಾಲಕರು ಎಚ್ಚರಿಕೆ ವಹಿಸಬೇಕು.

ಸದ್ಯಕ್ಕೆ ರಸ್ತೆಯ ಒಂದು ಬದಿಯಲ್ಲಿ ತಾತ್ಕಾಲಿಕ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು. ದತ್ತಮಾಲಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳು ಪೀಠಕ್ಕೆ ವೀಡಿಯೋ ಕ್ಯಾಮೆರಾ, ಮೊಬೈಲ್‌ಗಳನ್ನು ಕೊಂಡೊಯ್ಯುವಂತಿಲ್ಲ. ಪೀಠದ ಪರಿಸರದಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ. ಕಾರ್ಯಕ್ರಮಕ್ಕೆ ನಗರ ಮತ್ತು ಪೀಠದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ ಎಂದರು.

English summary
The Guru Dattatreya Bababudan Swami Dargah atop Bababudangiri, Chikmagalur will be opened for devotees from Nov.25 said Dc Anjankumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X