ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಗುಲ ಅರ್ಚಕರ ಸಂಬಳ ಕೊನೆಗೂ ಏರಿಕೆ

By Mahesh
|
Google Oneindia Kannada News

Temple archaks get salary hike
ಬೆಂಗಳೂರು, ನ.22 : ಕೊನೆಗೂ ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳ ಅರ್ಚಕರ ಕಡೆಗೆ ಭಗವಂತ ಕಣ್ಣು ಬಿಟ್ಟಿದ್ದಾನೆ. 'ತಟ್ಟೆ ಕಾಸು ನೆಚ್ಚಿಕೊಂಡು ಬದುಕು ಸಾಗಿಸಲು ಸಾಧ್ಯವಿಲ್ಲ. ಬರುವ ಸಂಬಳ ಏನಕ್ಕೂ ಸಾಲಲ್ಲ' ಎಂದು ಮಂತ್ರ ಜಪಿಸುತ್ತಿದ್ದ ಅರ್ಚಕರ ಸಮೂಹಕ್ಕೆ ಶುಭ ಸುದ್ದಿ ಸಿಕ್ಕಿದೆ.

ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳ ವಾರ್ಷಿಕ ತಸ್ದಿಕ್ ಹಣವನ್ನು 12 ಸಾವಿರದಿಂದ 24 ಸಾವಿರ ರೂ. ಳಿಗೆ ಹೆಚ್ಚಿಸಿ ಸರ್ಕಾರ ಸದ್ಯದಲ್ಲೇ ಆದೇಶ ಹೊರಡಿಸಲಿದೆ. ಇದರ ಜೊತೆಗೆ ಸಂಬಳದಲ್ಲೂ 2,000 ರು ಏರಿಕೆಯಾಗಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ವಾರ್ಷಿಕ ತಸ್ತಿಕ್ ಹಣ ಹೆಚ್ಚಳ ರಾಜ್ಯದ ಸುಮಾರು 27 ಸಾವಿರ ದೇವಾಲಯಗಳ ಅರ್ಚಕರಿಗೆ ಆಗಲಿದೆ. ಇದರಿಂದ ಸರ್ಕಾರಕ್ಕೆ 24 ರಿಂದ 40 ಕೋಟಿ ರೂಪಾಯಿ ಹೆಚ್ಚಿನ ಹೊರೆಬೀಳಲಿದೆ ಎಂದು ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಚಿವರು, ಅರ್ಚಕರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಹೊಂದಿದೆ. ಎಲ್ಲ ಅರ್ಚಕರು ಆರ್ಥಿಕವಾಗಿ ಚೆನ್ನಾಗಿದ್ದಾರೆಂದು ಹೇಳಲಾಗದು.

ಆಯ್ದ ಅರ್ಚಕರಿಗೆ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಏಳೆಂಟು ಲಕ್ಷ ರೂಪಾಯಿಗಳಲ್ಲಿ ಮನೆ ನಿರ್ಮಿಸಿ ಕೊಡುವ ಯೋಜನೆ ಇದೆ ಎಂದರು. ವಿಮಾ ಪರಿಹಾರ ಕಾರ್ಮಿಕರು, ಮೀನುಗಾರರಿಗೆ ಇರುವಂತೆಯೇ ಅರ್ಚಕರಿಗೂ ವಿಮಾ ಪರಿಹಾರ ನೀಡುವ ಬಗ್ಗೆಯೂ ಯೋಜನೆಯಿದೆ,

ಅರ್ಚಕರಿಗೆ ಸೂಕ್ತ ತರಬೇತಿ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಡಿ. 8ರಂದು ಮಂಗಳೂರಿನಲ್ಲಿ ಜಿಲ್ಲಾ ಅರ್ಚಕರ ಸಮಾವೇಶ ನಡೆಯಲಿದೆ. ಇಂತಹ ಸಮಾವೇಶವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾಡಬೇಕೆಂಬ ಬಗ್ಗೆ ಆಲೋಚನೆ ಇದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ಅರ್ಚಕರ ಸೇವಾ ನಿಯಮ-ಸಮಿತಿ ದೇವಾಲಯಗಳ ಸಿಬ್ಬಂದಿಗೆ ಸೇವಾ ನಿಯಮಗಳನ್ನು ರೂಪಿಸಲು ನಿವೃತ್ತ ನ್ಯಾಯಮೂರ್ತಿ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಈ ಸಮಿತಿಯು ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರನ್ನು ಒಳಗೊಂಡಿರುತ್ತದೆ.

ಅಲ್ಲದೆ, ರಾಜ್ಯದ ಪ್ರಮುಖ 25 ದೇವಾಲಯಗಳಲ್ಲಿ ಗೋಶಾಲೆಗಳನ್ನೂ ಕೂಡ ತೆರೆಯಲಾಗುವುದು. ದೇವಾಲಯಗಳಲ್ಲಿ 5 ರಿಂದ 10 ಎಕರೆ ಜಾಗ ಇದ್ದರೆ ಈ ಯೋಜನೆ ಜಾರಿಗೆ ತರಲಾಗುವುದು ಹೇಳಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದೇವಾಲಯಗಳಲ್ಲಿ ಭಿಕ್ಷುಕರನ್ನು ನಿಯಂತ್ರಣ ಮಾಡಲಾಗುವುದು. ಇವೆಲ್ಲಾ ಯೋಜನೆಗಳ ಬಗ್ಗೆ ಇನ್ನೂ 15 ದಿನದೊಳಗೆ ರೂಪರೇಷೆ ತಯಾರಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಒಟ್ಟು 34,000 ದೇಗುಲಗಳು ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಗೋಶಾಲೆ-ವೃದ್ಧಾಶ್ರಮ ಮುಜರಾಯಿ ಇಲಾಖೆಯ ಪ್ರಮುಖ ದೇವಾಲಯಗಳಲ್ಲಿ ಗೋಶಾಲೆ, ವೃದ್ಧಾಛಿಶ್ರಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು.

ಕೊಲ್ಲೂರಿನಲ್ಲಿ ಮಹಿಳೆಯರಿಗೆ, ಕುಕ್ಕೆ ಸುಬ್ರಮಣ್ಯದಲ್ಲಿ ಪುರುಷರಿಗೆ, ಗುಲ್ಬರ್ಗ ಗಾಣಿಗಪುರದಲ್ಲಿರುವ ದತ್ತಾತ್ತ್ರೇಯ ದೇವಾಲಯದಲ್ಲಿ ಬುದ್ಧಿಮಾಂದ್ಯರಿಗೆ, ಮಲೆಮಹದೇಶ್ವರ ಮತ್ತು ಸವದತ್ತಿ ರೇಣುಕಾಂಬ ದೇವಾಲಯಗಳಲ್ಲಿ ವೃದ್ಧಾಶ್ರಮಗಳ ತೆರೆಯಲು ಧಾರ್ಮಿಕ ಪರಿಷತ್ ಮಂಡಳಿ ಸಭೆ ನಿರ್ಣಯಿಸಿದೆ ಎಂದರು.

English summary
Here is some good news for employees of muzrai temples. The state government has decided to hike their salaries by Rs 2000. This apart, the annual tasdiq (honorarium) being given to muzrai temples will be doubled from Rs 12,000 to Rs 24,000 said minister Kota Srinivas Poojary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X