ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಅಜ್ಮಲ್ ಕಸಬನನ್ನು ನೇಣಿಗೇರಿಸಿದ Operation X

By Srinath
|
Google Oneindia Kannada News

26/11 terrorist Ajmal Kasab hanged Operation X GOI Maharashtra Govt
ಪುಣೆ, ನ. 21: ಮುಂಬೈ ದಾಳಿಕೋರ ಅಜ್ಮಲ್ ಕಸಬ್ ನನ್ನು ಗಲ್ಲಿಗೆ ಹಾಕಿರುವುದು ಹೀನ ಅಧ್ಯಯವಾಗಿ ಈಗಾಗಲೇ ಚರಿತ್ರೆಯ ಪುಟ ಸೇರಿದೆ. ಭಾರತ ಸರಕಾರ ಮತ್ತು ಮಹಾರಾಷ್ಟ್ರ ಸರಕಾರ ಅತ್ಯಂತ ಕರಾರುವಕ್ಕಾಗಿ ಈ ಕಾರ್ಚಾರಣೆಯನ್ನು ಮಾಡಿಮುಗಿಸಿದೆ. ಸೋಜಿಗದ ಸಂಗತಿಯೆಂದರೆ ಇಡೀ ಕಾರ್ಯಾಚರಣೆಗೆ ಭಾರತ ಸರಕಾರ Operation X ಎಂದು ನಾಮಕರಣ ಮಾಡಿತ್ತು.

ಅಜ್ಮಲ್ ಕಸಬನಂತಹ ಅನೇಕಾನೇಕ ಉಗ್ರರನ್ನು ಹುಟ್ಟುಹಾಕಿದ ಒಸಾಮಾ ಬಿನ್ ಲಾಡೆನ್ ನನ್ನೂ ಅಮೆರಿಕದ ಸೀಲ್ ತಂಡವು ಹೀಗೇ Operation Neptune Spear ಹೆಸರಿನಲ್ಲಿ ಜಗತ್ತಿಗೆ ತಿಳಿಯದಂತೆ ಹೊಡೆದು ಸಾಯಿಸಿತ್ತು. ಇದೀಗ ಭಾರತ ಸರಕಾರದ ಟಾಪ್ ಸೀಕ್ರೆಟ್ Operation X ... ಅದರ ವಿವರ ಇಲ್ಲಿದೆ:

ನವೆಂಬರ್ 5: ರಾಷ್ಟ್ರಪತಿ ಪ್ರಣಬ್ ದಾ ಕ್ಷಮಾದಾನ ತಿರಸ್ಕರಿಸುತ್ತಿದ್ದಂತೆ ಕಸಬ್ ಸಾವಿಗೆ ಮಹೂರ್ತ ನಿಗದಿಯಾಯಿತು.
ಸ್ಪೆಷಲ್ ಐಜಿ ದೇವನ್ ಭಾರ್ತಿಗೆ ಪೌರೋಹಿತ್ಯ ವಹಿಸಿಕೊಳ್ಳಲು ಆದೇಶ. ಅವರನ್ನು ಬಿಟ್ಟರೆ ಇಡೀ ವಿಷಯ ಗೊತ್ತಾಗಿದ್ದು ಇತರೆ 16 ಮಂದಿಗೆ ಮಾತ್ರ. ಅಷ್ಟು ಕರಾರುವಾಕ್ಕು ಕಾರ್ಯಾಚರಣೆ.
ನವೆಂಬರ್ 7: ಕಸಬ್ ನನ್ನು ನೇಣಿಗೆ ಹಾಕುವಂತೆ ಸಲಹೆ ಮಾಡಿ, ಕೇಂದ್ರ ಗೃಹ ಸಚಿವರಿಂದ ಅಧಿಕೃತ ಆದೇಶಕ್ಕೆ ಸಹಿ.
ನವೆಂಬರ್ 8: ಕಸಬ್ ನನ್ನು ನೇಣಿಗೆ ಹಾಕುವಂತೆ ಸೂಚಿಸಿ, ಕೇಂದ್ರ ಗೃಹ ಸಚಿವರಿಂದ ಮಹಾರಾಷ್ಟ್ರ ಸರಕಾರಕ್ಕೆ ಅಧಿಕೃತ ಮಾಹಿತಿ/ ಆದೇಶ.
ನವೆಂಬರ್ 8: ತಕ್ಷಣ ಸ್ಪಂದಿಸಿದ ಮಹಾರಾಷ್ಟ್ರ ಸರಕಾರ ಕಸಬ್ ನನ್ನು ನವೆಂಬರ್ 21ರಂದು (ಅಂದರೆ ಇಂದು) ನೇಣಿಗೆ ಹಾಕುವುದಕ್ಕೆ ಮಹೂರ್ತ ಫಿಕ್ಸ್.
ನವೆಂಬರ್ 18: ಕ್ಷಮಾದಾನ ತಿರಸ್ಕೃತವಾಗಿದೆ ಎಂದು ನೇಣುಶಿಕ್ಷೆಯ ಡೆತ್ ವಾರಂಟ್ ಬಗ್ಗೆ ಕಸಬ್ ಗೆ ತಿಳಿಸಿ ಹೇಳಲಾಯಿತು. ಬಳಿಕ ಅದಕ್ಕೆ ಅವನ ಸಹಿ ಹಾಕಿಸಿಕೊಳ್ಳಲಾಯಿತು.
ನವೆಂಬರ್ 19: ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಪುಣೆಯ ಯರವಾಡ ಜೈಲಿಗೆ ಶಿಫ್ಟ್.
ನವೆಂಬರ್ 21: ಬೆಳಗ್ಗೆ 7.30ಕ್ಕೂ ಮುನ್ನ 'ಅಂತಿಮ ಆಸೆ' ಎಂದು ಕೇಳಲಾಗಿ 'ಏನೂ ಇಲ್ಲ' ಎಂದುತ್ತರಿಸಿದ ಕಸಬ್.
ನವೆಂಬರ್ 21 ಬೆಳಗ್ಗೆ 7.30ಕ್ಕೆ ಸರಿಯಾಗಿ ನೇಣುಶಿಕ್ಷೆ ಜಾರಿ. 25 ವರ್ಷದ ಕಸಬ್ ಗೆ ನೇಣು ಹಾಕಿದ್ದು ಔರಂಗಾಬಾದಿನ ವ್ಯಕ್ತಿ.
ನವೆಂಬರ್ 21 ಬೆಳಗ್ಗೆ 7.35ಕ್ಕೆ ಕಸಬ್ ಸಾವಿನ ಬಗ್ಗೆ ಸಾರ್ವಜನಿಕ ಪ್ರಕಟಣೆ.
ನವೆಂಬರ್ 21 ಬೆಳಗ್ಗೆ 9.30ಕ್ಕೆ ಯರವಾಡ ಜೈಲಿನಲ್ಲಿ ಮುಸ್ಲಿಂ ವಿಧಿವಿಧಾನದಂತೆ ಕಸಬ್ ಸಮಾಧಿ.

English summary
26/11 terrorist Ajmal Kasab hanged Operation X GOI Maharashtra Govt. Ajmal Kasab's execution was code named Operation X. Led by Special IG (law and order) Devan Bharti, the process began on november 5 itself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X