ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ಕತೆ ಮುಗೀತು, ಅಫ್ಜಲ್ ಗೆ ಗಲ್ಲು ಯಾವಾಗ? : ಮೋದಿ

By Mahesh
|
Google Oneindia Kannada News

 Modi ask what about Afzal guru
ನವದೆಹಲಿ, ನ,21 : ಮುಂಬೈ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಲಾಗಿದೆ. ಆದರೆ, ಇದಕ್ಕೂ ಮುನ್ನ ಹೇಯ ಕೃತ್ಯ ಎಸೆಗಿದ ಅಫ್ಜಲ್ ಗುರು ಕತೆ ಏನು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲ ತಾಣ ಟ್ವೀಟರ್ ನಲ್ಲಿ ನರೇಂದ್ರ ಮೋದಿ ಕೇಳಿರುವ ಪ್ರಶ್ನೆ ಸದ್ಯಕ್ಕೆ ದಿನದ ಟಾಪ್ ಟ್ವೀಟ್ ಆಗಿದ್ದು, ಇನ್ನೂ ಸದ್ದು ಮಾಡುತ್ತಿದೆ.

@narendramodi : What about Afzal Guru, who attacked Parliament, our temple of democracy, in 2001? That offence predates Kasab's heinous act by many years. ಎಂದು ಟ್ವೀಟ್ ಮಾಡಿದ್ದರು. ಸುಮಾರು 650 ಜನ ಇದನ್ನು ರೀಟ್ವೀಟ್ ಮಾಡಿದ್ದಾರೆ.

ಸಂಸತ್ ಮೇಲೆ ದಾಳಿ ನಡೆಸಿ ಮರಣದಂಡನೆ ಶಿಕ್ಷೆ ಗುರಿಯಾಗಿರುವ ಉಗ್ರ ಅಫ್ಜಲ್ ಗುರುನನ್ನು ಏಕೆ ಗಲ್ಲಿಗೇರಿಸುತ್ತಿಲ್ಲ ಎನ್ನುವುದು ನರೇಂದ್ರ ಮೋದಿ ಜೊತೆಗೆ ಎಲ್ಲಾ ಬಿಜೆಪಿ ಮುಖಂಡರ ಪ್ರಶ್ನೆಯಾಗಿದೆ.

ಕೇಂದ್ರದಲ್ಲಿರುವ ಯುಪಿಎ ಮತ್ತು ದೆಹಲಿಯಲ್ಲಿರುವ ಶೀಲಾ ದಿಕ್ಷೀತ್ ನೇತೃತ್ವದ ಕಾಂಗ್ರೆಸ್ ಸರ್ಕಾರಗಳಿಗೆ ಈ ಪಾಪಿಯನ್ನು ನೇಣಿಗೇರಿಸಲು ಮನಸ್ಸಾಗುತ್ತಿಲ್ಲ. ಗಲ್ಲಿಗೇರಿಸದಿರಲು ಕಾರಣವೇನು ಎಂಬುದರ ಬಗ್ಗೆ ಭಾರ್ ಚರ್ಚೆ ನಡೆದಿದೆ.

ಅಫ್ಜಲ್ ಗುರುಗೆ ನೇಣಿಗೇರಿಸಿಲ್ಲ ಏಕೆಂದರೆ ?: ವಾಡಿಕೆಯಂತೆ ಕಾನೂನು ರೀತಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯೊಬ್ಬ ರಾಷ್ಟ್ರಪತಿ ಜೀವದಾನಕ್ಕೆ ಅರ್ಜಿ ಸಲ್ಲಿಸಿದ ನಂತರ ರಾಷ್ಟ್ರಪತಿಗಳು ಅಪರಾಧಿ ಸಲ್ಲಿಸಿದ ಅರ್ಜಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸುತ್ತಾರೆ.

ಕೇಂದ್ರ ಸರಕಾರ ಸಂಬಂಧಪಟ್ಟ ರಾಜ್ಯ ಸರಕಾರಕ್ಕೆ ಕಳುಹಿಸುತ್ತದೆ. ಈ ಹಿಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರಕ್ಕೆ ಅರ್ಜಿ ಕಳುಹಿಸಿದ್ದರು. ಕೇಂದ್ರ ಸರಕಾರ ಸಂಬಂಧಪಟ್ಟ ದೆಹಲಿ ರಾಜ್ಯ ಸರಕಾರಕ್ಕೆ ಗುರು ಸಲ್ಲಿಸಿದ್ದ ಜೀವದಾನ ಅರ್ಜಿಯ ಬಗ್ಗೆ ಸರಕಾರದ ಅಭಿಪ್ರಾಯ ಪಡೆದುಕೊಳ್ಳಬೇಕಿತ್ತು.

2006ರಲ್ಲಿ ಅಂದಿನ ಯುಪಿಎ ಸರಕಾರದ ಗೃಹ ಸಚಿವಾಲಯ ದೆಹಲಿ ಸರಕಾರಕ್ಕೆ ನೋಟಿಸ್ ನೀಡಿ ಹೇಳಿಕೆ ನೀಡುವಂತೆ ಸೂಚಿಸಿತ್ತಂತೆ. ಆದರೆ, ದೆಹಲಿ ಸರಕಾರ ಮಾತ್ರ ಗುರುನ ಅರ್ಜಿಯನ್ನು ಮೂಲೆಗೆ ಎಸೆದಿರುವ ಅಂಶ ಬೆಳಕಿಗೆ ಬಂದಿದೆ.

ರಾಜ್ಯ ಸರಕಾರದ ಹೇಳಿಕೆ ಬಂದಿಲ್ಲವಾದ್ದರಿಂದ ಗುರು ಶಿಕ್ಷೆ ತಡವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಆದರೆ, ಈ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್, ಅಫ್ಜಲ್ ಗುರುಗೆ ಸಂಬಂಧಿಸಿದಂತೆ ನಮಗೆ ಯಾವ ಪತ್ರವೂ ಬಂದಿಲ್ಲ ಎಂದು ಹೇಳಿದ್ದಾರೆ.

2006ರಲ್ಲೇ ಪತ್ರ ರವಾನಿಸಿದ ಕೇಂದ್ರ ಸರಕಾರ ನಾಲ್ಕು ನಿದ್ದೆ ಮಾಡುತ್ತಾ ಕುಳಿತಿದೆ. ಕೇಂದ್ರದಿಂದ ರಾಜ್ಯ ಸರಕಾರಕ್ಕೆ ಬಂದಿರುವ ಪತ್ರದ ಬಗ್ಗೆ ಮುಖ್ಯಮಂತ್ರಿಗೆ ಗೊತ್ತಿಲ್ಲ ಎಂದು ಹೇಳುತ್ತಿರುವ ಶೀಲಾ ದಿಕ್ಷೀತ್ ಅವರ ಮಾತು ಎಷ್ಟು ನಿಜ ?

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ವಕ್ತಾರ ರಾಜೀವ ಪ್ರತಾಪ್ ರೂಡಿ, ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದಾರೆ. ಅಫ್ಜಲ್ ಗುರು ಡಿಸೆಂಬರ್ 13, 2001 ರಲ್ಲಿ ಅರೋಪಿಯಾಗಿ, 2004ರಲ್ಲಿ ಮರಣದಂಡನೆ ಸುಪ್ರೀಂಕೋರ್ಟಿನಿಂದ ಮರಣದಂಡನೆ ಶಿಕ್ಷೆ ಪಡೆದರೂ ಕಸಬ್ ಪ್ರಕರಣಕ್ಕೆ ರಾಷ್ಟ್ರಪತಿ ಅಂಕಿತ ಬಿದ್ದಿದ್ದು ಏಕೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

English summary
What about Afzal Guru, who attacked Parliament, our temple of democracy, in 2001? That offence predates Kasab’s heinous act by many years tweets Gujarat CM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X